ಡ್ರಗ್ಸ್ ಜಾಲದಲ್ಲಿ ರಿಯಾ ಚಕ್ರವರ್ತಿ, ಇಂದು ಕೂಡ ಎನ್‍ಸಿಬಿ ಯಿಂದ ತೀವ್ರ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.7-ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಬಾಲಿವುಡ್‍ನ ಕೆಲವು ನಟ-ನಟಿಯರ ಡ್ರಗ್ಸ್ ದುಶ್ಚಟ ಮತ್ತು ಮಾದಕ ವಸ್ತು ಪೂರೈಕೆಯ ವ್ಯವಸ್ಥಿತ ದಂಧೆಯನ್ನು ಬಹಿರಂಗಗೊಳಿಸಿದೆ.

ಈ ಸಾವಿನ ಹಿಂದೆ ಮಾದಕ ವಸ್ತುವಿನ ವ್ಯವಸ್ಥಿತ ಜಾಲದ ಬೇರುಗಳು ಒಂದೊಂದಾಗಿ ಹೊರಬರುತ್ತಿವೆ. ಬಾಲಿವುಡ್ ನಟನ ಆತ್ಮಹತ್ಯೆಗೆ ಪ್ರಚೋದನೆ ನೀಡಿದರೆನ್ನಲಾದ ಆರೋಪಕ್ಕೆ ಗುರಿಯಾಗಿರುವ ಚಿತ್ರ ನಟಿ ಮತ್ತು ಸುಶಾಂತ್ ಗೆಳತಿ ರಿಯಾ ಈಗ ಡ್ರಗ್ಸ್ ಪೂರೈಕೆ ಜಾಲದಲ್ಲಿ ಸಿಲುಕಿದ್ದಾರೆ.

ಸುಶಾಂತ್ ಅವರಿಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪದ ಸಂಬಂಧ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ) ಇಂದು ಕೂಡರಿಯಾ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ನಿನ್ನೆಕೂಡ ಎನ್‍ಸಿಬಿ ಅಧಿಕಾರಿಗಳು ರಿಯಾರನ್ನುಆರು ತಾಸುಗಳಿಗೂ ಹೆಚ್ಚು ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದ್ದರು.

ತಾನು ಮತ್ತುತನ್ನ ಸಹೋದರ ಸೌವಿಕ್ ಚಕ್ರವರ್ತಿ, ಸುಶಾಂತ್ ಅವರಿಗೆ ಡ್ರಗ್ಸ್ ನೀಡುತ್ತಿದ್ದ ಸಂಗತಿಯನ್ನು ರಿಯಾ ನಿನ್ನೆ ಒಪ್ಪಿಕೊಂಡ ನಂತರ ಬಾಲವುಡ್ ನಟನ ಸಾವು ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.

ರಿಯಾ ಸೂಚನೆ ಮೇರೆಗೆ ಆಕೆಯ ಸಹೋದರ ಸೌವಿಕ್ ಚಕ್ರವರ್ತಿ, ಸುಶಾಂತ್ ಅಪಾರ್ಟ್‍ಮೆಂಟ್‍ನಅಡುಗೆ ಸಹಾಯಕ ಸಾಮ್ಯುಯಲ್ ಮಿರಾಂಡಾ ಮೂಲಕ ಬಾಲಿವುಡ್ ನಟನಿಗೆ ಮಾದಕ ವಸ್ತು (ಮಾರಿಜುವಾನ) ನೀಡುತ್ತಿದ್ದ ಎಂಬ ಸಂಗತಿ ಬಯಲಾಗುತ್ತಿದ್ದಂತೆ ತನಿಖೆ ತೀವ್ರಗೊಳಿಸಿದ ಎನ್‍ಸಿಬಿ ಅಧಿಕಾರಿಗಳು ಮುಂಬೈನಲ್ಲಿರುವರಿಯಾ ಮನೆಗೆ ನಿನ್ನೆತೆರಳಿ ಸಮನ್ಸ್ ಜಾರಿಗೊಳಿಸಿ ವಿಚಾರಣೆ ಬುಲಾವ್ ನೀಡಿದರು.

ಇಂದು ಬೆಳಗ್ಗೆಯಿಂದಲೇ ಎನ್‍ಸಿಬಿ ಆಧಿಕಾರಿಗಳು ರಿಯಾ ಅವರನ್ನುಎಲ್ಲ ಆಯಾಮಗಳಿಂದಲೂ ಎರಡನೇ ದಿನದ ವಿಚಾರಣೆ ಮುಂದುವರಿಸಿದೆ. ಮೊನ್ನೆ ಸೌವಿಕ್ ಮತ್ತು ಸಾಮ್ಯಯಲ್ ಅವರನ್ನು ಎನ್‍ಸಿಬಿ ತೀವ್ರತನಿಖೆಗೆ ಒಳಪಡಿಸಿತ್ತು.

ಈ ಮಧ್ಯೆ, ಸುಶಾಂತ್ ಸಿಂಗ್ ಅವರಕಚೇರಿ ಮತ್ತು ಮನೆಯಲ್ಲಿ ಸಹಾಯಕನಾಗಿದ್ದ ದೀಪೇಶ್‍ಸಾವಂತ್ ಎಂಬಾತನನ್ನು ಸಹ ಎನ್‍ಸಿಬಿ ಅಧಿಕಾರಿಗಳು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

ನಟ ಸುಶಾಂತ್ ಸಿಂಗ್ ರಜಪೂತ್‍ಡ್ರಗ್ಸ್ ಸೇವಿಸುತ್ತಿದ್ದುದನ್ನು ನಾನು ಕೆಲವು ಬಾರಿ ನೋಡಿದ್ದೇನೆ ಎಂದು ಸಾವಂತ್ ಎನ್‍ಸಿಬಿ ಮಾಹಿತಿ ನೀಡಿದ್ದಾನೆ. ಈ ತನರಿಯಾ ಮತ್ತಿತರರನ್ನು ಎನ್‍ಸಿಬಿ ತನಿಖೆ ನಡೆಸುತ್ತಿದ್ದರೆ, ಅತ್ತ ಸಿಬಿಐ ಅಧಿಕಾರಿಗಳು ಈ ಪ್ರಕರಣದ ವಿಚಾರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

Facebook Comments