3ನೇ ದಿನದ ವಿಚಾರಣೆ ಬಳಿಕ ರಿಯಾ ಚಕ್ರವರ್ತಿ ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.8-ಬಾಲಿವುಡ್‍ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪದ ಸಂಬಂಧ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ)  ಚಿತ್ರ ನಟಿ ರಿಯಾ ಅವರನ್ನು ಕೊನೆಗೂ ಬಂಧಿಸಿದೆ.

ನಿನ್ನೆಮತ್ತು ಮೊನ್ನೆಯೂಕೂಡ ಎನ್‍ಸಿಬಿ ಅಧಿಕಾರಿಗಳು ರಿಯಾರನ್ನು ಆರು ತಾಸುಗಳಿಗೂ ಹೆಚ್ಚು ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದ್ದರು ಸುಶಾಂತ್ ಸಾವು ಪ್ರಕರಣ ಬಾಲಿವುಡ್‍ನ ಕೆಲವು ನಟ-ನಟಿಯರಡ್ರಗ್ಸ್‍ದುಶ್ಚಟ ಮತ್ತು ಮಾದಕವಸ್ತು ಪೂರೈಕೆಯ ವ್ಯವಸ್ಥಿತ ದಂಧೆಯನ್ನು ಬಹಿರಂಗಗೊಳಿಸಿದೆ.

ಈ ಸಾವಿನ ಹಿಂದೆ ಮಾದಕ ವಸ್ತುವಿನ ವ್ಯವಸ್ಥಿತ ಜಾಲದ ಬೇರುಗಳು ಒಂದೊಂದಾಗಿ ಹೊರಬರುತ್ತಿವೆ.  ಬಾಲಿವುಡ್ ನಟನಆತ್ಮಹತ್ಯೆಗೆ ಪ್ರಚೋದನೆ ನೀಡಿದರೆನ್ನಲಾದ ಆರೋಪಕ್ಕೆ ಗುರಿಯಾಗಿರುವ ಚಿತ್ರ ನಟಿ ಮತ್ತು ಸುಶಾಂತ್ ಗೆಳತಿ ರಿಯಾ ಈಗ ಡ್ರಗ್ಸ್ ಪೂರೈಕೆ ಜಾಲದಲ್ಲಿ ಸಿಲುಕಿದ್ದಾರೆ.

ಸುಶಾಂತ್ ಅವರಿಗೆ ಡ್ರಗ್ಸ್ ಪೂರೈಸುತ್ತಿದ್ದಆರೋಪದ ಸಂಬಂಧ ಮಾದಕ ತಾನು ಮತ್ತುತನ್ನ ಸಹೋದರ ಸೌವಿಕ್‍ಚಕ್ರವರ್ತಿ, ಸುಶಾಂತ್ ಅವರಿಗೆ ಡ್ರಗ್ಸ್ ನೀಡುತ್ತಿದ್ದ ಸಂಗತಿಯನ್ನುರಿಯಾ ಮೊನ್ನೆಒಪ್ಪಿಕೊಂಡ ನಂತರ ಬಾಲವುಡ್ ನಟನ ಸಾವು ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.

ರಿಯಾ ಸೂಚನೆ ಮೇರೆಗೆಆಕೆಯ ಸಹೋದರ ಸೌವಿಕ್‍ಚಕ್ರವರ್ತಿ, ಸುಶಾಂತ್ ಅಪಾರ್ಟ್‍ಮೆಂಟ್‍ನ ಅಡುಗೆ ಸಹಾಯಕ ಸಾಮ್ಯುಯಲ್ ಮಿರಾಂಡಾ ಮೂಲಕ ಬಾಲಿವುಡ್ ನಟನಿಗೆಮಾದಕ ವಸ್ತು (ಮಾರಿಜುವಾನ) ನೀಡುತ್ತಿದ್ದ ಎಂಬ ಸಂಗತಿ ಬಯಲಾಗುತ್ತಿದ್ದಂತೆತನಿಖೆ ತೀವ್ರಗೊಳಿಸಿದ ಎನ್‍ಸಿಬಿ ಅಧಿಕಾರಿಗಳು ಮುಂಬೈನಲ್ಲಿರುವರಿಯಾ ಮನೆಗೆ ಮೊನ್ನೆತೆರಳಿ ಸಮನ್ಸ್ ಜಾರಿಗೊಳಿಸಿ ವಿಚಾರಣೆ ಬುಲಾವ್‍ನೀಡಿದ್ದರು..

ಇಂದು ಬೆಳಗ್ಗೆಯಿಂದಲೇ ಎನ್‍ಸಿಬಿ ಆಧಿಕಾರಿಗಳು ರಿಯಾಅವರನ್ನುಎಲ್ಲ ಆಯಾಮಗಳಿಂದಲೂಮೂರನೇ ದಿನದ ವಿಚಾರಣೆ ಮುಂದುವರಿಸಿದೆ.  ಮೊನ್ನೆ ಸೌವಿಕ್ ಮತ್ತು ಸಾಮ್ಯಯಲ್‍ಅವರನ್ನು ಎನ್‍ಸಿಬಿ ತೀವ್ರತನಿಖೆಗೆ ಒಳಪಡಿಸಿತ್ತು.  ಈ ಮಧ್ಯೆ, ಸುಶಾಂತ್ ಸಿಂಗ್ ಅವರ ಕಚೇರಿ ಮತ್ತು ಮನೆಯಲ್ಲಿ ಸಹಾಯಕನಾಗಿದ್ದ ದೀಪೇಶ್‍ ಸಾವಂತ್‍ ಎಂಬಾತನನ್ನು ಸಹ ಎನ್‍ಸಿಬಿ ಅಧಿಕಾರಿಗಳು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

ನಟ ಸುಶಾಂತ್ ಸಿಂಗ್ ರಜಪೂತ್‍ಡ್ರಗ್ಸ್ ಸೇವಿಸುತ್ತಿದ್ದುದನ್ನು ನಾನು ಕೆಲವು ಬಾರಿ ನೋಡಿದ್ದೇನೆಎಂದು ಸಾವಂತ್ ಎನ್‍ಸಿಬಿ ಮಾಹಿತಿ ನೀಡಿದ್ದಾನೆ.  ಈತನರಿಯಾ ಮತ್ತಿತರರನ್ನು ಎನ್‍ಸಿಬಿ ತನಿಖೆ ನಡೆಸುತ್ತಿದ್ದರೆ, ಅತ್ತ ಸಿಬಿಐ ಅಧಿಕಾರಿಗಳು ಈ ಪ್ರಕರಣದ ವಿಚಾರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

Facebook Comments