ಬೈಕುಲಾ ಜೈಲಿನ ಮಹಿಳಾ ಸೆರೆಮನೆಯಲ್ಲಿ ಇಂದ್ರಾಣಿ ಜತೆ ರಿಯಾ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.10-ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪದ ಸಂಬಂಧ ಬಂಧಿತರಾದ ಚಿತ್ರನಟಿ ರಿಯಾ ಚಕ್ರವರ್ತಿ ಅವರನ್ನು ಮಂಬೈನ ಬೈಕುಲಾ ಜೂಲಿನ ಮಹಿಳಾ ಬ್ಯಾರಕ್‍ನಲ್ಲಿ ಕುಖ್ಯಾತ ಕೊಲೆ ಪ್ರಕರಣದ ಆರೋಪಿ ಇಂದ್ರಾಣಿ ಮುಖರ್ಜಿ ಜೊತೆ ಇರಿಸಲಾಗಿದೆ.

ಇಂದ್ರಾಣಿ ಮುಖರ್ಜಿ, ತನ್ನ ಪುತ್ರಿ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದು ಬೈಕುಲಾ ಜೈಲಿನಾ ಮಹಿಳಾ ಸೆರೆಮನೆಯಲ್ಲಿದ್ದಾರೆ.

ಈ ಮಧ್ಯ ಜಾಮೀನಿಗಾಗಿ ಅರ್ಜಿ ಮುಂಬೈನ ನ್ಯಾಯಾಲಯವೊಂದಕ್ಕೆ ಅರ್ಜಿ ಸಲ್ಲಿಸಿರುವ ರಿಯಾ ಚಕ್ರವರ್ತಿ, ಮಾದಕ ವಸ್ತು ನಿಯಂತ್ರಣ ಮಂಡಳಿ(ಎನ್‍ಸಿಬಿ) ಅಧಿಕಾರಿಗಳು ವಿಚಾರಣೆ ವೆಳೆ ತಾವು ಬಲವಂತವಾಗಿ ತಪ್ಪು ಒಪ್ಪಿಕೊಳ್ಳುವಂತೆ ಮಾಡಿದೆ ಎಂದು ಆರೋಪಿಸಿದ್ದಾರೆ.

ಡ್ರಗ್ಸ್ ಖರೀದಿಸುತ್ತಿದ್ದ ಮತ್ತು ಅದನ್ನು ನಟ ಸುಶಾಂತ್ ಅವರಿಗೆ ಪೂರೈಸುತ್ತಿದ್ದ ಆರೋಪದ ಮೇಲೆ ಮೂರು ದಿನಗಳ ತೀವ್ರ ವಿಚಾರಣೆ ನಂತರ ಎನ್‍ಸಿಬಿ ಅಧಿಕಾರಿಗಳು ಮೊನ್ನೆ ಸಂಜೆ ರಿಯಾ ಅವರನ್ನು ಬಂಧಿಸಿದರು.

ಮುಂಬೈನ ನ್ಯಾಯಾಲಯವೊಂದು ಸೆಪ್ಟೆಂಬರ್ 22ರವರೆಗೆ 14 ದಿನಗಳ ಕಾಲ ಸುಶಾಂತ್ ಗೆಳತಿಯನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿತು. ನಂತರ ರಿಯಾ ಅವರನ್ನು ಮೊನ್ನೆ ರಾತ್ರಿ ಎನ್‍ಸಿಬಿ ಲಾಕಪ್‍ನಲ್ಲಿ ಇರಿಸಲಾಗಿತ್ತು. ನಿನ್ನೆ ಬೆಳಗ್ಗೆ ಬೈಕುಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ.

ಬಾಲಿವುಡ್ ನಟಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ ಆಕೆ ಸುಶಾಂತ್‍ಗಾಗಿ ಮಾರಿಜುವಾನ ಮಾದಕ ವಸ್ತು ಖರೀದಿಸುತ್ತಿದ್ದರು ಎಂಬ ಸಂಗತಿ ದೃಢಪಟ್ಟಿತ್ತು. ಈಕೆ ಡ್ರಗ್ಸ್ ಜಾಲದ ಸಕ್ರಿಯ ಸದಸ್ಯೆ ಎಂದು ಎನ್‍ಸಿಬಿ ಅಧಿಕಾರಿಗಳು ಆರೋಪಿಸಿದ್ದಾರೆ.

ಮೂರು ದಿನಗಳ ವಿಚಾರಣೆ ವೇಳೆ ರಿಯಾ ಚಕ್ರವರ್ತಿ ಕೆಲವು ಮಹತ್ವದ ಸಂಗತಿಗಳನ್ನು ಬಹಿರಂಗಗೊಳಿಸಿದ್ದು, ಈ ಪ್ರಕರಣದ ಸಂಬಂದ ಚಿತ್ರತಾರೆಯರೂ ಸೇರಿದಂತೆ ಮತ್ತಷ್ಟು ಮಂದಿ ಬಂಧಿತರಾಗುವ ಸಾಧ್ಯತೆ ಇದೆ.

ಸುಶಾಂತ್ ಸಾವು ಪ್ರಕರಣ ಬಾಲಿವುಡ್‍ನ ಕೆಲವು ನಟ-ನಟಿಯರ ಡ್ರಗ್ಸ್ ದುಶ್ಚಟ ಮತ್ತು ಮಾದಕವಸ್ತು ಪೂರೈಕೆಯ ವ್ಯವಸ್ಥಿತ ದಂಧೆಯನ್ನು ಬಹಿರಂಗಗೊಳಿಸಿದೆ.  ಈ ಸಾವಿನ ಹಿಂದೆ ಮಾದಕ ವಸ್ತುವಿನ ವ್ಯವಸ್ಥಿತ ಜಾಲದ ಬೇರುಗಳು ಒಂದೊಂದಾಗಿ ಹೊರಬರುತ್ತಿವೆ.

ಬಾಲಿವುಡ್ ನಟನ ಆತ್ಮಹತ್ಯೆಗೆ ಪ್ರಚೋದನೆ ನೀಡಿದರೆನ್ನಲಾದ ಆರೋಪಕ್ಕೆ ಗುರಿಯಾಗಿರುವ ಚಿತ್ರ ನಟಿ ಮತ್ತು ಸುಶಾಂತ್ ಗೆಳತಿ ರಿಯಾ ಈಗ ಡ್ರಗ್ಸ್ ಪೂರೈಕೆ ಜಾಲದಲ್ಲಿ ಸಿಲುಕಿದ್ದಾರೆ.

Facebook Comments