ನಟಿ ರಿಯಾ ಮತ್ತು ಸಹೋದರ ಸೌವಿಕ್ ಜಾಮೀನು ಅರ್ಜಿ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.11-ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪದ ಸಂಬಂಧ ಬಂಧಿತರಾದ ಚಿತ್ರನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಸೌವಿಕ್ ಚಕ್ರವರ್ತಿ ಅವರ ಜಾಮೀನು ಅರ್ಜಿಗಳನ್ನು ಅವರನ್ನು ಮಂಬೈನ ವಿಶೇಷ ನ್ಯಾಯಾಲಯವೊಂದು ಇಂದು ಬೆಳಗ್ಗೆ ವಜಾಗೊಳಿಸಿದೆ.

ರಿಯಾ, ಸೌಹಿಕ್ ಅವರಲ್ಲದೇ ಈ ಪ್ರಕರಣದಲ್ಲಿ ಮಾದಕವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ)ಯಿಂದ ಈಗಾಗಲೇ ಬಂಧಿತರಾಗಿರುವ ಇತರ ನಾಲ್ವರ ಜಾಮೀನು ಅರ್ಜಿಗಳನ್ನೂ ಸಹ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಜಿ.ಬಿ.ಗುರಾವ್ ತಿರಸ್ಕರಿಸಿದರು.

ಇದರಿಂದಾಗಿ ಆರೋಪಿಗಳು ಇನ್ನೂ ಕೆಲವು ದಿನಗಳ ಕಾಲ ನ್ಯಾಯಾಂಗ ಕಸ್ಟಡಿಯಲ್ಲಿ ಇರುವಂತಾಗಿದೆ. ರಿಯಾ ಚಕ್ರವರ್ತಿ ಈಗ ಮುಂಬೈನ ಬೈಕುಲಾ ಜೂಲಿನ ಮಹಿಳಾ ಬ್ಯಾರಕ್‍ನಲ್ಲಿ ನ್ಯಾಯಾಂಗ ಕಸ್ಟಡಿಯಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ಧಾರೆ.

ಡ್ರಗ್ಸ್ ಖರೀದಿಸುತ್ತಿದ್ದ ಮತ್ತು ಅದನ್ನು ನಟ ಸುಶಾಂತ್ ಅವರಿಗೆ ಪೂರೈಸುತ್ತಿದ್ದ ಆರೋಪದ ಮೇಲೆ ಮೂರು ದಿನಗಳ ತೀವ್ರ ವಿಚಾರಣೆ ನಂತರ ಎನ್‍ಸಿಬಿ ಅಧಿಕಾರಿಗಳು ರಿಯಾ ಅವರನ್ನು ಬಂಧಿಸಿದರು.

ಮುಂಬೈನ ನ್ಯಾಯಾಲಯವೊಂದು ಸೆಪ್ಟೆಂಬರ್ 22ರವರೆಗೆ 14 ದಿನಗಳ ಕಾಲ ಸುಶಾಂತ್ ಗೆಳತಿಯನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿತು.

Facebook Comments