ಆಸೀಸ್ ಸರಣಿಯಿಂದ ರಿಚರ್ಡ್‍ಸನ್ ಔಟ್

ಈ ಸುದ್ದಿಯನ್ನು ಶೇರ್ ಮಾಡಿ

ಸಿಡ್ನಿ,ನ.18- ಮಗು ಜನಿಸುವ ನಿರೀಕ್ಷೆಯಿಂದಾಗಿ ಐಪಿಎಲ್‍ನಿಂದ ಹಿಂದೆ ಸರಿದಿದ್ದ ವೇಗಿ ಕೇನ್ ರಿಚರ್ಡ್‍ಸನ್ ಅವರು ಈಗ ಭಾರತ ವಿರುದ್ಧ ನಡೆಯುವ ಸರಣಿಯಿಂದಲೂ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

ಐಪಿಎಲ್ ವೇಳೆಯೇ ಆಸ್ಟ್ರೇಲಿಯಾಕ್ಕೆ ಮರಳಿದ ನಂತರ ರಿಚರ್ಡ್‍ಸನ್ ಬದಲಿಗೆ ಆಸ್ಟ್ರೇಲಿಯಾದವರೇ ಆದ ಆ್ಯಡಂ ಜಂಪಾ ಅವರು ಆರ್‍ಸಿಬಿ ತಂಡವನ್ನು ಕೂಡಿಕೊಂಡಿದ್ದರೆ, ಈಗ ಆಸ್ಟ್ರೇಲಿಯಾದ ಏಕದಿನ ಹಾಗೂ ಟ್ವೆಂಟಿ-20 ಸರಣಿಗಳಿಗೆ ಆಯ್ಕೆಯಾಗಿದ್ದ ರಿಚರ್ಡ್‍ಸನ್ ಹಿಂದೆ ಸರಿದಿರುವುದರಿಂದ ಅವರ ಬದಲಿಗೆ ಮತ್ತೊಬ್ಬ ವೇಗಿ ಆ್ಯಂಡ್ರೂ ಟೈರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.

2013ರಂದು ಕ್ರಿಕೆಟ್ ಜೀವನಕ್ಕೆ ಪಾದಾರ್ಪಣೆ ಮಾಡಿದ ಕೇನ್ ರಿಚರ್ಡ್‍ಸನ್ 25 ಏಕದಿನ ಹಾಗೂ 21 ಚುಟುಕು ಪಂದ್ಯಗಳಿಂದ ಕ್ರಮವಾಗಿ 39 ಹಾಗೂ 22 ವಿಕೆಟ್‍ಗಳನ್ನು ಕಬಳಿಸಿದ್ದಾರೆ. ಆ್ಯಂಡ್ರೂ ಟೈ 7 ಏಕದಿನ ಹಾಗೂ 26 ಟ್ವೆಂಟಿ-20 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡದ ಪರ ಆಡಿದ್ದು ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರಿಂದ ಅವರನ್ನೇ ಭಾರತ ವಿರುದ್ಧದ ಸರಣಿಗೆ ಆಯ್ಕೆ ಮಾಡಿಕೊಂಡಿದ್ದಾರೆ.

ನವೆಂಬರ್ 27 ರಂದು ಆಸ್ಟ್ರೇಲಿಯಾ ಹಾಗೂ ಭಾರತ ನಡುವೆ ಮೊದಲ ಏಕದಿನ ಪಂದ್ಯ ಆರಂಭಗೊಳ್ಳಲಿದ್ದು ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ.

Facebook Comments