ಪಾಪ್ ಗಾಯಕಿ ರಿಹಾನಾಗೇಕೆ ಮೋದಿ ಚಿಂತೆ..?

ಈ ಸುದ್ದಿಯನ್ನು ಶೇರ್ ಮಾಡಿ

– ಮಹಾಂತೇಶ್ ಬ್ರಹ್ಮ
ಕಳೆದ ಜನವರಿ 26ರಂದು ಇಡೀ ಭಾರತ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಮುಳುಗಿತ್ತು. ಆದರೆ, ದೆಹಲಿಯಲ್ಲಿ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಸಿ ಪಂಜಾಬ್ ಮತ್ತು ಹರಿಯಾಣದ ರೈತರು ಟ್ರ್ಯಾಕ್ಟರ್ ಜಾಥಾ ನಡೆಸಲು ರಸ್ತೆಗಿಳಿದುಬಿಟ್ಟಿದ್ದರು. ಏಕೆಂದರೆ ರೈತರ ಶಾಂತಿಯುತ ಪ್ರತಿಭಟನೆಗೆ ದೆಹಲಿಯ ಪೊಲೀಸ್ ಇಲಾಖೆಯೂ ಸಹ ಅನುಮತಿ ನೀಡಿತ್ತು. ಆದರೆ, ರೈತರು ಟ್ರ್ಯಾಕ್ಟರ್ ಜಾಥಾದ ಹೆಸರಿನಲ್ಲಿ ನಡೆದಿದ್ದೆಲ್ಲವೂ ತಾಯಿ ಭಾರತಮಾತೆಯ ಕೀರ್ತಿ ಕಳಶಕ್ಕೆ ಮಸಿ ಬಳಿಯುವ ದೊಡ್ಡ ಹುನ್ನಾರವೇ ಆಗಿತ್ತು.

ರೈತರ ವೇಷಭೂಷಣದಲ್ಲಿ ಟ್ರ್ಯಾಕ್ಟರ್ ಜಾಥಾದಲ್ಲಿ ಭಾಗವಹಿಸಿದ್ದ ಖಲಿಸ್ತಾನದ ಉಗ್ರರು ದೆಹಲಿಯ ಕೆಂಪುಕೋಟೆಗೆ ಮುತ್ತಿಗೆ ಹಾಕಿದರು, ಅಲ್ಲಿನ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು, ಸಾರ್ವಜನಿಕ ಆಸ್ತಿ-ಪಾಸ್ತಿ ಹಾಳುಮಾಡುವ ಮೂಲಕ ಹಿಂಸಾತ್ಮಕ ಕೃತ್ಯಗಳನ್ನು ಎಸಗಿದರು, ಬರೀ ಅಷ್ಟೇ ಅಲ್ಲದೆ, ಕೆಂಪುಕೋಟೆ ಮೇಲೆ ನಮ್ಮ ದೇಶದ ಗೌರವಾನ್ವಿತ ಪ್ರಧಾನಿ ಅಖಂಡ ಭಾರತದ ಬಾವುಟ ಹಾರಿಸುವ ಜಾಗದಲ್ಲಿ ಖಲಿಸ್ತಾನದ ಉಗ್ರನೊಬ್ಬ ಖಲಿಸ್ತಾನದ ಬಾವುಟ ಹಾರಿಸಿಬಿಟ್ಟ.

ಆಗಲೇ ನೋಡಿ ಇಡೀ ದೇಶದ ಜನರಿಗೆ ಸಂಪೂರ್ಣವಾಗಿ ಅರ್ಥವಾಗಿದ್ದು ಇದು ರೈತರ ಹೋರಾಟವಲ್ಲ ಇದೊಂದು ರಾಜಕೀಯ ಪ್ರೇರಿತ ಹೋರಾಟ. ರೈತರ ಆದಾಯ ದ್ವಿಗುಣಗೊಳಿಸಲು ಮತ್ತು ದೇಶದ ಜಿಡಿಪಿ ಬೆಲೆ ಹೆಚ್ಚಿಸಲು ಕೃಷಿ ಕ್ಷೇತ್ರದ ಕೊಡುಗೆ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿ ಮೂರು ನೂತನ ಕೃಷಿಕಾಯ್ದೆಗಳನ್ನು ಜಾರಿಗೆ ತರಲು ಹೊರಟಿತ್ತು. ಆದರೆ, ಇದನ್ನು ವಿರೋಸಿ ದೇಶದ್ಯಾಂತ ರೈತಪರ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು.

ಆಗ ಕೇಂದ್ರ ಸರ್ಕಾರ ರೈತ ಸಂಘಟನೆಗಳ ಜತೆ ಹನ್ನೊಂದು ಸುತ್ತಿನ ಮಾತು ಕತೆ ನಡೆಸಿತು. ಅದಾವುದಕ್ಕೂ ಸೊಪ್ಪು ಹಾಕದೆ ರೈತ ಸಂಘಟನೆಗಳು ಸುಪ್ರೀಂಕೋರ್ಟ್‍ನ ಮೊರೆ ಹೋದವು. ಇದನ್ನರಿತ ಮೋದಿ ಸರ್ಕಾರ ನೂತನ ಕೃಷಿ ಕಾಯ್ದೆಗಳನ್ನು ಮುಂದಿನ 18 ತಿಂಗಳು ಅನುಷ್ಠಾನಗೊಳಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ರಚಿಸಿದ್ದ ಸಮಿತಿಗೆ ಷರಾ ಬರೆದುಕೊಟ್ಟಿತು.

ಜತೆಗೆ ರೈತ ಸಂಘಟನೆಗಳು ಸರ್ವೋಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದವು. ಒಂದೇ ಮಾತಿನಲ್ಲಿ ಹೇಳುವುದಾದರೆ ಇದು ಸಂಪೂರ್ಣ ರೈತರ ಗೆಲುವಾಗಿತ್ತು. ಅವರ ಇಚ್ಛೆಯಂತೆ ಕೋರಿಕೆ ಈಡೇರಿದರೂ ಸಹ ರೈತ ಸಂಘಟನೆಗಳು ದೆಹಲಿ ಬಿಟ್ಟು ಕದಲಿಲ್ಲ. ಕಾರಣ ವಿದೇಶಿ ಪಟ್ಟಭದ್ರ ಹಿತಾಸಕ್ತಿಗಳು, ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಜಗತ್ತಿನಲ್ಲಿ ಶಾಂತಿ ಕದಡಲು ಬಯಸುವ ಕೆಲವು ವಿಚ್ಛಿದ್ರಕಾರಿ ಶಕ್ತಿಗಳು ಈ ಪ್ರತಿಭಟನೆಗೆ ಧನ ಸಹಾಯ ನೀಡುವುದರ ಮುಖಾಂತರ ಸಂಪೂರ್ಣವಾಗಿ ರೈತರ ಹೋರಾಟವನ್ನು ಹತೋಟಿಗೆ ತೆಗೆದುಕೊಂಡಿದ್ದವು.

ಹೋರಾಟ ಬಿಟ್ಟು ಕದಲದಂತೆ ಒತ್ತಡ ಹೇರಿದ್ದವು. ಇದರ ಪರಿಣಾಮವೇ ಜನವರಿ 26ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಜಾಥಾದ ಹೆಸರಿನಲ್ಲಿ ನಡೆಯಬಾರದ ವಿಧ್ವಂಸಕ ಕೃತ್ಯಗಳು ನಡೆದುಬಿಟ್ಟವು. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರ ಮಾನ್ಯತೆ ಪಡೆಯಿತು. ಆಗ ಜಗತ್ತಿನ ಜನಪ್ರಿಯ ತಾರೆಯರಿಂದ ನಾವೇಕೆ ಇದರ ಬಗ್ಗೆ ಮಾತನಾಡಬಾರದು..? ಎಂಬ formersprotest ಟ್ವಿಟ್ಟರ್ ಅಭಿಯಾನ ಹ್ಯಾಷ್ ಟ್ಯಾಗ್, ಟೂಲ್ ಕಿಟ್‍ನ ಟ್ರೆಂಡ್ ಶುರುವಾಯಿತು. ಆಗಲೇ ನೋಡಿ ಪಾಪ್ ಗಾಯಕಿ ರಿಹಾನಾ, ನೀಲಿತಾರೆ ಮಾಕ್ ಖಲೀಫಾ, ಸ್ವೀಡಿಷ್ ದೇಶದ ಗ್ರೇಟಾ ತನ್ಬರ್ಗ್ ಧ್ವನಿಗೂಡಿಸಿದ್ದು.

ಭಾರತದಲ್ಲಿ ರೈತರನ್ನು ಹಿಂಸಿಸಲಾಗುತ್ತಿದೆ, ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಇದರ ಬಗ್ಗೆ ನಾವೇಕೆ ಮಾತನಾಡಬಾರದು..? ಎಂದು ಜಗತ್ತಿಗೆ ಭಾರತದ ಸಾರ್ವಭೌಮತ್ವದ ವಿರುದ್ಧ ಪ್ರಚೋದನೆ ನೀಡುತ್ತಾರೆ. ಒಂದೇ ಒಂದು ದುರದೃಷ್ಟಕರ ಸಂಗತಿ ಏನೆಂದರೆ ಇವರಲ್ಲಿ ಯಾರಿಗೂ ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಒಪ್ಪಂದಗಳ ಬಗ್ಗೆ ಕಿಂಚಿತ್ತು ಜ್ಞಾನವಿಲ್ಲ. ದೇಶ-ದೇಶಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸಲು ಪಂಚಶೀಲ ತತ್ವದಡಿ ಅಂತಾರಾಷ್ಟ್ರೀಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ, ಪ್ರಕಾರ ಒಂದು ದೇಶದ ಆಡಳಿತಾತ್ಮಕ ಆಂತರಿಕ ವಿಚಾರದಲ್ಲಿ ಮತ್ತೊಂದು ದೇಶ ಮೂಗು ತೂರಿಸುವಂತಿಲ್ಲ.

ಖಲಿಸ್ತಾನದ ಉಗ್ರ ಸಂಘಟನೆ ಮುಖಾಂತರ ಪಿ.ಆರ್.ಫರ್ಮ್‍ನಿಂದ ಪಾಪ್ ತಾರೆ ರಿಹಾನಾಗೆ 18 ಕೋಟಿ ಅಮೆರಿಕ ಡಾಲರ್ ನೀಡಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಾತನಾಡಲು ಛೂ ಬಿಟ್ಟಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಿಹಾನಾ ಮಾತ್ರ ಜಗತ್ತಿನ ಜನರ ದಾರಿ ತಪ್ಪಿಸಲು ಟ್ವಿಟರ್ ನಲ್ಲಿ Rihana formersprotest ಹ್ಯಾಷ್ ಟ್ಯಾಗ್ ಶುರು ಮಾಡಿ ಭಾರತದ ಸಾರ್ವಭೌಮತ್ವಕ್ಕೆ ದಕ್ಕೆ ತರುತ್ತಿದ್ದಾರೆ. ಇದಕ್ಕೆ ವಿರೋಧ ಪಕ್ಷಗಳು ಸಹ ಕುಮ್ಮಕ್ಕು ನೀಡುತ್ತಿರುವುದು ಈಗೇನು ಗುಟ್ಟಾಗಿ ಉಳಿದಿಲ್ಲ.

ರಿಹಾನಾ ಕೆರೆಬಿಯನ್ ದ್ವೀಪ ಸಮೂಹದ ಬಾರ್ಬಡೋಸ್ ಎಂಬ ದೇಶದವಳು. ಕುಡುಕ ಅಪ್ಪ ದಿನವೂ ಈಕೆಯ ತಾಯಿಯನ್ನು ಹೊಡೆಯುತ್ತಿದ್ದ. ಬಡತನದ ಬೇಗೆಯಲ್ಲಿದ್ದ ರಿಹಾನಾ ಸಣ್ಣ ವಯಸ್ಸಿನಲ್ಲೇ ಬಟ್ಟೆ ವ್ಯಾಪಾರ ಶುರು ಮಾಡಿದ್ದಳು. ಕುಡುಕ ಅಪ್ಪ ಕೊಕೈನ್‍ಗೆ ಅಡಿಕ್ಟ್ ಆಗಿದ್ದ. ಪ್ರತಿನಿತ್ಯ ಮನೆ ರಣರಂಗವಾಗುತ್ತಿತ್ತು, ಕೊನೆಗೊಂದು ದಿನ ಈಕೆಗೆ ಹದಿನಾಲ್ಕು ವರ್ಷವಾಗಿದ್ದಾಗ ಅಪ್ಪ-ಅಮ್ಮ ಬೇರೆಯಾದರು.

ಅಲ್ಲಿಂದ ರಿಹಾನಾ ಹಣದ ಬೆನ್ನು ಬಿದ್ದಳು. ಗೊತ್ತಿದ್ದ ಗೆಳೆಯರ ಸಂಗೀತದ ತಂಡವೊಂದು ಕಟ್ಟಿ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದಳು. ಜಗತ್ತಿನ ಪಾಪ್ ಗಾಯಕಿಯಾಗಿ ಖ್ಯಾತಿ ಗಳಿಸಿದಳು, ಟ್ಟಿಟರ್‍ನಲ್ಲಿ 10 ಕೋಟಿ ಅನುಯಾಯಿಗಳನ್ನು ಸೃಷ್ಟಿಸಿಕೊಂಡಳು, ನೋಡ ನೋಡುತ್ತಲೆ 600 ಮಿಲಿಯನ್ ಡಾಲರ್ ಆಸ್ತಿಯ ಒಡತಿಯಾದಳು. ಆದರೂ ಆಕೆಗೆ ಹಣದ ಮೇಲಿನ ಆಸೆ ಮಾತ್ರ ಕಡಿಮೆಯಾಗಲಿಲ್ಲ.

ಆಕೆಗೆ ಹಣ ನೀಡಿದರೆ ಸಾಕು ಯಾವ ದೇಶದ ವಿಚಾರದಲ್ಲೂ ಮೂಗು ತೂರಿಸುತ್ತಾಳೆ. ಅದಕ್ಕೆ ಉದಾಹರಣೆ ಎಂದರೆ ಇತ್ತೀಚೆಗೆ ಸೂಡನ್, ನೈಜೀರಿಯಾ ಮತ್ತು ಮಯನ್ಮಾರ್ ದೇಶಗಳಲ್ಲಿ ನಡೆದ ಬೆಳವಣಿಗೆಯಲ್ಲಿ ಧ್ವನಿಯೆತ್ತಿದ್ದಳು. ಡೊನಾಲ್ಡï ಟ್ರಂಪ್ ಸರ್ಕಾರದ ವಿರುದ್ಧ ಗುಟುರು ಹಾಕಿದ್ದಳು. ಆದರೆ, ಇದೆಲ್ಲದಕ್ಕೂ ಆಕೆ ಹಣ ಪಡೆದಿದ್ದಳು ಎಂಬುದೇ ಆಘಾತಕಾರಿ ಸಂಗತಿ..!

ಒಂದು ದೇಶದ ವಿಚಾರದಲ್ಲಿ ಮತ್ತೊಂದು ದೇಶ ತಲೆ ಹಾಕುವುದು ಅದೆಷ್ಟು ಸರಿ..? ಅದರಲ್ಲೂ ಖಲಿಸ್ತಾನದ ಉಗ್ರರು ಕೆಂಪು ಕೋಟೆಯಲ್ಲಿ ಖಲಿಸ್ತಾನದ ಬಾವುಟ ಹಾರಿಸಿದ್ದನ್ನು ಯಾರಾದರೂ ಒಪ್ಪಲಾದೀತೇ..? ನೈತಿಕತೆಯೇ ಇಲ್ಲದ ನೀಲಿ ತಾರೆಯರು, ಪಾಪ್ ಗಾಯಕಿಯರು ಅಂತಾರಾಷ್ಟ್ರೀಯ ವಿಚ್ಛಿದ್ರಕಾರಿ ಶಕ್ತಿಗಳಿಂದ ಹಣ ಪಡೆದು ಹೇಳುವ ನೈತಿಕ ಪಾಠವನ್ನು ಭಾರತದ ಪ್ರಜೆಗಳು ಕೇಳಲಾದೀತೇ.. ಒಂದಂತೂ ಸತ್ಯ, ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರ ತೆಗೆದ ರೀತಿಯಲ್ಲೇ ಭಾರತದಲ್ಲಿ ನರೇಂದ್ರ ಮೋದಿಯವರ ಸರ್ಕಾರವನ್ನು ತೆಗೆಯುವ ಪಣ ತೊಟ್ಟಿರುವುದಂತೂ ಸುಳ್ಳಲ್ಲ ಎಂಬುದು ರಾಷ್ಟ್ರಭಕ್ತರ ಬಾಯಲ್ಲಿ ಕೇಳಿ ಬರುತ್ತಿರುವ ಮಾತು…! ಇವರ ಆಸೆ ಈಡೇರುವುದೋ ಇಲ್ಲವೋ ಎಂದು ಮುಂದಿನ ಚುನಾವಣೆಯವರೆಗೂ ಕಾದು ನೋಡಬೇಕು…

Facebook Comments

Sri Raghav

Admin