ಕ್ರೀಡಾ ಪ್ರಶಸ್ತಿಗಳ ಬಹುಮಾನದ ಮೊತ್ತ ಹೆಚ್ಚಿಸಿದ ಕೇಂದ್ರ ಸರ್ಕಾರ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.29- ಕ್ರೀಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಸಾಹಸ ಪ್ರಶಸ್ತಿಗೆ ನೀಡಲಾಗುತ್ತಿದ್ದ ಬಹುಮಾನದ ಮೊತ್ತವನ್ನು ಕೇಂದ್ರ ಸರ್ಕಾರ ಇಂದು ಅಕೃತವಾಗಿ ಹೆಚ್ಚಳ ಮಾಡಿದೆ.

ರಾಜೀವ್ ಗಾಂಧಿಖೇಲ್ ಪ್ರಶಸ್ತಿ ಪುರಸ್ಕøತರಿಗೆ ಈವರೆಗೂ 7,500 ಲಕ್ಷ ನಗದು ನೀಡಲಾಗುತ್ತಿತ್ತು. ಇದೀಗ ಸರ್ಕಾರ ಈ ಪ್ರಶಸ್ತಿಯ ಮೊತ್ತವನ್ನು ಬರೋಬ್ಬರಿ 25 ಲಕ್ಷಕ್ಕೆ ಹೆಚ್ಚಳ ಮಾಡಿದೆ.

ಅರ್ಜುನ ಪ್ರಶಸ್ತಿ ನೀಡಲಾಗುತ್ತಿದ್ದ ನಗದನ್ನು 5 ಲಕ್ಷದಿಂದ 15 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಜೀವಮಾನ ಸಾಧನೆಗೆಯಾಗಿ ನೀಡಲಾಗುವ ದ್ರೋಣಚಾರ್ಯ ಪ್ರಶಸ್ತಿ ಮೊತ್ತವನ್ನು 5 ಲಕ್ಷದಿಂದ 15 ಲಕ್ಷ ಹಾಗೂ ದ್ರೋಣಚಾರ್ಯ ಪ್ರಶಸ್ತಿಗೆ ಮೊತ್ತವನ್ನು 5 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಧ್ಯಾನ್‍ಚಂದ್ ಪ್ರಶಸ್ತಿ ಪುರಸ್ಕøತರಿಗೆ ಕೊಡುತ್ತಿದ್ದ 5 ಲಕ್ಷ ಬದಲಿಗೆ 10 ಲಕ್ಷ ನೀಡಲಾಗುತ್ತಿದೆ.

ಹೊಸ ನಿಯಮ ಪ್ರಸಕ್ತ ವರ್ಷದಿಂದಲೇ ಜಾರಿಯಾಗಲಿದೆ ಎಂದು ಕೇಂದ್ರ ಕ್ರೀಡಾಮಂತ್ರಿ ಕಿರಣ್ ರಿಜಿಜು ತಿಳಿಸಿದ್ದಾರೆ. ಒಟ್ಟು ಏಳು ವಿಭಾಗಗಳಲ್ಲಿ ಕೇಂದ್ರ ಸರ್ಕಾರ ಕೊಡಮಾಡುತ್ತಿದ್ದ ಪ್ರಶಸ್ತಿಗಳ ನಗದು ಮೊತ್ತವನ್ನು ಈ ವರ್ಷದಿಂದಲೇ ಅನ್ವಯವಾಗುವಂತೆ ಹೆಚ್ಚಳ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

2008ರಲ್ಲಿ ಕ್ರೀಡಾ ಕ್ಷೇತ್ರಗಳಿಗೆ ನೀಡುತ್ತಿದ್ದ ಪ್ರಶಸ್ತಿ ಮೊತ್ತವನ್ನು ಪರಿಷ್ಕøತ ಮಾಡಲಾಗಿತ್ತು. ನಗದು ಮೊತ್ತವನ್ನು ಹೆಚ್ಚಳ ಮಾಡಬೇಕೆಂಬ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ.

ಪ್ರತಿ ವರ್ಷಕ್ಕೊಮ್ಮೆ ಪ್ರಶಸ್ತಿ ಮೊತ್ತವನ್ನು ಪರಿಷ್ಕರಿಸಬೇಕೆಂಬ ನಿಯಮವಿದೆ. ಅದರನ್ವಯ ಪ್ರಶಸ್ತಿಗಳ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ನಾವು ಎಲ್ಲಾ ಕ್ಷೇತ್ರಗಳ ಪ್ರಶಸ್ತಿ ಮೊತ್ತವನ್ನು ಹೆಚ್ಚಳ ಮಾಡಿರುವಾಗ ಕ್ರೀಡೆಯಲ್ಲಿ ಕೀಡ್ರಾಪಟುಗಳು ಮಾಡಿರುವ ಸಾಧನೆಯನ್ನು ಪರಿಗಣಿಸಿ ಏಕೆ ಮೊತ್ತವನ್ನು ಹೆಚ್ಚಳ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.

ಈ ಬಾರಿಯ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಭಾರತದ ಹೆಸರಾಂತ ಕ್ರಿಕೆಟಿಗ ರೋಹಿತ್ ಶರ್ಮ , ಕುಸ್ತಿಪಟು ವಿನೇಶ್ ಪೋಗಟ್, ಮಹಿಳಾ ಹಾಕಿ ನಾಯಕಿ ರಾಣಿ ರಂಪಲ್, ಪೆಡ್ಲರ್ ಮಣಿಕಾ ಭತ್ರಾ, ರಿಯೋ ಪ್ಯಾರಾ ಒಲಿಂಪಿಕ್‍ನ ಚಿನ್ನದ ಪದಕ ವಿಜೇತೆ ಮರಿಯಪ್ಪನ್ ತಂಗವೇಲು ಸೇರಿದಂತೆ ಮತ್ತಿತರರು ಈ ಬಾರಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದೇ ರೀತಿ 27 ಅಥ್ಲೆಟಿಕ್‍ಗಳನ್ನು ಅರ್ಜುನ ಪ್ರಶಸ್ತಿ ಹಾಗೂ 13 ಮಂದಿ ತರಬೇತಿದಾರರನ್ನು ದ್ರೋಣಚಾರ್ಯ ಪ್ರಶಸ್ತಿ ಮತ್ತು 15 ಮಂದಿಯನ್ನು ಧ್ಯಾನ್‍ಚಂದ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಭಾರತದ ಹಾಕಿ ಮಾಂತ್ರಿಕ ಧ್ಯಾನ್‍ಚಂದ್ ಅವರ ಹುಟ್ಟುಹಬ್ಬದ ಪ್ರಯುಕ್ತ ಆ.29ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದೆ.

ಪ್ರತಿ ವರ್ಷ ರಾಷ್ಟ್ರಪತಿ ಭವನದ ಐತಿಹಾಸಿಕ ದರ್ಬಾರ್ ಹಾಲ್‍ನಲ್ಲಿ ವಿವಿಧ ವಿಭಾಗದ ಕ್ರೀಡಾಪಟುಗಳಿಗೆ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿಯವರು ಪ್ರಶಸ್ತಿ ನೀಡುವುದು ಶಿಷ್ಟಾಚಾರವಾಗಿತ್ತು. ಆದರೆ ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ವಚ್ರ್ಯುವಲ್ ಮೂಲಕ ಪ್ರಶಸ್ತಿಗಳನ್ನು ವಿತರಿಸಲಾಗಿದೆ.

Facebook Comments

Sri Raghav

Admin