ರಿಸ್ಯಾಟ್-2ಬಿಆರ್1 ಉಪಗ್ರಹ ಉಡಾವಣೆ ಯಶಸ್ವಿ, ಕಕ್ಷೆ ಸೇರಿದ 10 ಉಪಗ್ರಹಗಳು

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀಹರಿಕೋಟಾ,ಡಿ.11- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಅಂತರಿಕ್ಷ ಸಾಧನೆಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.ಭೂ ಪರಿವೀಕ್ಷಣಾ ಉಪಗ್ರಹ (ರೆಡಾರ್ ಇಮೇಜಿಂಗ್ ಅರ್ಥ್ ಅಬ್ಜರ್‍ವೇಟರಿ ಸ್ಯಾಟಲೈಟ್) ರಿಸ್ಯಾಟ್-2ಬಿಆರ್‍ಐ ಉಪಗ್ರಹ ಇಂದು ಮಧ್ಯಾಹ್ನ 3.35ಕ್ಕೆ ನಭಕ್ಕೆ ಚಿಮ್ಮಿಸಲಾಯಿತು.

ಇದರೊಂದಿಗೆ ಇತರ 9 ವಾಣಿಜ್ಯ ಉಪಗ್ರಹಗಳನ್ನು ಕೂಡ ಉಡಾವಣೆ ಮಾಡಲಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 628 ಕೆಜಿ ತೂಕದ ಈ ಉಪಗ್ರಹವನ್ನು ಪಿಎಸ್‍ಎಲ್‍ವಿ-48 ಹೊತ್ತೊಯಿತು.

ಇದರ ಜತೆಗೆ ಇತರ 9 ಕಮರ್ಸಿಯಲ್ ಸ್ಯಾಟಲೈಟ್‍ಗಳನ್ನು ಸಹ ನಿಗದಿತ ಕಕ್ಷಗೆ ಸೇರಿಸಲಾಗಿದೆ. ಭೂಮಿಯಿಂದ 576 ಕಿ.ಮೀ. ದೂರದಲ್ಲಿರುವ ನಿಗದಿತ ಕಕ್ಷೆಗೆ ಈ ಉಪಗ್ರಹ ಸೇರ್ಪಡೆಯಾಗಲಿದೆ. ನಿನ್ನೆ ಸಂಜೆ 4.40ರಿಂದ ರಿಸ್ಯಾಟ್-2ಬಿಆರ್‍ಐ ಉಪಗ್ರಹ ಉಡಾವಣೆಗೆ ಕೌಂಟ್‍ಡೌನ್ ಆರಂಭವಾಗಿತ್ತು.

ಭೂಮಿಯ ಪರಿವೀಕ್ಷಣೆಗಾಗಿ ನಿಯೋಜಿತವಾಗಿರುವ ಈ ಉಪಗ್ರಹವು ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣೆ ಕಾರ್ಯಗಳಲ್ಲಿ ನೆರವಾಗಲಿದೆ.

Facebook Comments