ಉತ್ತರಖಂಡ ದುರಂತ : ಮೊದಲ ಟೆಸ್ಟ್ ಸಂಭಾವನೆವನ್ನು ನೆರವಿಗೆ ನೀಡಿದ ರಿಷಭ್ ಪಂತ್

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಫೆ.8- ಉತ್ತರಖಂಡ ಚಮೋಲಿ ಜಿಲ್ಲೆಯಲ್ಲಿ ನಂದಾದೇವಿ ನೀರ್ಗಲ್ಲು ಸ್ಫೋಟಗೊಂಡು ಹಲವು ಜೀವಗಳನ್ನು ಬಲಿ ತೆಗೆದುಕೊಂಡಿರುವ ಭೀಕರ ಘಟನೆಗೆ ಬಗ್ಗೆ ದುಃಖ ವ್ಯಕ್ತಪಡಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‍ಮನ್ ರಿಷಭ್ ಪಂತ್, ಭಾರತ-ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ತಾನು ಗಳಿಸುವ ಸಂಭಾವನೆವನ್ನು ನೆರವಿಗೆ ನೀಡುವುದಾಗಿ ಹೇಳಿದ್ದಾರೆ.

ಈ ದುರ್ಘಟನೆಯಲ್ಲಿ ಮಡಿದವರ ಹಾಗೂ ಬಹಳಷ್ಟು ಜನರು ನೀರ್ಗಲ್ಲುನಡಿ ಸಿಕ್ಕಿಕೊಂಡಿರುವ ಸಂತ್ರಸ್ತರ ಕುಟುಂಬಗಳಿಗೆ ಹೆಚ್ಚು ಹೆಚ್ಚು ಸಹಾಯ ಮಾಡಬೇಕೆಂದು ಜನತೆಯಲ್ಲಿ ಕೇಳಿಕೊಂಡಿದ್ದಾರೆ ನಂದಾದೇವ ನೀರ್ಗಲ್ಲು ಸ್ಫೋಟದಲ್ಲಿ ಕನಿಷ್ಟ 10 ಮಂದಿ ಜೀವ ಕಳೆದುಕೊಂಡಿದ್ದು, ಬಹಳಷ್ಟು ಜನ ಕಣ್ಮರೆಯಾಗಿದ್ದಾರೆ.

ದೌಲಿಗಂಗಾ, ರಿಷಿ ಗಂಗಾ ಮತ್ತು ಅಲಕಾನಂದ ನದಿಗಳ ಹಿಮ ಕರಗಿ ದುಪ್ಪಟ್ಟು ವೇಗದಲ್ಲಿ ಹರಿದ ಪ್ರವಾಹದಿಂದ ಈ ಘಟನೆ ಸಂಭವಿಸಿದೆ. ತಪೋವನ್-ವಿಷ್ಣುಗಢ ವಿದ್ಯುತ್ ಯೋಜನೆಯ ಹಾಗೂ ರಷಿ ಗಂಗಾ ಜಲ ವಿದ್ಯುತ್ ಯೋಜನಾಗಾರದ ಸಿಬ್ಬಂದಿ ಕಾಣಯಾಗಿದ್ದಾರೆ.

ತಮ್ಮ ಟ್ವೀಟ್‍ನಲ್ಲಿ ಉತ್ತರಖಂಡದ ನೀರ್ಗಲ್ಲಿನ ಪ್ರಾಣಹಾನಿಯಿಂದ ತೀವ್ರ ನೋವುಂಟಾಗಿದೆ. ಸಂತ್ರಸ್ತರ ನೆರವಿಗೆ ನನ್ನ ಈ ಟೆಸ್ಟ್ ಪಂದ್ಯದಲ್ಲಿ ಗಳಿಸುವ ಶುಲ್ಕವನ್ನು ದಾನವಾಗಿ ನೀಡಬಯಸುತ್ತೇನೆ. ಹೆಚ್ಚಿನ ಜನರು ಸಹಾಯ ಮಾಡಲು ಒತ್ತಾಯಿಸುತ್ತೇನೆ ಎಂದಿದ್ದಾರೆ.

Facebook Comments