ಪೇಶಾವರದಲ್ಲಿರುವ ನಟ ರಿಷಿ ಕಪೂರ್ ಮನೆತನಕ್ಕೆ ಸೇರಿದ ಕಪೂರ್ ಹವೇಲಿ ಉರುಳಿಸಲು ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಜು.14- ಬಾಲಿವುಡ್ ನಟ ರಿಷಿ ಕಪೂರ್ ಮನೆತನಕ್ಕೆ ಸೇರಿದ ಪಾಕಿಸ್ತಾನದ ಪೇಶಾವರದಲ್ಲಿರುವ ಕಪೂರ್ ಹವೇಲಿ ಈಗ ವಾಣಿಜ್ಯ ಸಂಕೀರ್ಣವನ್ನಾಗಿ ಮಾರ್ಪಡಿಸುವ ಸಲುವಾಗಿ ನೆಲಸಮ ಮಾಡುವ ಪ್ರಯತ್ನಗಳು ನಡೆಯುತ್ತಿವೆ.

ಕಪೂರ್ ಹವೇಲಿಯನ್ನು 1918 ಮತ್ತು 1922 ರ ನಡುವೆ ಪೃಥ್ವಿರಾಜ್ ಕಪೂರ್ ಅವರ ತಂದೆ ದಿವಾನ್ ಬೇಶೇಶ್ವರನಾಥ ಕಪೂರ್ ನಿರ್ಮಿಸಿದ್ದರು. ಇವರು ಭಾರತೀಯ ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿದ ಕುಟುಂಬದ ಮೊದಲ ಸದಸ್ಯರಾಗಿದ್ದಾರೆ. 1947 ರಲ್ಲಿ ವಿಭಜನೆಯ ನಂತರ ಕಪೂರ್ ಭಾರತಕ್ಕೆ ಸ್ಥಳಾಂತರಗೊಂಡರು.

ಪಾಕಿಸ್ತಾನದ ಪೇಶಾವರ ನಗರದಲ್ಲಿ ಕಪೂರ್ ಹವೇಲಿ ಎಂದು ಕರೆಯಲ್ಪಡುವ ಅವರ ಪೂರ್ವಜರ ಮನೆಯ ಬಗ್ಗೆ ದಿವಂಗತ ರಿಷಿ ಕಪೂರ್ ತಮ್ಮ ಟ್ವೀಟ್‍ಗಳಲ್ಲಿ ಆಗಾಗ ಉಲ್ಲೇಖಿಸಿದ್ದರು.

ಪ್ರಸ್ತುತ ನಗರದ ಶ್ರೀಮಂತ ಆಭರಣ ವ್ಯಾಪಾರಿ ಹಾಜಿ ಮುಹಮ್ಮದ್ ಇಸ್ರಾರ್ ಒಡೆತನದಲ್ಲಿರುವ ಕಪೂರ್ ಹವೇಲಿಯನ್ನು ನೆಲಸಮಗೊಳಿಸಿ ವಾಣಿಜ್ಯ ಸಂಕೀರ್ಣವನ್ನಾಗಿ ಪರಿವರ್ತಿಸಲು ಮುಂದಾಗಿದ್ದಾರೆ.

ಪೂರ್ವಜರ ಮನೆಯನ್ನು ಶೀಘ್ರದಲ್ಲೇ ವಸ್ತುಸಂಗ್ರಹಾಲಯವನ್ನಾಗಿ ಮಾಡಲಾಗುವುದು ಎಂದು ಈ ಹಿಂದೆ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಅವರು ರಿಷಿ ಕಪೂರ್‍ಗೆ ಭರವಸೆ ನೀಡಿದ್ದರು. ಮಾಲೀಕರೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಅದು ವಿಫಲವಾಯಿತು.

ಕಟ್ಟಡವನ್ನು ನೆಲಸಮ ಮಾಡಲು ಮಾಲೀಕರು ಈ ಹಿಂದೆ ಮೂರ್ನಾಲ್ಕು ಬಾರಿ ಪ್ರಯತ್ನಗಳನ್ನು ಮಾಡಿದ್ದು, ಪಾಕಿಸ್ತಾನ ಸರ್ಕಾರದೊಂದಿಗೆ ತನಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿದ್ದರು. ಈಗ ತಮ್ಮ ಪೂರ್ವಜರ ಮನೆಯನ್ನು ಉಳಿಸಿಕೊಳ್ಳಲು ಕಪೂರ್ ಕುಟುಂಬ ಮುಂದಾಗುವುದೇ ಕಾದುನೋಡಬೇಕಿದೆ.

Facebook Comments

Sri Raghav

Admin