ನೆರೆ ಸಂತ್ರಸ್ತರಿಗೆ ರಿತೇಶ್-ಜೆನಿಲಿಯಾ ದಂಪತಿಯಿಂದ 25 ಲಕ್ಷ ರೂ. ದೇಣಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಆ. 13- ಮಹಾಮಳೆಯಿಂದಾಗಿ ನಿರಾಶ್ರಿತರಾಗಿರುವ ಜನರಿಗೆ ಸಿನಿಮಾ ತಾರೆಯರಿಂದ ಅನುದಾನದ ಮಹಾಪೂರವೇ ಹರಿದುಬರುತ್ತಿದೆ, ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದಿಂದ ನಲುಗಿರುವ ಜನತೆಗೆ ಸ್ಯಾಂಡಲ್‍ವುಡ್‍ನ ಸ್ಟಾರ್‍ಗಳಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸುದೀಪ್, ಯಶ್, ಉಪೇಂದ್ರ ಸೇರಿದಂತೆ ಹಲವು ನಟರು ಸ್ಪಂದಿಸಿದ್ದರೆ, ಮಹಾರಾಷ್ಟ್ರದಲ್ಲಿ ಉಂಟಾಗಿರುವ ನೆರೆಯಿಂದ ಬಸವಳಿದಿರುವ ಮಂದಿಗೆ ಬಾಲಿವುಡ್ ತಾರೆಯರು ಸಹಾಯಹಸ್ತ ಚಾಚಿದ್ದಾರೆ.

ಬಾಲಿವುಡ್‍ನ ಸ್ಟಾರ್ ನಟ ರಿತೇಶ್ ದೇಶ್‍ಮುಖ್ ಮತ್ತು ನಟಿ ಜೆನಿಲಿಯಾ ಡಿಸೋಜಾ ಅವರು ಮಹಾರಾಷ್ಟ್ರದ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ಸಿಎಂ ದೇವೇಂದ್ರ ಪಡ್ನವಿಸ್‍ರಿಗೆ 25 ಲಕ್ಷ ರೂ.ಗಳನ್ನು ನೀಡಿದ್ದಾರೆ.

ಈ ವಿಷಯವನ್ನು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ನೆರೆಯಿಂದ ಬಳಲುತ್ತಿರುವ ಜನತೆಗೆ ನೆರವು ನೀಡಲೆಂದು ರಿತೇಶ್ ದಂಪತಿ ಚೆಕ್ ನೀಡಿರುವ ಪೋಟೋವನ್ನು ತಮ್ಮ ಟ್ವಿಟ್ಟರ್‍ನಲ್ಲಿ ಹಾಕಿರುವುದೇ ಅಲ್ಲದೆ ಅವರ ಸಮಾಜಸೇವೆಯನ್ನು ಕೊಂಡಾಡಿದ್ದಾರೆ.

ಸಂತ್ರಸ್ತರಿಗೆ ನೆರವು ನೀಡಲು ಸೆಲಬ್ರಿಟಿಗಳು ಹಾಗೂ ಕಲಾವಿದರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಅವರು ಟ್ವಿಟ್ಟರ್‍ನಲ್ಲಿ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಜೆನಿಲಿಯಾ ಹಾಗೂ ರಿತೇಶ್ ದೇಶ್‍ಮುಖ್ ಅವರು 25 ಲಕ್ಷ ರೂ.ಗಳನ್ನು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ ಎಂದು ಕೊಂಡಾಡಿದ್ದಾರೆ.

Facebook Comments