ಕೈಕುಲುಕುವ ನೆಪದಲ್ಲಿ ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಹತ್ಯೆ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

Tej-Pratap-01

ಪಾಟ್ನಾ, ಆ.23-ಶಸ್ತ್ರಾಸ್ತ್ರ ಹೊಂದಿದ್ದ ವ್ಯಕ್ತಿಯೊಬ್ಬ ಹಸ್ತ ಲಾಘವ ನೀಡುವ ಸೋಗಿನಲ್ಲಿ ನನ್ನ ಹತ್ಯೆಗೆ ವಿಫಲ ಯತ್ನ ನಡೆಸಿದ್ದಾಗಿ ರಾಷ್ಟ್ರೀಯ ಜನತಾ ದಳ (ಆರ್‍ಜೆಡಿ) ನಾಯಕ ಹಾಗೂ ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಆರೋಪಿಸಿದ್ದಾರೆ. ತಮ್ಮನ್ನು ಕೊಲ್ಲಲು ಬಿಜೆಪಿ ಮತ್ತು ಆರ್‍ಎಸ್‍ಎಸ್ ಯತ್ನಿಸುತ್ತಿದೆ ಎಂದು ಅವರು ಆರೋಪಿಸಿರುವುದು ಈಗ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

ನಾನು ಪ್ರತಿನಿಧಿಸಿರುವ ಬಿಹಾರದ ಮಹುವಾ ವಿಧಾನಸಭಾ ಕ್ಷೇತ್ರಕ್ಕೆ ತೆರಳುತ್ತಿದ್ದಾಗ, ಶಸ್ತ್ರಸಜ್ಜಿತನಾದ ವ್ಯಕ್ತಿಯೊಬ್ಬ ನನಗೆ ಹಸ್ತ ಲಾಘವ ನೀಡಿದ. ನಂತರ ನನ್ನ ಕೈಯನ್ನು ಬಲವಂತವಾಗಿ ಹಿಡಿದುಕೊಂಡಿದ್ದ. ನನ್ನನ್ನು ಕೊಲ್ಲುವುದು ಆತನ ಉದ್ದೇಶವಾಗಿತ್ತು. ಬಳಿಕ ಎಚ್ಚೆತ್ತ ಅಂಗರಕ್ಷಕರು ಆತನನ್ನು ದೂರ ತಳ್ಳಿದರು. ಅವನ ಬಳಿ ಇದ್ದ ಮಾರಕಾಸ್ತ್ರವನ್ನು ವಶಪಡಿಸಿಕೊಂಡರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಆರ್‍ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಆರೋಪಿಸಿದ್ದಾರೆ.

ಬಿಜೆಪಿ ಮತ್ತು ಆರ್‍ಎಸ್‍ಎಸ್ ನನ್ನನ್ನು ಮುಗಿಲು ಹುನ್ನಾರ ನಡೆಸುತ್ತಿವೆ ಬಿಹಾರದಲ್ಲಿ ಅನ್ಯ ಪಕ್ಷದ ಶಾಸಕರು ಮತ್ತು ಸಚಿವರಿಗೆ ರಕ್ಷಣೆ ಇಲ್ಲದಿರುವಾಗ ಸಾಮಾನ್ಯ ಜನರ ಸ್ಥಿತಿ ಏನು ಎಂದು ಅವರು ಪ್ರಶ್ನಿಸಿದ್ದಾರೆ. ಈ ಘಟನೆ ನಂತರ ಪೊಲೀಸರಿಗೆ ದೂರು ನೀಡಿದ್ದರೂ ಆಕ್ರಮಣಕಾರನನ್ನು ಈವರೆಗೆ ಬಂಧಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

Facebook Comments

Sri Raghav

Admin