ಉತ್ತರಪ್ರದೇಶದಲ್ಲಿ ಪತ್ಯೇಕ ಅಪಘಾತಗಳಲ್ಲಿ 10 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಸೀತಾಪುರ/ಬಲಿಯಾ/ಮುಜಾಫರ್‍ನಗರ, ಜೂ. 18- ಉತ್ತರಪ್ರದೇಶದ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಹತ್ತು ಮಂದಿ ಮೃತಪಟ್ಟು ಅನೇಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಟ್ರಾಕ್ಟರ್ ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಸೀತಾಪುರ-ಲಖಿಂಪುರ ಹೆದ್ದಾರಿಯಲ್ಲಿ ನಡೆದಿದೆ.

ಮದುವೆ ಸಮಾರಂಭಕ್ಕಾಗಿ ಸೀತಾಪುರ ನಗರ ಪ್ರದೇಶದ ತೆಡ್ವಾ ಚಿಲಾಲಾದಲ್ಲಿ ಟ್ರ್ಯಾಕ್ಟರ್‍ನಲ್ಲಿ ಗ್ರಾಮಸ್ಥರನ್ನು ಕರೆದೊಯ್ಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಗ್ರಾಮಸ್ಥರನ್ನು ಕರೆದೊಯ್ಯುವ ಟ್ರ್ಯಾಕ್ಟರ್ ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಅನಿಲ್ (30), ವಿನೋದ್ (36), ತೇಜ್‍ಪಾಲ್ (32), ಚೋಟೇಲಾಲ್ (35), ಅಂಕಿತ್ (24) ಮತ್ತು ಟ್ರಾಕ್ಟರ್ ಚಾಲಕ ಚೋಟಾ (21) ಮೃತಪಟ್ಟಿದ್ದಾರೆ.

ಘಟನೆ ವೇಳೆ ಸುಮಾರು 15 ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಸಲಾಗಿದೆ. ಟ್ಯಾಂಕರ್ ಚಾಲಕನನ್ನು ಬಂಧಿಸಲಾಗಿದ್ದು, ಕೊಟ್ವಾಲಿ ಸೀತಾಪುರದಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಲಿಯಾದಲ್ಲಿ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನದ ಸವಾರರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲಲ್ಲಿ ಸಾವಿಗೀಡಾದರು. ಮುಜಾಫರ್‍ಪುರನಲ್ಲಿ ಬೈಕ್‍ನಲ್ಲಿ ತೆರಳುತ್ತಿದ್ದ ಮೂವರಿಗೆ ಕಾರು ಅಪ್ಪಳಿಸಿ ಇಬ್ಬರು ಮೃತಪಟ್ಟು ಒಬ್ಬನಿಗೆ ತೀವ್ರ ಗಾಯವಾಗಿದೆ.

Facebook Comments