ಮಹಾಮಳೆಯಿಂದ ಆಂಧ್ರದಲ್ಲಿ ಪ್ರವಾಹ, ರಸ್ತೆ, ರೈಲು ಮಾರ್ಗಗಳು ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

ಅಮರಾವತಿ, ನ.21- ಪೆನ್ನಾ ನದಿಯು ಉಕ್ಕಿ ಹರಿದು ತೀವ್ರ ವಿಧ್ವಂಸ ಉಂಟು ಮಾಡಿದ ಹಿನ್ನೆಲೆಯಲ್ಲಿ ದಕ್ಷಿಣ ಮತ್ತು ಪೂರ್ವಕ್ಕೆ ಸಂಪರ್ಕ ಕಲ್ಪಿಸುವ ಆಂಧ್ರಪ್ರದೇಶದ ಪ್ರಮುಖ ಮತ್ತು ರಸ್ತೆ ಮಾರ್ಗಗಳು ಸಂಪರ್ಕ ಕಡಿದುಕೊಂಡಿವೆ. ಪದುಗುಪಡುವಿನಲ್ಲಿ ರಸ್ತೆಯ ಮೇಲೆ ಪ್ರವಾಹದ ನೀರು ಹರಿಯುತ್ತಿರುವುದರಿಂದ ಎಸ್‍ಪಿಎಸ್ ನೆಲ್ಲೂರು ಜಿಲ್ಲೆಯಲ್ಲಿ ಚೆನ್ನೈ-ಕೊಲ್ಕೊತಾ ರಾಷ್ಟ್ರೀಯ ಹೆದ್ದಾರಿ-16ರಲ್ಲಿ ರಸ್ತೆ ಸಂಚಾರ ನಿರ್ಬಂಸಬೇಕಾಯಿತು.

ಪದುಗುಪಡುವಿನಲ್ಲಿ ರೈಲು ಹಳಿಗಳ ಮೇಲೆ ಪ್ರವಾಹದ ನೀರು ಉಕ್ಕುತ್ತಿರುವ ಕಾರಣ ಚೆನ್ನೈ-ವಿಜಯವಾಡ ಗ್ರ್ಯಾಂಡ್ ಟ್ರಂಕ್ ಮಾರ್ಗದಲ್ಲಿ ಕನಿಷ್ಠ ಪಕ್ಷ 17 ಎಕ್ಸ್‍ಪ್ರೆಸ್ ರೈಲುಗಳನ್ನು ರದ್ದುಪಡಿಸಲಾಗಿದೆ. ಇತರ ಮೂರು ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದೆ ಅಥವಾ ಬದಲಿ ಮಾರ್ಗದಲ್ಲಿ ಕಳುಹಿಸಲಾಗಿದೆ.

ಸೋಮಶಿಲಾ ಜಲಾಶಯದಿಂದ ಎಸ್‍ಪಿಎಸ್ ನೆಲ್ಲೂರು ಜಿಲ್ಲೆಯಲ್ಲಿ ಎರಡು ಲಕ್ಷ ಕ್ಯೂಸೆಕ್ಸ್‍ಗಳಿಗೂ ಅಕ ಪ್ರವಾಹದ ನೀರು ಉಕ್ಕೇರಿ ನುಗ್ಗುತ್ತಿದ್ದು, ಮುಳುಗಡೆಗೆ ಕಾರಣವಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಕಾರ ತಿಳಿಸಿದೆ.

ಇದು ಕೋವೂರುವಿನಲ್ಲಿಯೂ ರಾಷ್ಟ್ರೀಯ ಹೆದ್ದಾರಿ -16ರ ಮೇಲೆ ನೀರು ಹರಿಯಲು ಕಾರಣವಾಗಿದೆ. ಅದೇ ವೇಳೆ ನೆಲ್ಲೂರು ಮತ್ತು ವಿಜಯವಾಡದ ನಡುವೆ ರಾಷ್ಟ್ರೀಯ ಹೆದ್ದಾರಿ-16ರಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ನೂರಾರು ವಾಹನಗಳು ಕಿಲೋ ಮೀಟರ್‍ಗಟ್ಟಲೆ ಸಾಲುಗಟ್ಟಿ ನಿಂತಿವೆ.

ಬಸ್ ಸಂಚಾರಕ್ಕೆ ಅಡಚಣೆ ಉಂಟಾಗಿರುವುದರಿಂದ ನೂರಾರು ಪ್ರಯಾಣಿಕರು ನೆಲ್ಲೂರು ಆರ್‍ಟಿಸಿ ಬಸ್ ನಿಲ್ದಾಣದಲ್ಲಿಯೇ ಸಿಲುಕಿಕೊಂಡಿದ್ದಾರೆ. ಶ್ರೀ ಕಾಳಹಸ್ತಿಯಿಂದ ಬರುತ್ತಿದ್ದ ವಾಹನಗಳನ್ನು ತೊತ್ತೆಮೇಡು ಚೆಕ್‍ಪೆÇೀಸ್ಟ್‍ನಲ್ಲಿ ತಡೆಯಲಾಗಿದ್ದು, ಪಾಮೂರು ಮತ್ತು ಡಾರ್ಸಿಯ ಮಾರ್ಗದಲ್ಲಿ ಕಳುಹಿಸಲಾಗಿದೆ. ಕಡಪಾ ಜಿಲ್ಲೆಯ ಕಮಲಾಪುರಂನಲ್ಲಿ ಪಾಪಾಗ್ನಿ ನದಿಯ ಮೇಲಿನ ಸೇತುವೆ ಕುಸಿದು ಬಿದ್ದಿದೆ. ತನ್ಮೂಲಕ ಕಡಪಾ ಮತ್ತು ಅನಂತಪುರಂ ಜಿಲ್ಲೆಗಳ ನಡುವಿನ ರಸ್ತೆ ಸಂಪರ್ಕ ಕಡಿದು ಹೋಗಿದೆ.

ವೇಲಿಗಲ್ಲು ಜಲಾಶಯದಿಂದ ನುಗ್ಗಿ ಬರುತ್ತಿರುವ ಪ್ರವಾಹದ ನೀರು ಸೇತುವೆ ಕುಸಿಯಲು ಕಾರಣವಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಕಡಪಾ ನಗರದಲ್ಲಿ ಇಂದು ನಸುಕಿನ ಜಾವ ಮೂರು ಅಂತಸ್ತುಗಳ ಕಟ್ಟಡ ಕುಸಿದು ಬಿದ್ದಿದೆ. ಘಟನೆ ನಡೆಯುವ ಮುನ್ನವೇ ಅದರೊಳಗಿದ್ದವರು ಹೊರಗೆ ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ. ಎರಡನೆ ಮಹಡಿಯಲ್ಲಿ ಸಿಲುಕಿದ್ದ ತಾಯಿ ಮತ್ತು ಮಗುವನ್ನು ಪೊಲೀಸ್ ಮತ್ತು ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ರಕ್ಷಿಸಿದ್ದಾರೆ.

Facebook Comments