ಎಟಿಎಂ ದರೋಡೆಗೆ ವಿಫಲ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.10- ಬ್ಯಾಂಕ್‍ವೊಂದರ ಎಟಿಎಂ ದರೋಡೆಗೆ ವಿಫಲ ಯತ್ನ ನಡೆಸಿರುವ ಘಟನೆ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಾಂತಿನಿಕೇತನ ಲೇಔಟ್‍ನಲ್ಲಿರುವ ಬ್ಯಾಂಕ್‍ವೊಂದರ ಎಟಿಎಂಗೆ ರಾತ್ರಿ ಚೋರರು ದರೋಡೆಗೆ ಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರನ್ನು ಕಂಡು ದರೋಡೆಕೋರರು ಪರಾರಿಯಾಗಿದ್ದಾರೆ.  ಸ್ಥಳಕ್ಕಾಗಮಿಸಿದ ಪೊಲೀಸರು ಸಿಸಿಟಿವಿಯ ಫುಟೇಜ್ ಪಡೆದು ದರೋಡೆಕೋರರಿಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments