ಪೊಲೀಸರಿಗೆ ಸಿಕ್ತು 70ಕೆಜಿ ಚಿನ್ನ ಕದ್ದ ಆರೋಪಿಗಳ ಸುಳಿವು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.25- ಹೆಣ್ಣೂರು ಬಾಣಸವಾಡಿ ಮುಖ್ಯರಸ್ತೆಯ ಲಿಂಗರಾಜಪುರ ಫ್ಲೈಓವರ್ ಬಳಿ ಇರುವ ಮುತ್ತೂಟ್ ಫೈನಾನ್ಸ್ ಸಂಸ್ಥೆಯಲ್ಲಿ 77 ಕೆಜಿ ಚಿನ್ನ ಕಳ್ಳತನ ಮಾಡಿ ಪರಾರಿಯಾಗಿರುವ ಆರೋಪಿಗಳ ಸುಳಿವು ಪತ್ತೆಯಾಗಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಪೂರ್ವವಿಭಾಗದ ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡ ರಚಿಸಲಾಗಿದೆ. ಘಟನಾ ಸ್ಥಳದಲ್ಲಿ ಹಲವಾರು ಮಾಹಿತಿಗಳನ್ನು ಕಲೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಶನಿವಾರ ಮಧ್ಯರಾತ್ರಿ ಕೃತ್ಯ ನಡೆದಿದ್ದು, ಭಾನುವಾರ ರಜಾ ಇದ್ದಿದ್ದರಿಂದ ಕಚೇರಿಯ ಬಾಗಿಲು ತೆಗೆದಿರಲಿಲ್ಲ. ಹೀಗಾಗಿ ಘಟನೆ ಬಗ್ಗೆ ಯಾರಿಗೂ ಮಾಹಿತಿ ಸಿಕ್ಕಿರಲಿಲ್ಲ.

ಸೋಮವಾರ ಘಟನೆ ಬಗ್ಗೆ ತಿಳಿದುಬಂದಿದ್ದು, ದೂರು ದಾಖಲಿಸಲಾಗಿದೆ. ಸುತ್ತಮುತ್ತಲಿನ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗಿದೆ. ಆರೋಪಿಗಳ ಬಗ್ಗೆ ಸುಳಿವು ದೊರೆತಿದೆ ಎಂದು ಅವರು ಹೇಳಿದ್ದಾರೆ.

ಕಳ್ಳತನ ಮಾಡಿರುವ ಆರೋಪಿಗಳು ಮುತ್ತೂಟ್ ಫೈನಾನ್ಸ್‍ಗೆ ಹೊಂದಿಕೊಂಡಿರುವ ಬಾತ್‍ರೂಂನಿಂದ ಗೋಡೆ ಕೊರೆದು ಒಳನುಸುಳಿದ್ದಾರೆ. ಸಿಸಿಟಿವಿ ಮತ್ತು ತಿಜೋರಿಯ ಅಲಾರಾಂ ಕ್ಲಾಕ್‍ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಗ್ಯಾಸ್ ಕಟರ್‍ನಿಂದ ತಿಜೋರಿಯನ್ನು ಕತ್ತರಿಸಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಡಿಸಿಪಿ ಅವರು ತಿಳಿಸಿದ್ದಾರೆ.

Facebook Comments