ದರೋಡೆಗೆ ಸಂಚು : ರೌಡಿ ಸಂತೋಷ ಮತ್ತು ಸಹಚರರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.4- ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿ ಸಂತೋಷ್ ಸೇರಿದಂತೆ ಆತನ ನಾಲ್ವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.  ಸಂತೋಷ್ ಅಲಿಯಾಸ್ ಮೂಳೆ(29), ಮಂಜುನಾಥ್(28), ಶಾಕೀರ್(22), ವಿನಯ್ ಕುಮಾರ್(28) ಮತ್ತು ಸಂದೀಪ್(28) ಬಂಧಿತ ದರೋಡೆಕೋರರು.

ಎಸ್‍ಆರ್ ನಗರ ವ್ಯಾಪ್ತಿಯ ಶ್ರೀನಿವಾಸ ಕಾಲೋನಿ ಮಿಷನ್ ರೋಡ್, ಎಸ್‍ಬಿಐ ಬ್ಯಾಂಕ್ ತಿರುವಿನ ರಸ್ತೆಯಲ್ಲಿ ದರೋಡೆಕೋರರು ನಿಂತುಕೊಂಡು ಒಂಟಿಯಾಗಿ ಹೋಗುವ ಸಾರ್ವಜನಿಕರಿಗೆ ಮಾರಕಾಸ್ತ್ರ ತೋರಿಸಿ ಹಣ, ಆಭರಣ ದೋಚಲು ಹೊಂಚು ಹಾಕುತ್ತಿದ್ದರು.

ಈ ಬಗ್ಗೆ ಮಾಹಿತಿ ತಿಳಿದ ಸಿಸಿಬಿ ಪೊಲೀಸರು ಸ್ಥಳಕ್ಕೆ ತೆರಳಿ ರೌಡಿ ಸಂತೋಷ್ ಸೇರಿದಂತೆ ಆತನ ನಾಲ್ವರು ಸಹಚರರನ್ನು ಬಂಧಿಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಆರ್‍ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಆರೋಪಿ ಸಂತೋಷ್ ಎಸ್‍ಆರ್ ನಗರ ಠಾಣೆಯ ರೌಡಿ ಶೀಟರ್, ಈತನ ಮೇಲೆ ಕೊಲೆಯತ್ನ, ದರೋಡೆಗೆ ಯತ್ನ, ಪ್ರಕರಣ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 14 ಪ್ರಕರಣಗಳು ದಾಖಲಾಗಿವೆ.

ಕಳೆದ ಆಗಸ್ಟ್ ನಲ್ಲಿ ತನ್ನ ಎದುರಾಳಿ ಪ್ರವೀಣ್ ಎಂಬಾತನ ಕೊಲೆಗೆ ಯತ್ನಿಸಿದ್ದ ಬಗ್ಗೆ ಎಸ್‍ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನಿಂದ ಆರೋಪಿ ಸಂತೋಷ್ ತಲೆ ಮರೆಸಿಕೊಂಡಿದ್ದರು. ಆರೋಪಿ ಮಂಜುನಾಥ್ ಕೆಪಿ ಆಗ್ರಹಾರ ಠಾಣೆಯ ರೌಡಿ ಶೀಟರ್, ಈತನ ಮೇಲೆ ಕೊಲೆಯತ್ನ, ದರೋಡೆಯತ್ನ ಹಲ್ಲೆ ಸೇರಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿವೆ.

ಮತ್ತೊಬ್ಬ ಆರೋಪಿ ವಿನಯ್, ಎಸ್‍ಆರ್ ನಗರ ಠಾಣೆಯ ರೌಡಿ ಶೀಟರ್. ಈತನ ಮೇಲೆ ಎಸ್‍ಆರ್ ನಗರ, ಕೆಪಿ ಅಗ್ರಹಾರ ಮತ್ತು ಮಳವಳ್ಳಿ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿವೆ. ಆರೋಪಿ ಸಂದೀಪ್ ಸಹ ಎಸ್‍ಆರ್ ನಗರ ಠಾಣೆಯ ರೌಡಿ ಶೀಟರ್ ಆಗಿದ್ದು, ಈತನ ಮೇಲೆ ದರೋಡೆ, ಕೊಲೆಯತ್ನ ಪ್ರಕರಣಗಳು ದಾಖಲಾಗಿವೆ.

ಈ ಕಾರ್ಯಾಚರಣೆಯನ್ನು ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತರಾದ ಜಗನ್ನಾಥ್ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್‍ಗಳಾದ ಅಂಜನ್ ಕುಮಾರ್, ಹರೀಶ್ ಮತ್ತು ಸಿಬ್ಬಂದಿ ಯಶಸ್ವಿಯಾಗಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Facebook Comments