ಮಾಂಗಲ್ಯ ಸರ ದೋಚಿದ್ದ ಇಬ್ಬರು ಚೋರರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.19- ಮನೆ ಮುಂದೆ ಮಗುವನ್ನು ಆಟವಾಡಿಸುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದ ಇಬ್ಬರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿ 12 ಲಕ್ಷ ರೂ. ಬೆಲೆಯ 275 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಭಾನು ಇರಾನಿ ಮತ್ತು ಅವುನು ಇರಾನಿ ಬಂಧಿತರು. ಕಳೆದ ಅಕ್ಟೋಬರ್ 20 ರಂದು ಮಹಿಳೆ ಮಾಂಗಲ್ಯ ಸರ ಅಪಹರಿಸಿ ಆಕ್ಟಿವ್ ಹೊಂಡಾ ಸ್ಕೂಟರ್‍ನಲ್ಲಿ ಚೋರರು ಪರಾರಿಯಾಗಿದ್ದ ಬಗ್ಗೆ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಆರೋಪಿಗಳ ಬಂಧನದಿಂದ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 2 ಕನ್ನಕಳವು ಮತ್ತು 2 ಮನೆಕಳವು ಹಾಗೂ ಮಾಗಡಿರಸ್ತೆ ಬಸವೇಶ್ವರನಗರ ಠಾಣೆಯ ತಲಾ ಒಂದೊಂದು ಮನೆಕಳವು ಪ್ರಕರಣ ಸೇರಿ ಒಟ್ಟು 6 ಪ್ರಕರಣಗಳಿಗೆ ಸಂಬಂಧಿಸಿದಂತೆ 12 ಲಕ್ಷ ಬೆಲೆಯ ಆಭರಣ ವಶಪಡಿಸಿಕೊಂಡಿದ್ದಾರೆ.

Facebook Comments