ಕೆಲಸ ಕೊಡಿಸುವುದಾಗಿ ನಂಬಿಸಿ ಆಭರಣ ದೋಚುತ್ತಿದ್ದ ವಂಚಕನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.22- ಅಮಾಯಕ ಮಹಿಳೆಯರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸದಿಂದ ಚಿನ್ನಾಭರಣ ದೋಚುತ್ತಿದ್ದ ವಂಚಕನನ್ನು ಸುಬ್ರಹ್ಮಣ್ಯಪುರ ಠಾಣೆ ಪೆÇಲೀಸರು ಬಂಧಿಸಿ 8.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ 1.15 ಬೆಲೆಯ ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ. ಹೇಮಂತ ಅಲಿಯಾಸ್ ಹೇಮಂತ್‍ಕುಮಾರ್ ಅಲಿಯಾಸ್ ಭೈರೇಗೌಡ(32) ಬಂಧಿತ ವಂಚಕನಾಗಿದ್ದು, ಈತನ ಬಂಧನದಿಂದ ಒಟ್ಟು 10 ಪ್ರಕರಣಗಳು ಬೆಳಕಿಗೆ ಬಂದಿವೆ.

ಸುಬ್ರಹ್ಮಣ್ಯಪುರ ಸೇರಿದಂತೆ ನಗರದ ವಿವಿಧ ಠಾಣಾ ಸರಹದ್ದುಗಳಲ್ಲಿ ಮಹಿಳೆಯರಿಗೆ ವಿವಿಧ ಪ್ರತಿಷ್ಠಿತ ಮಾಲ್‍ಗಳಲ್ಲಿ ನಾನು ಸೂಪರ್‍ವೈಸರ್ ಆಗಿದ್ದು ನಿಮಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಆಟೋದಲ್ಲಿ ಅವರನ್ನು ಕರೆದುಕೊಂಡು ಸ್ವಲ್ಪ ದೂರ ಹೋದ ನಂತರ ಆಟೋ ನಿಲ್ಲಿಸಿ ಕೆಲಸಕ್ಕೆ ಸೇರಿಕೊಳ್ಳುವ ಮೊದಲು ಅಡ್ವಾನ್ಸ್ ಕೊಡಬೇಕೆಂದು ನಂಬಿಸುತ್ತಿದ್ದನು.
ಅಡ್ವಾನ್ಸ್ ಕೊಡಲು ಹಣ ಇಲ್ಲದವರಿಂದ ಚಿನ್ನದ ಒಡವೆಗಳನ್ನು ಗಿರವಿ ಇಡುವುದಾಗಿ ಅವರ ಮನವೊಲಿಸಿ ಮಹಿಳೆಯರಿಂದ ಮಾಂಗಲ್ಯ ಸರ, ಚಿನ್ನದ ಗುಂಡು, ಲಕ್ಷ್ಮಿ ಕಾಸು , ತಾಳಿ ಬಿಚ್ಚಿಸಿಕೊಂಡು ಕೆಲಸ ಕೊಡುವ ಮೇಡಂ ಬಳಿ ಕೇಳಿಕೊಂಡು ಬರುವುದಾಗಿ ಹೇಳಿ ಪರಾರಿಯಾಗಿದ್ದನು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸುಬ್ರಹ್ಮಣ್ಯ ಠಾಣೆ ಪೆÇಲೀಸರು ವಂಚಕನಿಗಾಗಿ ತನಿಖೆ ಕೈಗೊಂಡು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಬಂಧನದಿಂದ ಸುಬ್ರಹ್ಮಣ್ಯಪುರ 2 ಪ್ರಕರಣ, ಬಂಡೆಪಾಳ್ಯ, ಕೆಂಗೇರಿ, ಹುಳಿಮಾವು ಠಾಣೆಯ ತಲಾ ಒಂದು ಪ್ರಕರಣ, ಕೋಣನಕುಂಟೆ 3, ಬೊಮ್ಮನಹಳ್ಳಿ ಠಾಣೆಯ 2 ಪ್ರಕರಣಗಳು ಬೆಳಕಿಗೆ ಬಂದಿವೆ.

ದಕ್ಷಿಣ ವಿಭಾಗದ ಉಪಪೆÇಲೀಸ್ ಆಯುಕ್ತ ಡಾ.ರೋಹಿಣಿ ಕಟೋಚ್ ಸಪಟ್ ಮಾರ್ಗದರ್ಶನದಲ್ಲಿ ಎಸಿಪಿ ಮಹಾದೇವ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಪರಮೇಶ್ ಅವರನ್ನೊಳಗೊಂಡ ತಂಡ ಆರೋಪಿಯನ್ನು ಪತ್ತೆಹಚ್ಚಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Facebook Comments