ಚರ್ಚೆಗೆ ಕಾರಣವಾಗಿದೆ ‘ ರಾಬರ್ಟ್’ ಟ್ರೇಲರ್‌ನ ಆ ಡೈಲಾಗ್..!

ಈ ಸುದ್ದಿಯನ್ನು ಶೇರ್ ಮಾಡಿ

ಸಿನಿಮಾದಲ್ಲಿ ಒಬ್ಬ ಹೀರೋ ಹರಿಬಿಡುವ ಡೈಲಾಗ್‍ಗಳಿಗೆ ಪ್ರೇಕ್ಷಕರು, ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹಾಕೋದುಂಟು. ಆದರೆ, ಆ ಡೈಲಾಗ್‍ಗಳಲ್ಲಿ ಕೆಲವು ಸೂಕ್ಷ್ಮ ವಿಚಾರಗಳೂ ಇರುತ್ತವೆ ಅನ್ನೋದು ಕೇವಲ ಆ ಸಿನಿಮಾ ನಿರ್ದೇಶಕ, ನಾಯಕನಿಗಷ್ಟೇ ಗೊತ್ತಿರುತ್ತೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ಕೆಲವು ಸ್ಟಾರ್ ನಟರು ಅಂತಹ ಡೈಲಾಗ್ ಮೂಲಕ ಸುದ್ದಿಯಾಗಿರೋದುಂಟು. ಆ ಡೈಲಾಗ್ ಕೇಳಿದವರಿಗೂ ಅದು ಇವರಿಗೇ ಟಾಂಗ್ ಕೊಟ್ಟಿದ್ದಾರೆ ಅನ್ನೋದು ಗೊತ್ತಾಗುತ್ತೆ. ಅದನ್ನು ಪಂಚಿಂಗ್ ಡೈಲಾಗ್ ಅನ್ನುತ್ತಲೇ ಅಭಿಮಾನಿಗಳು ಹೀರೋಗೆ ಜೈ ಎನ್ನುತ್ತಲೇ ಇದ್ದಾರೆ. ಇಲ್ಲೀಗ ಅಂತಹ ಪಂಚಿಂಗ್ ಡೈಲಾಗ್ ಹೇಳಿ, ಟಾಂಗ್ ಕೊಟ್ಟಿರುವ ಬಗ್ಗೆ ಹೇಳೋಕೆ ಕಾರಣ, `ರಾಬರ್ಟ್’ ಚಿತ್ರದ ಟ್ರೇಲರ್.

ಹೌದು, ದರ್ಶನ್ ಅವರ ಹುಟ್ಟುಹಬ್ಬಕ್ಕೆ ಬಿಡುಗಡೆಯಾದ ರಾಬರ್ಟ್ ಚಿತ್ರದ ಟ್ರೇಲರ್, ಸಖತ್ ಸೌಂಡು ಮಾಡುತ್ತಿದೆ ಎಂಬ ವಿಚಾರ ಒಂದಡೆಯಾದರೆ, ಅವರು ಆ ಟ್ರೇಲರ್‍ನಲ್ಲಿ ಹೇಳಿರುವ ಡೈಲಾಗ್ ಯಾರಿಗೋ ಟಾಂಗ್ ಕೊಟ್ಟಿರುವಂತೆಯೂ ಇದೆ. ಆದರೆ, ಅದೆಲ್ಲದ್ದಕ್ಕೂ ಸ್ಪಷ್ಟನೆ ಸಿಗಬೇಕಾದರೆ, ಸಿನಿಮಾ ಬರುವವರೆಗೂ ಕಾಯಲೇಬೇಕು. ಇಷ್ಟಕ್ಕೂ ಆ ಟ್ರೇಲರ್‍ನಲ್ಲಿ ದರ್ಶನ್ ಹರಿಬಿಟ್ಟ ಡೈಲಾಗ್ ಬಗ್ಗೆ ಹೇಳುವುದಾದರೆ, ಏ ತುಕಾಲಿ ನೀನ್ ಮಾಸ್ ಆದ್ರೆ, ನಾನು ಆ ಮಾಸ್‍ಗೆ…. ಹೀಗೆ ದರ್ಶನ್ ಡೈಲಾಗ್ ಹೇಳ್ತಾರೆ. ಇದು ಯಾರಿಗೆ ಹೇಳಿದ್ದು ಅನ್ನೋದು ಸಿನಿಮಾದಲ್ಲೇ ಗೊತ್ತಾಗುತ್ತೆ.

ಆದರೆ, ಈ ಡೈಲಾಗ್ ಯಾರಿಗೋ ಟಾಂಗ್ ಕೊಟ್ಟಂತಿದೆಯಲ್ಲಾ ಅನ್ನೋದು ಒಂದು ಪ್ರಶ್ನೆ ಎದುರಾಗುತ್ತೆ. ಇದು ನಿಜಕ್ಕೂ ಚೆನ್ನಾಗಿಯೇ ರೆಡಿಯಾದ ಟ್ರೇಲರ್. ಟ್ರೇಲರ್ ನೋಡಿದ ದರ್ಶನ್ ಅಭಿಮಾನಿಗಳು ಹಬ್ಬದಂತೆಯೇ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ, ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಟ್ರೇಲರ್‍ನಲ್ಲಿ ಭರ್ಜರಿ ಮಾಸ್ ಡೈಲಾಗ್‍ಗಳಿವೆ. ಅದರಲ್ಲೂ, ಮೇಕಿಂಗ್ ಕೂಡ ಇಲ್ಲಿ ಮಾತಾಡುತ್ತದೆ. ಟ್ರೇಲರ್ ನೋಡಿದವರಿಗೆ ರಾಬರ್ಟ್ ದರ್ಶನ ಮಾಡಲೇಬೇಕು ಎಂಬಷ್ಟರ ಮಟ್ಟಿಗೆ ನಿರ್ದೇಶಕ ತರುಣ್‍ಸುಧೀರ್ ಅವರು ಟ್ರೇಲರ್ ಮೇಲೆ ಫೋಕಸ್ ಮಾಡಿದ್ದಾರೆ. ಟ್ರೇಲರ್ ನೋಡಿದವರಿಗೆ ಸಿನಿಮಾದ ಕ್ವಾಲಿಟಿ ಮತ್ತು ಅದ್ಧೂರಿತನಕ್ಕೆ ಮೋಸವಾಗಿಲ್ಲ ಅನ್ನೋದು ಗೊತ್ತಾಗುತ್ತೆ. ದರ್ಶನ್ ಅವರ ಹೊಸ ಲುಕ್ ಕೂಡ ಮೋಡಿ ಮಾಡುತ್ತದೆ.

ಏ ತುಕಾಲಿ ನೀ ಮಾಸ್ ಆದ್ರೆ, ನಾನು ಆ ಮಾಸ್‍ಗೆ.. ಎಂಬ ಡೈಲಾಗ್ ಕೇಳಿದವರಿಗೆ ದರ್ಶನ್ ಅವರು ಯಾರಿಗೆ ಈ ಡೈಲಾಗ್ ಮೂಲಕ ಟಾಂಗ್ ಕೊಟ್ಟಿದ್ದಾರೆ ಎಂಬ ಪ್ರಶ್ನೆಗಳೂ ಗಿರಕಿ ಹೊಡೆಯುತ್ತವೆ. ಅಷ್ಟೇ ಅಲ್ಲ, ಅವರ ಇನ್ನೊಂದು ಡೈಲಾಗ್ ಕೂಡ ಅಂಥದ್ದೊಂದು ಪ್ರಶ್ನೆಗೂ ಕಾರಣವಾಗುತ್ತೆ. ಒಬ್ಬರ ಲೈಫಲ್ಲಿ ನಾವು ಹೀರೋ ಆಗಬೇಕೆಂದರೆ, ಇನ್ನೊಬ್ಬರ ಲೈಫಲ್ಲಿ ನಾವ್ ವಿಲನ್ ಆಗಲೇಬೇಕು… ಎಂಬ ಡೈಲಾಗ್ ಕೇಳಿದವರಿಗೆ ಇಲ್ಲಿ ದರ್ಶನ್ ಯಾರ ಲೈಫ್‍ಗೆ ವಿಲನ್ ಆಗಿದ್ದಾರೆ?

ಅವರು ಯಾರ ಕುರಿತಾಗಿ ಈ ಡೈಲಾಗ್ ಹೇಳಿದ್ದಾರೆ ಅನ್ನೋ ಪ್ರಶ್ನೆ ಕೂಡ ಸಹಜವಾಗಿಯೇ ಮೂಡುತ್ತೆ. ಮತ್ತೊಂದು ಡೈಲಾಗ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲೂ ಒಂದು ಟಾಂಗ್ ಇದೆ. ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು. ರಾವಣ ಮುಂದೆ ಗೆಲ್ಲೇದು ಗೊತ್ತು… ಈ ಕೌಂಟ್‍ಡೌನ್ ಸ್ಟಾಟ್ರ್ಸ್’ ಎಂದು ಬರುವ ಡೈಲಾಗ್ ಕೂಡ ಸಖತ್ ಮಾಸ್ ಆಗಿದೆ.

ಅದೆಲ್ಲೇ ಏನೇ ಇದ್ದರೂ, ರಾಬರ್ಟ್ ಚಿತ್ರ ನೋಡಿದಾಗಲೇ, ದರ್ಶನ್ ಅವರ ಈ ಡೈಲಾಗ್ ಅಲ್ಲಿರುವ ವಿಲನ್‍ಗಾಗಿಯೇ ಹೇಳಿದ್ದು ಅಂತ ಗೊತ್ತಾಗುತ್ತೆ. ಒಂದಂತೂ ನಿಜ, ರಾಬರ್ಟ್ ಚಿತ್ರ ನೋಡೋಕೆ ಅವರ ಅಭಿಮಾನಿಗಳು ತುದಿಗಾಲ ಮೇಲೆ ನಿಂತಿದ್ದಾರೆ. ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ಭಾಷೆಯಲ್ಲೂ ರಾಬರ್ಟ್ ಚಿತ್ರ ಮಾರ್ಚ್ 11 ರಂದು ತೆರೆಗೆ ಬರುತ್ತಿದೆ.

Facebook Comments