ಅಭಿಮಾನಿಗಳಿಗೆ ಮುದ್ದಿನ ಮಗಳನ್ನು ಪರಿಚಯಿಸಿದ ಯಶ್, Baby YR ಫೋಟೋ ವೈರಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 7-ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ತಮ್ಮ ಪುತ್ರಿಯ ಫೋಟೊವನ್ನು ಇಂದು ರಿವೀಲ್ ಮಾಡಿದ್ದಾರೆ. ರಾಧಿಕಾ ಪಂಡಿತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪುತ್ರಿಯ ಫೋಟೋಗಳನ್ನು ಹಂಚಿಕೊಂಡು, ತಮ್ಮ ಅಮೂಲ್ಯವಾದ ಖುಷಿಯನ್ನು ಪರಿಚಯಿಸುತ್ತಿರುವುದು ಸಂತೋಷದ ವಿಷಯವಾಗಿದೆ.

ಇನ್ನು ಮಗುವಿಗೆ ನಾಮಕರಣ ಮಾಡಿಲ್ಲ. ಹೆಸರು ಇಡುವವರೆಗೂ ಬೇಬಿವೈಆರ್ ಎಂದು ಕರೆಯಿರಿ ಹಾಗೂ ನಮ್ಮ ಮಗುವಿಗೆ ಆಶೀರ್ವಾದವಿರಲಿ ಎಂದು ಫೋಸ್ಟ್ ಮಾಡಿದ್ದಾರೆ.  ನಟ ಯಶ್ ಕೂಡಾ ಇನ್‍ಸ್ಟ್ರಾಗ್ರಾಂ ಹಾಗೂ ಟ್ವೀಟರ್‍ನಲ್ಲಿ ತಮ್ಮ ಪುತ್ರಿಯ ಫೋಟೋ ಹಂಚಿಕೊಂಡಿದ್ದಾರೆ.

ಅಕ್ಷಯ ತೃತೀಯದಂದು ಮಗುವಿನ ಫೋಟೋವನ್ನು ರಿವೀಲ್ ಮಾಡುವುದಾಗಿ ನಿನ್ನೆ ಇನ್‍ಸ್ಟ್ರಾಗ್ರಾಂನಲ್ಲಿ ರಾಧಿಕಾ ಹೇಳಿಕೊಂಡಿದ್ದು, ಅದರಂತೆ ಇದು ಪುತ್ರಿಯ ಫೋಟೋ ರಿವೀಲ್ ಮಾಡಿದ್ದಾರೆ.

ನಟ ರಾಕಿಂಗ್ ಸ್ಟಾರ್ ಯಶ್ ತಮ್ಮ ಇನ್ ಸ್ಟಾ ಗ್ರಾಂ ಹಾಗೂ ಫೇಸ್ ಬುಕ್ ನಲ್ಲಿ ತಮ್ಮ ಮಗಳ ಪೋಟೋವನ್ನು ಶೇರ್ ಮಾಡಿದ್ದರೇ, ಮತ್ತೊಂದೆಡೆ ನಟಿ ರಾಧಿಕಾ ಪಂಡಿತ್ ತಮ್ಮ ಇನ್ ಸ್ಟಾಗ್ರಾಂ ಮತ್ತು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ.

ಅಂದಹಾಗೇ ನಟ ಯಶ್, ನಟಿ ರಾಧಿಕಾ ಪಂಡಿತ್ 2016ರ ಡಿಸೆಂಬರ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.2018ರ ಡಿಸೆಂಬರ್ 2ರಂದು ರಾಧಿಕಾ ಪಂಡಿತ್ ಹೆಣ್ಣ ಮಗುವಿಗೆ ಜನ್ಮ ನೀಡಿದ್ದರು. ಇಂತಹ ಯಶ್, ರಾಧಿಕ ದಂಪತಿಗಳ ಮಗಳ ಪೋಟೋ ಇದುವರೆಗೆ ಎಲ್ಲೂ ಪ್ರಕಟಿಸಿರಲಿಲ್ಲ.

ಇಲ್ಲಿಯವರೆಗೂ ಪುತ್ರಿಯ ಫೋಟೋವನ್ನು ಎಲ್ಲಿಯೂ ಕೂಡ ಶೇರ್ ಮಾಡಿಕೊಂಡಿರಲಿಲ್ಲ. ಅಕ್ಷಯ ತೃತೀಯದಂದೇ ಫೋಟೋ ರಿವೀಲ್ ಮಾಡುವುದಾಗಿ ಸ್ಯಾಂಡಲ್‍ವುಡ್‍ನ ತಾರಾ ಜೋಡಿ ಯಶ್-ರಾಧಿಕಾ ದಂಪತಿ ಅದರಂತೆ ಇಂದು ಮಗಳ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ. ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೀಕ್ಷಿಸಿ ಫುಲ್ ಖುಷಿಪಟ್ಟು ಆಶೀರ್ವಾದ ಮಾಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin