ರಾಕಿಂಗ್ ಸ್ಟಾರ್ ಯಶ್ ಗೋವಾ ಸಿಎಂ ಭೇಟಿ ಮಾಡಿದ್ದೇಕೆ..?

ಈ ಸುದ್ದಿಯನ್ನು ಶೇರ್ ಮಾಡಿ

ಪಣಜಿ, ಮೇ 4- ಕೆಜಿಎಫ್ ಚಿತ್ರದ ಮೂಲಕ ವಿಶ್ವ ನಟನಾಗಿರುವ ರಾಕಿಂಗ್ ಸ್ಟಾರ್ ಯಶ್ರ ಖದರ್ ನಿಲ್ಲುವ ಸೂಚನೆಗಳೇ ಇಲ್ಲ, ಚಿತ್ರರಂಗದ ಇತಿಹಾಸದಲ್ಲಿ ಆ ಸಿನಿಮಾ ದೊಡ್ಡ ಸದ್ದು ಮಾಡಿತ್ತು. ಈಗ ಕೆಜಿಎಫ್ 2 ಚಿತ್ರದ ಸರದಿ. ಈ ಸಿನಿಮಾವು ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಈಗಾಗಲೇ 1100 ಕೋಟಿ ಗಳಿಸುವ ಮೂಲಕ ದಾಖಲೆ ಬರೆದಿದೆ.

ಈ ನಡುವೆ ರಾಕಿ ಭಾಯ್ ಯಶ್ ಹಾಗೂ ತಾರಾ ಪತ್ನಿ ರಾಕಾ ಪಂಡಿತ್ ಅವರು ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರನ್ನು ಪಣಜಿಯಲ್ಲಿ ಭೇಟಿ ಆಗಿ ಚರ್ಚೆ ನಡೆಸಿದ್ದಾರೆ, ಸಾವಂತ್ ಅವರು ಆ ಚಿತ್ರವನ್ನು ತಮ್ಮ ಟ್ವಿಟ್ನಲ್ಲಿ ಹಾಕಿಕೊಂಡಿರುವುದಲ್ಲದೆ ಕೆಜಿಎಫ್ 2 , ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ರ ಕಾರ್ಯವೈಖರಿಯನ್ನು ಪ್ರಶಂಸಿಸಿದ್ದಾರೆ.

ಇಂದು ಯಶ್ ಹಾಗೂ ರಾಕಾ ಪಂಡಿತ್ ಅವರು ಪಣಜಿಯಲ್ಲಿ ನನ್ನನ್ನು ಭೇಟಿ ಮಾಡಿದ್ದು, ಕೆಜಿಎಫ್ 2ನ ಸೂಪರ್ ಸ್ಟಾರ್ ಯಶ್ರನ್ನು ಭೇಟಿ ಆದ ಸಂದರ್ಭ ನಿಜಕ್ಕೂ ರೋಚಕವಾಗಿತ್ತು ಎಂದು ಟ್ವಿಟ್ಟರ್ನಲ್ಲಿ ಹೇಳಿದ್ದಾರೆ. ಕೆಜಿಎಫ್ 2 ಚಿತ್ರವು ಮಲಯಾಳಂನಲ್ಲೂ ಬಿಡುಗಡೆಯಾಗಿದ್ದು ಸಿನಿಮಾದ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ ಸರ್ಕಾರಕ್ಕೆ ಯಶ್ ಅವರು ಇದೇ ವೇಳೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮೋಹನ್ಲಾಲ್, ಮಮ್ಮುಟಿರಂತಹ ಸ್ಟಾರ್ ಸಿನಿಮಾಗಳ ನಡುವೆಯೂ ಯಶ್ರ ಕೆಜಿಎಫ್ 2 ಸಿನಿಮಾವು ಉತ್ತಮ ಕಲೆಕ್ಷನ್ ಮಾಡಿದೆ.
ನಟಿ ರಾಕಾ ಪಂಡಿತ್ ಅವರು ಕೂಡ ಈ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಾಕಷ್ಟು ಕಾಮೆಂಟ್ಸ್ , ಲೈಕ್ಸ್ಗಳು ಬಂದಿವೆ.

ಹೊಂಬಾಳೆ ಪ್ರೊಡಕ್ಷನ್ಸ್ ಮೂಲಕ ಮೂಡಿಬಂದಿರುವ ಕೆಜಿಎಫ್ 2 ಚಿತ್ರವನ್ನು ವಿಜಯ್ ಕಿರಂಗದೂರು ಅವರು ನಿರ್ಮಿಸಿದ್ದು, ಯಶ್ರೊಂದಿಗೆ ಬಾಲಿವುಡ್ ಕಲಾವಿದರಾದ ಸಂಜಯ್ದತ್, ರವೀನಾಟಂಡನ್, ಶ್ರೀನಿಶೆಟ್ಟಿ, ಪ್ರಕಾಶರೈ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ.

# ಬಾಲಿವುಡ್ನಲ್ಲೂ ಯಶ್ ಹವಾ:
ಕೆಜಿಎಫ್ 2 ಚಿತ್ರವು ಸ್ಯಾಂಡಲ್ವುಡ್ನಲ್ಲಿ ಮಾತ್ರವಲ್ಲ, ಭಾರತ ಚಿತ್ರರಂಗದ ದೊಡ್ಡ ಮನೆ ಎಂದೆನಿಸಿಕೊಂಡಿರುವ ಬಾಲಿವುಡ್ನಲ್ಲೂ ತನ್ನ ಹವಾ ಎಬ್ಬಿಸಿದ್ದು 200 ಕೋಟಿಗೂ ಹೆಚ್ಚು ಸಂಭಾವನೆಯನ್ನು ಗಳಿಸಿದೆ.

ಸುವ ಮೂಲಕ ಕನ್ನಡದ ಖದರ್ ಹೆಚ್ಚಿಸಿದ್ದಾರೆ.

Facebook Comments

Sri Raghav

Admin