ಸರಣಿ ಉಳಿಸಿಕೊಳ್ಳಲು ರೋಹಿತ್ ಪಡೆ ಹರಸಾಹಸ

ಈ ಸುದ್ದಿಯನ್ನು ಶೇರ್ ಮಾಡಿ

ರಾಜ್‍ಕೋಟ್, ನ.6- ಬಾಂಗ್ಲಾ ದೇಶ ವಿರುದ್ಧ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ರೋಹಿತ್ ಶರ್ಮಾ ಸಾರಥ್ಯದ ಟೀಂ ಇಂಡಿಯಾ ನಾಳೆ ಇಲ್ಲಿ ನಡೆಯಲಿರುವ 2ನೆ ಪಂದ್ಯವನ್ನು ಗೆಲ್ಲಲು ಹರಸಾಹಸ ಪಡುತ್ತಿದೆ.

ಮೊದಲ ಪಂದ್ಯದ ಸೋಲಿಗೆ ಕಾರಣವೇನೆಂಬುದನ್ನು ಅರಿತುಕೊಂಡಿರುವ ನಾಯಕ ರೋಹಿತ್ ಶರ್ಮಾ, ರಾಜ್‍ಕೋಟ್ ಪಂದ್ಯವನ್ನು ಹೇಗಾದರೂ ಮಾಡಿ ಗೆಲ್ಲಬೇಕೆಂಬ ಲೆಕ್ಕಾಚಾರ ಹಾಕಿದ್ದು, ಮೈದಾನದಲ್ಲಿ ಬೆರವಳಿಸುತ್ತಿದ್ದಾರೆ.

ಇಂದು ಕೂಡ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವ ಟೀಂ ಇಂಡಿಯಾ ಆಟಗಾರರು ತರಬೇತುದಾರ ರವಿಶಾಸ್ತ್ರಿ ನೀಡುತ್ತಿದ್ದ ಟಿಪ್ಸ್‍ಗಳನ್ನು ಅನುಸರಿಸಿಯೇ ಅಭ್ಯಾಸದಲ್ಲಿ ನಿರತರಾಗಿದ್ದರು. ಟೀಂ ಇಂಡಿಯಾದಲ್ಲಿ ರೋಹಿತ್‍ಶರ್ಮಾ, ಶಿಖರ್‍ಧವನ್, ಕೆ.ಎಲ್.ರಾಹುಲ್‍ರಂತಹ ಅನುಭವಿ ಬ್ಯಾಟ್ಸ್‍ಮನ್‍ಗಳಿದ್ದರೂ ಕೂಡ ಬಾಂಗ್ಲಾ ಬೌಲರ್‍ಗಳ ಎದುರು ಎಡವಿ 150 ರನ್‍ಗಳನ್ನು ಗಳಿಸಲು ಶಕ್ತರಾಗಿರಲಿಲ್ಲ.

ಅಂತಿಮ ಓವರ್‍ನಲ್ಲಿ ಕೂಡ ಬೌಲರ್ ಖಲೀಲ್ ಅಹ್ಮದ್ ಅವರು ಬಾಂಗ್ಲಾ ಬ್ಯಾಟ್ಸ್‍ಮನ್‍ಗಳ ಎದುರು ನಾಲ್ಕು ಬೌಂಡರಿಗಳನ್ನು ಬಿಟ್ಟು ಕೊಟ್ಟಿದ್ದರಿಂದ ಪಂದ್ಯವನ್ನು ಸೋಲಬೇಕಾಯಿತು. ನಾಳೆಯ ಪಂದ್ಯದಲ್ಲಿ ಹಿಂದಿನ ಪಂದ್ಯದ ತಪ್ಪುಗಳನ್ನು ತಿದ್ದುಕೊಂಡು ಮೈದಾನಕ್ಕಿಳಿಯಲು ರೋಹಿತ್ ಶರ್ಮಾ ತಂಡವು ಎದುರು ನೋಡುತ್ತಿದೆ.

Facebook Comments