ನಿಜವಾಯ್ತು ರೋಹಿತ್ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಅಹಮದಾಬಾದ್, ಮಾ. 19- ಹತ್ತು ವರ್ಷಗಳ ಹಿಂದೆ ಸೂರ್ಯಕುಮಾರ್ ಯಾದವ್ ವಿಷಯದಲ್ಲಿ ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಹೇಳಿದ್ದ ಭವಿಷ್ಯ ಈಗ ನಿಜವಾಗಿದೆ. 2011ರ ಬಿಸಿಸಿಐ ಅವಾಡ್ರ್ಸ್ ವೇಳೆ ಮಾತನಾಡಿದ್ದ ರೋಹಿತ್ ಶರ್ಮಾ ಅವರು, ಇದೀಗ ತಾನೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಗಿದಿದೆ, ಇನ್ನು ಕೆಲವು ಅತ್ಯುತ್ತಮ ಕ್ರಿಕೆಟಿಗರು ಭಾರತ ತಂಡಕ್ಕೆ ಬರಲಿದ್ದಾರೆ ಎಂದು ಹೇಳಿದ್ದರು.

ಅಲ್ಲದೆ ಅದೇ ಕಾರ್ಯಕ್ರಮದಲ್ಲಿ ಯುವ ಆಟಗಾರ ಸೂರ್ಯಕುಮಾರ್ ಯಾದವ್‍ಗೆ ಉತ್ತಮ ಭವಿಷ್ಯ ಎಂದು ಹೇಳಿ ಟ್ವಿಟ್ ಮಾಡಿದ್ದರು, ನಿನ್ನೆ ಇಂಗ್ಲೆಂಡ್ ವಿರುದ್ಧ ಚುಟುಕು ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ನಂತರ ರೋಹಿತ್ ಅದೇ ಟ್ವಿಟ್ ಅನ್ನು ರೀಟ್ವಿಟ್ ಮಾಡಿದ್ದಾರೆ.

Facebook Comments