ಸಚಿನ್‍ ದಾಖಲೆ ಮುರಿಯಲು ರೋಹಿತ್ ಕಾತರ..!

ಈ ಸುದ್ದಿಯನ್ನು ಶೇರ್ ಮಾಡಿ

ಮ್ಯಾಂಚೆಸ್ಟರ್, ಜು.9- ದಾಖಲೆ ಮೇಲೆ ದಾಖಲೆಯನ್ನು ನಿರ್ಮಿಸುತ್ತಿರುವ ಭಾರತ ತಂಡದ ಉಪನಾಯಕ ರೋಹಿತ್‍ಶರ್ಮಾ ಇಂದಿಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಸೆಮಿಪೈನಲ್ ಪಂದ್ಯದಲ್ಲೂ ಎರಡು ದಾಖಲೆಗಳನ್ನು ನಿರ್ಮಿಸಲು ಕಾತರದಿಂದಿದ್ದಾರೆ.

ಪ್ರಸಕ್ತ ವಿಶ್ವಕಪ್‍ನಲ್ಲಿ 5 ಸೆಂಚುರಿಯನ್ನು ಬಾರಿಸುವ ಮೂಲಕ ವಿಶ್ವಕಪ್‍ನಲ್ಲಿ ಶ್ರೀಲಂಕಾದ ಸ್ಪೋಟಕ ಆಟಗಾರ ಕುಮಾರಸಂಗಾಕ್ಕಾರ ಒಂದೇ ವಿಶ್ವಕಪ್‍ನಲ್ಲಿ 4 ಸೆಂಚುರಿಗಳನ್ನು ಮಾಡಿದ್ದ ದಾಖಲೆಯನ್ನು ಅಳಿಸಿ ಹಾಕಿರುವ ರೋಹಿತ್ ಈಗ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್‍ರ ಎರಡು ದಾಖಲೆಗಳನ್ನು ಒಂದೇ ಪಂದ್ಯದಲ್ಲಿ ಮುರಿಯಲು ಕಾತರದಿಂದಿದ್ದಾರೆ.

2003ರ ವಿಶ್ವಕಪ್‍ನಲ್ಲಿ ತಮ್ಮ ಬ್ಯಾಟ್‍ನಿಂದ 673 ರನ್‍ಗಳನ್ನು ಗಳಿಸಿ ದಾಖಲೆ ನಿರ್ಮಿಸಿದ್ದ ಸಚಿನ್‍ರನ್ನು ಸರಿಗಟ್ಟಲು ರೋಹಿತ್‍ಗೆ ಕೇವಲ 27 ರನ್‍ಗಳು ಬೇಕು. ರೋಹಿತ್ ಈಗಾಗಲೇ ಪ್ರಸಕ್ತ ವಿಶ್ವಕಪ್‍ನಲ್ಲಿ 8 ಪಂದ್ಯಗಳಿಂದ 647 ರನ್‍ಗಳನ್ನು ಗಳಿಸಿದ್ದು ನ್ಯೂಜಿಲೆಂಡ್ ಪಂದ್ಯದಲ್ಲಿ ಸಚಿನ್‍ರ ದಾಖಲೆಯನ್ನು ಮೆಟ್ಟಿ ನಿಲ್ಲಲಿದ್ದಾರೆ.

ಸಚಿನ್‍ತೆಂಡೂಲ್ಕರ್ ವಿಶ್ವಕಪ್‍ನಲ್ಲಿ 6 ಶತಕಗಳನ್ನು ಗಳಿಸಿರುವ ದಾಖಲೆಯನ್ನು ಮುರಿಯಲು ರೋಹಿತ್ ತುದಿಗಾಲಲ್ಲಿ ನಿಂತಿದ್ದಾರೆ. ಸಚಿನ್ 44 ವಿಶ್ವಕಪ್‍ಗಳಲ್ಲಿ 6 ಸೆಂಚುರಿಗಳನ್ನು ಬಾರಿಸಿದರೆ ರೋಹಿತ್ 16 ಪಂದ್ಯಗಳಲ್ಲೇ 5 ಸಿಕ್ಸರ್‍ಗಳನ್ನು ಸಿಡಿಸಿದ್ದಾರೆ.

ಪ್ರಸಕ್ತ ವಿಶ್ವಕಪ್‍ನಲ್ಲಿ ರೋಹಿತ್ 92.42ರ ಸರಾಸರಿಯಲ್ಲಿ 140, 102, 104, 103 ರನ್‍ಗಳನ್ನು ಬಾರಿಸಿ ಐದು ಶತಕಗಳನ್ನು ಗಳಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆ ಯುತ್ತಿರುವ ಸೆಮೀಸ್ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಸಚಿನ್‍ರ ದಾಖಲೆಯನ್ನು ಸರಿಗಟ್ಟಲು ರೋಹಿತ್ ತುದಿಗಾಲಲ್ಲಿ ನಿಂತಿದ್ದಾರೆ.

ಇತ್ತೀಚಿನ ವರದಿ ಬಂದಾಗ ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ 31 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin