ನಿಜವಾಯ್ತು ರೋಹಿತ್‍ರ 9ವರ್ಷಗಳ ಹಿಂದಿನ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಜೈಪುರ, ನ.17- ಇದುವರೆಗೂ ಭಾರತ ತಂಡದ ಉಪನಾಯಕನಾಗಿದ್ದ ರೋಹಿತ್‍ಶರ್ಮಾ ಅವರು ಇಂದು ನ್ಯೂಜಿಲ್ಯಾಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟ್ವೆಂಟಿ-20 ಪಂದ್ಯದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿರುವಾಗಲೇ ಅವರು 9 ವರ್ಷಗಳ ಹಿಂದೆ ಮಾಡಿದ್ದ ಟ್ವಿಟ್ ವೈರಲ್ ಆಗಿದೆ.

2012ರಲ್ಲಿ ರೋಹಿತ್‍ಶರ್ಮಾ ಅವರು ರಣಜಿ ಪಂದ್ಯಾವಳಿಯಲ್ಲಿ ಮುಂಬೈ ತಂಡದ ನಾಯಕನಾಗಿ ಮೊದಲ ಬಾರಿಗೆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ರೋಹಿತ್ ಈ ರೀತಿ ನಾಯಕನಾಗಿದ್ದು ಕೂಡ ಇದೇ ಜೈಪುರನ ಕೆ.ಎಲ್. ಸೈನಿ ಮೈದಾನದಲ್ಲಿ.

ಅಂದು ಟ್ವಿಟ್ ಮಾಡಿದ್ದ ರೋಹಿತ್‍ಶರ್ಮಾ, ನಾನು ಜೈಪುರದ ಮೈದಾನದಲ್ಲಿ ಮೊದಲ ಬಾರಿಗೆ ನಾಯಕತ್ವವನ್ನು ವಹಿಸಿಕೊಂಡಿದ್ದೇನೆ, ಇದನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಮುಂದಿನ ದಿನಗಳಲ್ಲಿ ಉನ್ನತ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತೇನೆಂದು ಹೇಳಿದ್ದರು.

ರೋಹಿತ್ ಶರ್ಮಾ ಅವರು 2012ರಲ್ಲಿ ಹೇಳಿದ ಹೇಳಿಕೆಯಂತೆಯೇ ಅವರು ಭಾರತ ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಎದುರಿಸುತ್ತಿರುವ ಮೊದಲ ಪಂದ್ಯವನ್ನು ಆಡುತ್ತಿರುವುದು ಕೂಡ ಅದೇ ಜೈಪುರ ಮೈದಾನದಲ್ಲಿ ಎಂಬುದು ವಿಶೇಷ.

2012ರಲ್ಲಿ ರಣಜಿ ಪಂದ್ಯದಲ್ಲಿ ಮುಂಬೈ ತಂಡದ ವಿರುದ್ಧ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡಿದ್ದು ಹಾಗೂ ಭಾರತ ತಂಡದ ಪೂರ್ಣ ಪ್ರಮಾಣದ ನಾಯಕನಾಗೆ ಅದೇ ಜೈಪುರ ಮೈದಾನದಲ್ಲಿ ರೋಹಿತ್ ಮೊದಲ ಪಂದ್ಯದ ಸಾರಥ್ಯವನ್ನು ವಹಿಸಿಕೊಂಡಿರುವುದರಿಂದ ಅವರು ಈ ಹಿಂದೆ ಮಾಡಿದ್ದ ಟ್ವಿಟ್ ವೈರಲ್ ಆಗಿದೆ.

Facebook Comments

Sri Raghav

Admin