ರೋಮ್ ರ‍್ಯಾಕಿಂಗ್‍ನಲ್ಲಿ ಸ್ವರ್ಣ ಪದಕ ಗೆದ್ದ ಭಜರಂಗಿ, ರವಿಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ರೋಮ್, ಜ.19- ಇಂದಿಲ್ಲಿ ನಡೆದ ರೋಮ್ ರ‍್ಯಾಕಿಂಗ್ ಸೀರೀಸ್‍ನ ಫೈನಲ್ಸ್‍ನಲ್ಲಿ ಭಾರತದ ಕುಸ್ತಿಪಟುಗಳಾದ ಭಜರಂಗಿ ಪುನಿಯಾ ಹಾಗೂ ರವಿಕುಮಾರ್ ಅವರು ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಮುಂಬರುವ ಒಲಿಪಿಂಕ್ಸ್ ನಲ್ಲಿ ಪದಕ ಗೆಲ್ಲುವ ಮುನ್ಸೂಚನೆ ನೀಡಿದ್ದಾರೆ. 65 ಕೆಜಿ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಭಾರತದ ಶ್ರೇಷ್ಠ ಕುಸ್ತಿ ಪಟು ಭಜರಂಗ್ ಅವರು ಅಮೆರಿಕಾದ ಮೈಕಲ್ ಒಲಿವಾರ್ ಅವರ ವಿರುದ್ಧ 4-3 ಅಂಕಗಳ ಮೂಲಕ ಗೆಲ್ಲುವ ಮೂಲಕ ಸ್ವರ್ಣ ಪದಕವನ್ನು ಗೆದ್ದು ಬೀಗಿದ್ದಾರೆ.

ಇದುವರೆಗೂ 57 ಕೆಜಿ ವಿಭಾಗದಲ್ಲಿ ಪಾಲ್ಗೊಳ್ಳುತ್ತಿದ್ದ ಭಾರತದ ಮತ್ತೊಬ್ಬ ಕುಸ್ತಿಪಟು ರವಿಕುಮಾರ್ ಅವರು ಇದೇ ಮೊದಲ ಬಾರಿಗೆ 61 ಕೆಜಿ ವಿಭಾಗದಲ್ಲಿ ಕಾಣಿಸಿಕೊಂಡಿದ್ದು, ಆಡಿದ ಮೊದಲ ಪಂದ್ಯದಲ್ಲೇ ಚಿನ್ನದ ಪದಕ ಗೆದ್ದು ಎಲ್ಲರನ್ನು ಚಕಿತಗೊಳಿಸಿದ್ದಾರೆ.  23 ವರ್ಷದ ರವಿಕುಮಾರ್ ಫೈನಲ್ಸ್‍ನಲ್ಲಿ ಕಜಾಕಿಸ್ತಾನದ ನೂರ್‍ಬೋಲ್ಟ್ ಅಬ್ದುಲಯೈವ್ ವಿರುದ್ಧ 12-2 ಅಂಕಗಳಿಂದ ಗೆಲ್ಲುವ ಮೂಲಕ ಸ್ವರ್ಣ ಪದಕವನ್ನು ಗೆದ್ದು ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಸೂಚನೆ ಯನ್ನು ನೀಡಿದ್ದಾರೆ.

ರವಿಕುಮಾರ್ ಇದಕ್ಕೂ ಮುನ್ನ ಮಾಲ್ಟೀವ್ಸ್‍ನ ಅಲ್ಸೆನಂದ್ರೂ ಚರಿಟೊಕಾ ಮತ್ತು ಕಜಾಕಿಸ್ತಾನದ ನೂರಿಸ್ಮಾಮ್ ಸನಾಯೇದ್‍ರ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿದ್ದರು.
ಭಜರಂಗಿ ಅವರು ಮೊದಲ ಸುತ್ತಿನಲ್ಲಿ ಅಮೆರಿಕಾದ ಜೆನ್ ಅಲೆನ್ ರೋಧರ್‍ಫೆರ್ಡ್‍ರ ಸವಾಲನ್ನು ಸ್ವೀಕರಿಸಿದ್ದರೆ, ಕ್ವಾಟರ್ ಫೈನಲ್‍ನಲ್ಲಿ ಅಮೆರಿಕಾದವರೇ ದ ಜೋಸೆಫ್ ಕ್ರಿಸ್ಟೋಫರ್ ಮೆಕ್ ಕೆನ್ನಾ ವಿರುದ್ಧ 4-2 ವಿರುದ್ಧ ಗೆದ್ದು ಸೆಮಿಫೈನಲ್ ಪ್ರವೇಶಿಸಿದರೆ, ಸೆಮೀಸ್‍ನಲ್ಲಿ ಉಕ್ರೇನ್‍ನ ವಸೈಲ್ ಸಾಯುಪತ್ತಾರ್ ವಿರುದ್ಧ 6-4 ರಿಂದ ಗೆದ್ದು ಫೈನಲ್‍ಗೇರಿದ್ದರು.

ಇಂದು ನನ್ನ ದಿನವಲ್ಲ: ಭಜರಂಗಿ ಪೂನಿಯಾ ವಿರುದ್ಧ ಸೋಲು ಕಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕಾದ ಮೈಕಲ್ ಇಂದು ನನ್ನ ದಿನವಾಗಿರಲಿಲ್ಲ , ಆದ್ದರಿಂದ ಪಂದ್ಯವನ್ನು ಸೋಲಬೇಕಾಯಿತು, ಆದರ ಈ ಪಂದ್ಯವನ್ನು ಗೆಲ್ಲಲು ಸಾಕಷ್ಟು ಪರಿಶ್ರಮವನ್ನು ಹಾಕಿಗದ್ದೇನಾದರೂ ಭಜರಂಗಿ ಉತ್ತಮ ಹೋರಾಟ ತೋರ್ಪಡಿಸಿದರು. ಈ ಸೋಲನ್ನು ಮುಂದಿನ ಪಂದ್ಯದ ಗೆಲುವಾಗಿ ಪರಿವರ್ತಿಸಿಕೊಳ್ಳುತ್ತೇನೆ ಎಂದು ಹೇಳಿದರು.

Facebook Comments