ಟಿಕ್ ಟಾಕ್ ನಿಷೇಧದ ನಂತರ ನಂ.1 ಸ್ಥಾನಕ್ಕೇರಿದ ಭಾರತದ ರೊಪೋಸೋ ಆ್ಯಪ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.2- ರೊಪೋಸೋ ಮೇಡ್ ಇನ್ ಇಂಡಿಯಾ ಶಾರ್ಟ್ ವಿಡಿಯೋ ಆ್ಯಪ್ ಆಗಿದ್ದು, 65 ದಶಲಕ್ಷಕ್ಕೂ ಅಧಿಕ ಜನರು ಡೌನ್‍ಲೋಡ್ ಮಾಡಿಕೊಂಡಿದ್ದು, ದೇಶದಲ್ಲಿ ನಿರ್ವಿವಾದದ ಸಾಮಾಜಿಕ ವಿಡಿಯೋ ಆ್ಯಪ್ ಗಳ ಪೈಕಿ ಮೊದಲ ಸ್ಥಾನದಲ್ಲಿ ನಿಂತಿದೆ.

ಇತ್ತೀಚಿನ ಸಮಯಗಳಲ್ಲಿ ಇದು ಗೂಗಲ್ ಪ್ಲೇ ಸ್ಟೋರ್‍ನಲ್ಲಿ ನಂಬರ್ ಒನ್ ಸಾಮಾಜಿಕ ಆ್ಯಪ್
ಆಗಿ ಹೊರಹೊಮ್ಮಿದೆ. ಸೋನಂ ವಾಂಗ್ ಚುಂಕ್ ಸೇರಿದಂತೆ ಹಲವಾರು ಗಣ್ಯರು ಸಾಮಾಜಿಕ ಮಾಧ್ಯಮದಲ್ಲಿ ರೊಪೋಸೊಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದುವರೆಗೆ ಟಿಕ್ ಟಾಕ್ ಬಳಕೆದಾರರು ಮತ್ತು ಭಾರೀ ಪ್ರಮಾಣದ ಫಾಲೋವರ್‍ಗಳು ನಿಷೇಧದ ನಂತರ ಇದೀಗ ರೊಪೋಸೊಗೆ ಮೊರೆ ಹೋಗುತ್ತಿದ್ದಾರೆ. ಟಿಕ್ ಟಾಕ್ ನಲ್ಲಿ 9.5 ದಶಲಕ್ಷ ಅಭಿಮಾನಿಗಳನ್ನು ಹೊಂದಿದ್ದ ಪ್ರೇಮ್ ವತ್ಸ ಮತ್ತು 9 ದಶಲಕ್ಷ ಅಭಿಮಾನಿಗಳನ್ನು ಹೊಂದಿದ್ದ ರ್ನೂ ಅಫ್ಷಾನ್ ಸೇರಿದಂತೆ ಹಲವಾರು ಮಂದಿ ಪ್ರಭಾವಿಗಳು ರೊಪೋಸೊ ಕಡೆಗೆ ವಾಲಿದ್ದಾರೆ.

ಭಾರತ ಸರ್ಕಾರ ಆರಂಭಿಸಿರುವ ನಾಗರಿಕ ಪಾಲ್ಗೊಳ್ಳುವಿಕೆ ಪ್ಲಾಟ್ ಫಾರ್ಮ್ ಆಗಿರುವ MY GOV ಈಗಾಗಲೇ ರೊಪೋಸೊದಲ್ಲಿದೆ.

Facebook Comments