ಐಎಂಎ ಪಕರಣ : ಮಾಜಿ ಸಚಿವ ರೋಷನ್ ಬೇಗ್ 1 ದಿನ ಸಿಬಿಐ ಕಸ್ಟಡಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.1- ಐಎಂಎ ಪ್ರಕರಣಕ್ಕೆ ಸಂಬದಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರನ್ನ ಹೆಚ್ಚಿನ ವಿಚಾರಣೆಗಾಗಿ ಒಂದು ದಿನ ಸಿಬಿಐ ಕಸ್ಟಡಿಗೆ ವಹಿಸಲಾಗಿದೆ. ಬಹುಕೋಟಿ ಹಗರಣಕ್ಕೆ ಸಂಬಧಿಸಿದಂತೆ ಸಿಬಿಐ ದಾಳಿಗೆ ಒಳಗಾಗಿ ನ್ಯಾಯಾಂಗವಶದಲ್ಲಿದ್ದು ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿದ್ದ ರೋಷನ್ ಬೇಗ್ ಅವರನ್ನ ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ನೀಡಬೇಕೆಂದು ಸಿಬಿಐ ನ್ಯಾಯಾಲಕ್ಕೆ ಮನವಿ ಮಾಡಿದ ಹಿನ್ನಲೆಯಲ್ಲಿ ಒಂದು ದಿನ ಕಸ್ಟಡಿಗೆ ನೀಡಿರುವ ನ್ಯಾಯಾಲಯ ನಾಳೆ ಕೋರ್ಟ್ ಮುಂದೆ ಹಾಜರು ಪಡಿಸುವಂತೆ ಸೂಚಿಸಿದೆ.

ನ್ಯಾಯಾಂಗ ಬಂಧನದಲ್ಲಿರುವ ಬೇಗ್ ಅವರನ್ನ ಸಿಬಿಐ ಅಧಿಕಾರಿಗಳು ವಿಚಾರಣೆಗಾಗಿ ಒಂದು ದಿನಗಳ ಕಾಲ ತಮ್ಮ ವಶಕ್ಕೆ ಪಡೆಯಲಿದ್ದಾರೆ, ಐಎಂಎ ಪ್ರಕರಣದಲ್ಲಿ ಸಿಬಿಐ ನಿಂದ ಬಂಧನಕ್ಕೊಳಗಾಗಿದ್ದ ಬೇಗ್ ಅವರಿಗೆ ನ್ಯಾಯಲಯ ನ್ಯಾಯಾಂಗ ಬಂಧನ ವಿಧಿಸಿತ್ತು, ಬಂಧನದ ಬಳಿಕ ಆನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕೆತ್ಸೆ ಪಡೆಯುತ್ತಿದ್ದರು ನೆನ್ನೆಯಷ್ಟೆ ಚಿಕಿತ್ಸೆಯ ಬಳಿಕ ಅವರನ್ನ ಪರಪ್ಪನ ಅಗ್ರಾಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.

ಜಾಮೀನು ಕೋರಿ ಬೇಗ್ ಅರ್ಜಿಸಲ್ಲಿಸುತ್ತಿದ್ದಂತೆ ಸಿಬಿಐ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿತ್ತು ವಿಚಾರಣೆ ನಡೆಸಿದ ನ್ಯಾಯಾಲಯ ಬೇಗ್ ಅವರ ಜಾಮೀನು ಅರ್ಜಿಯನ್ನು ಡಿ 4 ಕ್ಕೆ ಮುಂದೂಡಿ ಒಂದು ದಿನ ಸಿಬಿಐ ವಶಕ್ಕೆ ನೀಡಿದೆ

Facebook Comments

Sri Raghav

Admin