ಫೆ.28ರಂದು ಕೆಂಗೇರಿಯಲ್ಲಿ ರೈತ ಸಂತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.26- ರೋಟರಿ ಕೆಂಗೇರಿ ಉಪನಗರ ವತಿಯಿಂದ ಫೆ.28ರಂದು ರೈತರ ಸಂತೆ ಆಯೋಜಿಸಿದ್ದು ಮಂಡ್ಯ, ಚನ್ನಪಟ್ಟಣ, ರಾಮನಗರ ದಿಂದ ರೈತರು ತಮ್ಮ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಬಹುದು ಎಂದು ರೋಟರಿ ಕೆಂಗೇರಿ ಉಪನಗರದ ಅಧ್ಯಕ್ಷ ಕೆ ಎನ್.ಕಿರಣ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

ರೈತರು ಮತ್ತು ಗ್ರಾಹಕರಿಗೆ ಒಂದೇ ವೇದಿಕೆ ಮೇಲೆ ಒಗ್ಗೂಡಿಸುವ ಕಾರ್ಯಕ್ರಮ ಇದಾಗಿದ್ದು ಶ್ರೀ ಗಣೇಶ ಆಟದ ಮೈದಾನ ಕೆಂಗೇರಿ ಉಪನಗರದಲ್ಲಿ ಅಂದು ಬೆಳಗ್ಗೆ9 ಗಂಟೆಗೆ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಮತ್ತು ರೋಟರಿ ಜಿಲ್ಲಾ ಪಾಲಕ ಬಿ.ಎಲ್.ನಾಗೇಂದ್ರ ರವರು ವರ್ಥ್ ಮೈ ವಾಲ್ಯೂ ಎಂಬ ಆಪ್ ಬಿಡುಗಡೆ ಮಾಡುವ ಮುಖಾಂತರ ಉದ್ಘಾಟನೆ ಮಾಡಲಿದ್ದಾರೆ ಎಂದರು.

ರೈತರಿಗೆ ಅನುಕೂಲವಾಗುವಂತೆ ವಿಶೇಷ ಸೌಲಭ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು ಸಾವಯುವ ಕೃಷಿ, ಅಧಿಕ ಫಸಲು ಗಳಿಸುವ ನೂತನ ವಿಧಾನಗಳ ಬಗ್ಗೆ ಮಾಹಿತಿ, ರೈತ ಕುಟುಂಬಗಳಿಗೆ ಆರೋಗ್ಯ ಕ್ಯಾಂಪ್, ಸಾಧಕ ರೈತರಿಗೆ ಮತ್ತು ಕೃಷಿ ಕ್ಷೇತ್ರದಲ್ಲಿ ಅಮೂಲ್ಯ ಕೊಡುಗೆ ನೀಡಿದವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರೈತರ ಸಂತೆಯಲ್ಲಿ ರೋಟರಿ ಸೌತ್ ಈಸ್ಟ್, ಮೈಸೂರು, ರೋಟರಿ ಸಿಲ್ಕ್ ಸಿಟಿ, ರಾಮನಗರ, ರೋಟರಿ ಮಾಲ್ಗುಡಿ, ರೋಟರಿ ನಾಗರಬಾವಿ, ರೋಟರಿ ಸೆಂಟಿನಿಯಲ್ ಕೂಡ ಕೈ ಜೋಡಿಸಿದ್ದಾರೆ ಎಂದು ಹೇಳಿದರು.

Facebook Comments