ಪುಲಿಕೇಶಿ ನಗರ ಉಪವಿಭಾಗದಲ್ಲಿ ರೌಡಿಗಳ ಪರೇಡ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.16- ಪೂರ್ವ ವಿಭಾಗದ ಪುಲಿಕೇಶಿ ನಗರ ಉಪವಿಭಾಗದಲ್ಲಿ ಇಂದು ರೌಡಿ ಪರೇಡ್ ನಡೆಸಲಾಯಿತು. ಇಂದು ಮುಂಜಾನೆ 5 ಗಂಟೆಯಿಂದ ರೌಡಿಗಳ ಮನೆ ಮೇಲೆ ಇನ್‍ಸ್ಪೆಕ್ಟರ್ ಮತ್ತು ಸಿಬ್ಬಂದಿ ದಾಳಿ ಮಾಡಿ ರೌಡಿಗಳನ್ನು ಪೂರ್ವ ರೈಲ್ವೆ ನಿಲ್ದಾಣ ಆವರಣಕ್ಕೆ  ಕರೆತಂದರು.

ಪುಲಿಕೇಶಿನಗರ, ಭಾರತಿನಗರ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಡಿ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸುಮಾರು 100ಕ್ಕೂ ಹೆಚ್ಚು ರೌಡಿಗಳನ್ನು ಕರೆತಂದು ಪರೇಡ್ ನಡೆಸಲಾಯಿತು.  ಡಿಸಿಪಿ ಶರಣಪ್ಪ ಅವರು ರೌಡಿಗಳಿಗೆ ಈ ವೇಳೆ ಎಚ್ಚರಿಕೆ ನೀಡಿ ಉಪಚುನಾವಣೆ ಸಮೀಪಿಸುತ್ತಿದ್ದು, ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಬಾರದೆಂದು ಸೂಚನೆ ನೀಡಿದರು.

ಹಾಗೊಂದು ವೇಳೆ ಗುಂಪು ಕಟ್ಟಿಕೊಂಡು ದಾಂಧಲೆ ನಡೆಸಿದ್ದೇ ಆದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.  ನಂತರ ರೌಡಿಗಳಿಂದ ಮೊಬೈಲ್ ನಂಬರ್, ಮಾಡುತ್ತಿರುವ ವೃತ್ತಿ, ವಾಸಿಸುವ ಖಾಯಂ ವಿಳಾಸ ಇನ್ನಿತರ ಮಾಹಿತಿಗಳನ್ನು ಪಡೆದುಕೊಂಡು ಎಚ್ಚರಿಕೆ ನೀಡಿ ಕಳಹಿಸಿದರು.

Facebook Comments