ರೌಡಿ ಅಮೀರ್ ಖಾನ್ ಗಡಿಪಾರು..

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.13- ಶಿವಾಜಿನಗರದ ರೌಡಿ ಕೋಳಿ ಫಯಾಜ್ ಮಗ ಅಮೀರ್ ಖಾನ್ ಅಲಿಯಾಸ್ ಪಪ್ಪು(36)ನನ್ನು ಒಂದು ವರ್ಷದ ಅವಗೆ ಗಡಿಪಾರು ಮಾಡಿ ಪೂರ್ವ ವಿಭಾಗದ ಉಪಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿ ಅಮಿರ್‍ಖಾನ್ ಹೆಸರಿದೆ.

ಈತ ಸಮಾಜಕ್ಕೆ ಧಕ್ಕೆಯಾಗುವಂತಹ ಹಾಗೂ ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತ ಕೃತ್ಯಗಳಾದ ಕೊಲೆ, ಸುಲಿಗೆ, ಕೊಲೆ ಯತ್ನ, ದರೋಡೆ, ಡಕಾಯಿತಿಗೆ ಸಿದ್ದತೆ, ಅಪಹರಣ, ಕಳವು, ಪ್ರಾಣ ಬೆದರಿಕೆ, ಮಾದಕ ವಸ್ತುಗಳ ಮಾರಾಟದಂತ ಘೋರ ಅಪರಾಧ ಕೃತ್ಯಗಳು ಸೇರಿದಂತೆ ಒಟ್ಟು 22 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಈತ ಗೂಂಡಾ ವರ್ತನೆ ಪ್ರದರ್ಶಿಸಿ ಸಾರ್ವಜನಿಕರಿಗೆ, ಮಹಿಳೆಯರಿಗೆ ಭಯವನ್ನುಂಟು ಮಾಡಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದನಲ್ಲದೆ, ಸತತವಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡು ಯಾವುದೇ ಕಾನೂನಿನ ಭಯವಿಲ್ಲದೆ ಮುಂದುವರೆಸಿಕೊಂಡು ಬಂದಿದ್ದನು.

ಈ ಹಿನ್ನೆಲೆಯಲ್ಲಿ ಪೂರ್ವ ವಿಭಾಗದ ಉಪಪೊಲೀಸ್ ಆಯುಕ್ತರು ತಮ್ಮ ವಿಶೇಷ ಕಾರ್ಯ ನಿರ್ವಾಹಕ ದಂಡಾಕಾರಿಗಳ ಅಕಾರ ವ್ಯಾಪ್ತಿಯಲ್ಲಿ ರೌಡಿ ಅಮಿರ್‍ಖಾನ್ ಅಲಿಯಾಸ್ ಪಪ್ಪುನನ್ನು ಬೆಂಗಳೂರು ನಗರದಿಂದ ಒಂದು ವರ್ಷದ ಅವಧಿ (ಅ.10, 2022)ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಗಡಿಪಾರು ಮಾಡಿ ಆದೇಶಿಸಿರುತ್ತಾರೆ.

ಕಳೆದ ಆರು ತಿಂಗಳ ಅವಯಲ್ಲಿ ಪೂರ್ವ ವಿಭಾಗದ ಠಾಣಾ ವ್ಯಾಪ್ತಿಗಳಲ್ಲಿ ಗೂಂಡಾ ಪವೃತ್ತಿ ತೋರಿ ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡುತ್ತಿದ್ದ ಕಾರ್ತಿಕ್ ಅಲಿಯಾಸ್ ರಾಹುಲ್(ಹಲಸೂರು), ಮೊಹಮದ್ ಅವೇಜ್(ಕಮಿರ್ಷಿಯಲ್ ಸ್ಟ್ರೀಟ್), ಜೋಶ್ವಾ(ಜೆ.ಬಿ.ನಗರ) ಮತ್ತು ಅಮಿರ್ ಖಾನ್ ಅಲಿಯಾಸ್ ಪಪ್ಪು(ಕಮರ್ಷಿಯಲ್ ಸ್ಟ್ರೀಟ್) ಅವರುಗಳನ್ನು ಬೆಂಗಳೂರು ನಗರ ವ್ಯಾಪ್ತಿಯಿಂದ ಗಡಿಪಾರು ಮಾಡಿ ಆದೇಶಿಸಿ ಜಾರುಗೊಳಿಸಲಾಗಿರುತ್ತದೆ.

Facebook Comments