ರೌಡಿ ಸೈಕಲ್ ರವಿಯ ಮೂವರು ಸಹಚರರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Cycle-Ravi
ಬೆಂಗಳೂರು, ಜು.13- ಹಣಕ್ಕಾಗಿ ಉದ್ಯಮಿಗಳನ್ನು ಅಪಹರಿಸುತ್ತಿದ್ದ ಹಾಗೂ ಮೀಟರ್ ಬಡ್ಡಿದಂಧೆಯಲ್ಲಿ ತೊಡಗಿದ್ದ ರೌಡಿ ಸೈಕಲ್ ರವಿಯ ಮೂವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮೂರ್ತಿ ಅಲಿಯಾಸ್ ಬೇಕರಿ ಮೂರ್ತಿ, ಆ್ಯಂಡಿ ನವೀನ್ ಹಾಗೂ ರಮಣ ಬಂಧಿತರು. ರೌಡಿ ಸೈಕಲ್ ರವಿ ಸೂಚನೆ ಮೇರೆಗೆ ಸಹಚರರು ಕೆಲಸ ಮಾಡುತ್ತಿದ್ದರು. ಹಣಕ್ಕಾಗಿ ಉದ್ಯಮಿಗಳನ್ನು ಅಪಹರಿಸಿ ವಿಕೃತವಾಗಿ ಕಿರುಕುಳ ನೀಡುತ್ತಿದ್ದ ಇವರು ಮೀಟರ್ ಬಡ್ಡಿದಂಧೆಯಲ್ಲಿ ತೊಡಗಿ ಹಣ ಹಿಂದಿರುಗಿಸದಿದ್ದವರಿಗೆ ಜೀವ ಬೆದರಿಕೆ ಹಾಕುತ್ತಿದ್ದರು.

ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಅಪಹರಣದಲ್ಲೂ ಈ ಗ್ಯಾಂಗ್ ತೊಡಗಿತ್ತು ಎಂದು ಹೇಳಲಾಗಿದೆ. ಸೈಕಲ್ ರವಿ ಸೂಚನೆ ಮೇರೆಗೆ ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದ ಈ ಗ್ಯಾಂಗ್ ಹಣ ನೀಡದಿದ್ದರೆ ಬ್ಯಾಟ್‍ಗೆ ಕಬ್ಬಿಣದ ಮುಳ್ಳುತಂತಿ ಸುತ್ತಿಕೊಂಡು ಹೊಡೆಯುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ. ಬಂಧಿತ ಆರೋಪಿಗಳಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿರುವ ಪೆÇಲೀಸರು ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.

Facebook Comments

Sri Raghav

Admin