ರೌಡಿ ಕಾರ್ತಿಕ್‍ ಒಂದು ವರ್ಷ ಗಡಿ ಪಾರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.27- ಗೂಂಡಾ ವರ್ತನೆ ಪ್ರದರ್ಶಿಸಿದ ಹಲಸೂರು ಪೊಲೀಸ್ ಠಾಣೆಯ ರೌಡಿ ಕಾರ್ತಿಕ್ ಅಲಿಯಾಸ್ ರಾಹುಲ್ (30) ಎಂಬಾತನನ್ನು ಬೆಂಗಳೂರು ನಗರ ಜಿಲ್ಲೆಯಿಂದ ಒಂದು ವರ್ಷ ಗಡಿಪಾರು ಮಾಡಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಮತ್ತು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.

ಈತ ಸಮಾಜಕ್ಕೆ ಧಕ್ಕೆಯಾಗುವಂತಹ ಹಾಗೂ ಸಮಾಜದ ಸ್ವಾಸ್ಥ್ಯ ಹಾಳುವಂತಹ ಕೃತ್ಯಗಳಾದ ಅತ್ಯಾಚಾರ, ದರೋಡೆ, ಕೊಲೆ ಯತ್ನ, ಬಲಾತ್ಕಾರದ ವಸೂಲಿ, ಪ್ರಾಣ ಬೆದರಿಕೆ, ಸರ್ಕಾರಿ ನೌಕರರ ಮೇಲೆ ಹಲ್ಲೆ ಹಾಗೂ ಇತರೆ ಗಲಾಟೆ ಪ್ರಕರಣಗಳು ಸೇರಿ ಒಟ್ಟು 11 ಪ್ರಕರಣಗಳಲ್ಲಿ ಭಾಗಿಯಾಗಿ ಗೂಂಡಾ ವರ್ತನೆಯನ್ನು ಪ್ರದರ್ಶಿಸಿ ಸಾರ್ವಜನಿಕರಿಗೆ, ಮಹಿಳೆಯರಿಗೆ ಭಯವನ್ನುಂಟು ಮಾಡಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟುಮಾಡುವ ರೀತಿ ಗೂಂಡಾ ವರ್ತನೆ ಪ್ರದರ್ಶಿಸುತ್ತಿದ್ದನು.

ಈ ಕಾರಣಕ್ಕಾಗಿ ಹಲಸೂರು ಠಾಣೆ ಇನ್‍ಸ್ಪೆಕ್ಟರ್ ಅವರು ಈತನನ್ನು ಬೆಂಗಳೂರು ನಗರ ಜಿಲ್ಲೆಯಿಂದ ಗಡಿಪಾರು ಮಾಡಲು ಪ್ರಸ್ತಾವನೆ ಸಲ್ಲಿಸಿದ್ದು, ಹಲಸೂರು ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ರು ಪರಿಶೀಲಿಸಿ ಶಿಫಾರಸು ಮಾಡಿದ್ದರು.

ಆರೋಪಿ ಕಾರ್ತಿಕ್ ರೂಢಿಗತ ಅಪರಾಧವೆಸಗುವ ಪ್ರವೃತ್ತಿಯುಳ್ಳವನಾಗಿದ್ದು, ಈತ ಸುಮಾರು 11 ವರ್ಷಗಳಿಂದ ಸಮಾಜಕ್ಕೆ ಧಕ್ಕೆಯಾಗುವಂತಹ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಕೃತ್ಯಗಳಲ್ಲಿ ಭಾಗಿಯಾಗಿ ಗೂಂಡಾ ವರ್ತನೆ ಪ್ರದರ್ಶಿಸುತ್ತಿದ್ದನು.

ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಮತ್ತು ಪೂರ್ವ ವಿಭಾಗದ ಉಪ ಪೆÇಲೀಸ್ ಆಯುಕ್ತರು ಆರೋಪಿ ಕಾರ್ತಿಕ್‍ನನ್ನು ಏ.26ರಿಂದ ಮುಂದಿನ 2020ರ ಏಪ್ರಿಲ್ 26ರ ವರೆಗೆ (ಒಂದು ವರ್ಷದ ಅವಧಿಗೆ) ಗಡಿಪಾರು ಮಾಡಲು ಆದೇಶಿಸಿರುತ್ತಾರೆ.

ಪ್ರಪ್ರಥಮ ಪ್ರಕರಣ: ಬೆಂಗಳೂರು ನಗರ ವ್ಯಾಪ್ತಿಯಲ್ಲಿಯೇ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಆರೋಪಿತನನ್ನು ವಿಚಾರಣೆಗೆ ಒಳಪಡಿಸಿ ಗಡಿಪಾರು ಆದೇಶ ಹೊರಡಿಸಿರುವುದು ಪ್ರಪ್ರಥಮ ಪ್ರಕರಣವಾಗಿರುತ್ತದೆ.

Facebook Comments

Sri Raghav

Admin