ಸಿಸಿಬಿ ಪೊಲೀಸರ ದಾಳಿ, ಕುಖ್ಯಾತ ರೌಡಿ ಬಾರ್‌ನಿಂದ ಕುಣಿಗಲ್‍ ಗಿರಿ ಎಸ್ಕೇಪ್, 237 ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.15- ಡ್ಯಾನ್ಸ್ ಬಾರ್‍ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಕುಖ್ಯಾತ ರೌಡಿ ಗಿರಿ ಅಲಿಯಾಸ್ ಕುಣಿಗಲ್ ಗಿರಿ ಸಿಸಿಬಿ ಪೊಲೀಸರ ದಾಳಿ ವೇಳೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಡ್ಯಾನ್ಸ್‍ಬಾರ್‍ನಲ್ಲಿ ರಾತ್ರಿ ತನ್ನ ಜತೆಗೂಡಿ ರೌಡಿ ಗಿರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಖಚಿತ ಮಾಹಿತಿ ಮೇರೆಗೆ ಬಾರ್ ಮೇಲೆ ದಾಳಿ ಮಾಡಿದಾಗ ರೌಡಿ ಗಿರಿ ಸ್ಥಳದಿಂದ ಪರಾರಿಯಾಗಿದ್ದು, ಈತನ ಪತ್ತೆಕಾರ್ಯ ಮುಂದುವರೆದಿದೆ.

237 ಮಂದಿ ಬಂಧನ:ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೆಸಿಡೆನ್ಸಿ ರಸ್ತೆಯಲ್ಲಿನ ಟೈಮ್ಸ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಡ್ಯಾನ್ಸ್ ಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ 237 ಮಂದಿಯನ್ನು ಬಂಧಿಸಿ 9.82 ಲಕ್ಷ ರೂ. ಹಣ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಬಾರ್‍ನಲ್ಲಿ ಹುಡುಗಿಯರ ಮೂಲಕ ಅಶ್ಲೀಲವಾಗಿ ನೃತ್ಯ ಮಾಡಿಸುವುದಲ್ಲದೆ, ಲೈಂಗಿಕ ಪ್ರಚೋದನೆ ನೀಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಆಧಾರದ ಮೇಲೆ ರಾತ್ರಿ ಪೊಲೀಸರು ದಾಳಿ ಮಾಡಿ 266 ಯುವತಿಯರನ್ನು ರಕ್ಷಿಸಿ, 237 ಮಂದಿಯನ್ನು ಬಂಧಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ