ಹಳೆ ದ್ವೇಷದ ಹಿನ್ನೆಲೆಯಲ್ಲಿ ರೌಡಿಯ ಬರ್ಬರ ಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

Rowdy-Murder--01

ಚನ್ನಪಟ್ಟಣ, ಜ.30- ಹಳೆ ದ್ವೇಷದಿಂದ ರೌಡಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲ್ಲೂಕಿನ ರಾಂಪುರ ನಿವಾಸಿ, ರೌಡಿಶೀಟರ್ ಸುನೀಲ್‍ಕುಮಾರ್ (29) ಕೊಲೆಯಾದವನು.

ಸುನೀಲ್‍ಕುಮಾರ್ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದನು. ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ದುಷ್ಕರ್ಮಿಗಳು ಬೇರೆಡೆ ಕರೆದೊಯ್ದು ಸುನೀಲ್‍ಕುಮಾರನ ತಲೆಗೆ ಆಯುಧದಿಂದ ಹೊಡೆದು ಕೊಲೆ ಮಾಡಿ ಶವವನ್ನು ರಾಂಪುರ ಗ್ರಾಮದ ತೋಟದ ಮನೆಯೊಂದರ ಬಳಿ ಬಿಸಾಡಿ ಪರಾರಿಯಾಗಿದ್ದಾರೆ.

ಬೆಳಗಿನ ಜಾವ ಈ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣ ಪೊಲೀಸರಿಗೆ ತಿಳಿಸಿದ್ದು, ಎಸ್‍ಪಿ ರಮೇಶ್ ಭಾಗತ್, ಡಿವೈಎಸ್‍ಪಿ ಮಲ್ಲೇಶ್, ಸಿಪಿಐ ಕುಮಾರ್, ಪಿಎಸ್‍ಐ ಪ್ರಕಾಶ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಹಳೆ ವೈಷಮ್ಯದಿಂದ ಈತನನ್ನು ಕೊಲೆ ಮಾಡಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

Facebook Comments