ರೌಡಿ ರಾಜು ವಿರುದ್ಧ ಗೂಂಡಾ ಕಾಯ್ದೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.13- ನಗರದಲ್ಲಿ ರೌಡಿ ಚಟುವಟಿಕೆಗಳನ್ನು ಹತ್ತಿಕ್ಕುವ ಸಲುವಾಗಿ ನಗರ ಪೊಲೀಸ್ ಆಯುಕ್ತರು ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಕುಖ್ಯಾತ ರೌಡಿ ರಾಜು ಅಲಿಯಾಸ್ ರಾಜು ದೊರೈ ವಿರುದ್ಧ ಗೂಂಡಾ ಕಾಯ್ದೆ ಅಡಿ ಬಂಧನದ ಆದೇಶ ಹೊರಡಿಸಿ ಕಠಿಣ ಕ್ರಮ ಕೈಗೊಂಡಿದ್ದಾರೆ.

ಪೂರ್ವ ವಿಭಾಗದ ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯ ಬೈರಪ್ಪ ಗಾರ್ಡನ್ ನಿವಾಸಿ ರೌಡಿ ರಾಜು (25) 2016ನೆ ಸಾಲಿನಿಂದ ಕೊಲೆ ಯತ್ನ , ದೊಂಬಿ, ಡಕಾಯಿತಿಗೆ ಯತ್ನ , ಹಲ್ಲೆ , ಪ್ರಾಣ ಬೆದರಿಕೆ, ಸರ್ಕಾರಿ ನೌಕರರಿಗೆ ಸಾರ್ವಜನಿಕ ಸೇವೆ ಮಾಡಲು ಅಡ್ಡಿಪಡಿಸುವುದು, ಎಸ್ಸಿ, ಎಸ್ಟಿ ಜನಾಂಗದವರನ್ನು ನಿಂದಿಸುವುದು ಇಂತಹ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದನು.

ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತಹ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಈತನ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗಿರುತ್ತದೆ. ಚಲನ-ವಲನಗಳ ಮೇಲೆ ನಿಗಾ: ಈತನ ವಿರುದ್ಧ ರೌಡಿ ಪಟ್ಟಿಯನ್ನು ತೆರೆದು ಚಲನ-ವಲನಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಆದರೂ ಸಹ ಈತ ಸುಧಾರಣೆಗೊಳ್ಳದೆ ಅಕ್ರಮ ಚಟುವಟಿಕೆಗಳನ್ನು ಮುಂದುವರೆಸಿದ್ದನು.

ಪ್ರತಿ ಬಾರಿ ಬಂಧಿಸಿ ಕಾರಾಗೃಹಕ್ಕೆ ಕಳಿಸಿದ್ದರೂ ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು ಪಡೆದು ಹೊರ ಬಂದು ಷರತ್ತುಗಳನ್ನು ಉಲ್ಲಂಘಿಸಿ ವಾಸ ಸ್ಥಳ ಬದಲಾವಣೆ ಮಾಡುತ್ತಾ ಪೆÇಲೀಸರಿಂದ ಹಾಗೂ ಕಾನೂನು ಬಲೆಯಿಂದ ತಪ್ಪಿಸಿಕೊಳ್ಳುತ್ತಿದ್ದನು.

ಗೂಂಡಾ ಕಾಯ್ದೆಯಡಿ ಬಂಧನ: ಈತ ನಿರುದ್ಯೋಗಿ ಸ್ನೇಹಿತರ ಗುಂಪನ್ನು ಕಟ್ಟಿಕೊಂಡು ನಿರಂತರವಾಗಿ ಸಾರ್ವಜನಿಕರ ಆಸ್ತಿ -ಪಾಸ್ತಿಗಳಿಗೆ ನಷ್ಟ ಉಂಟು ಮಾಡುತ್ತಾ ಸಾರ್ವಜನಿಕರ ಶಾಂತಿಗೆ ಭಂಗ ತರುತ್ತಿದ್ದಾನೆ. ಪದೇ ಪದೇ ರೌಡಿ ಚಟುವಟಿಕೆಗಳನ್ನು ಮುಂದುವರೆಸುತ್ತಿದ್ದ ಈತನ ವಿರುದ್ಧ 17 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 6 ಕೊಲೆ ಯತ್ನ ಪ್ರಕರಣಗಳು, ಎರಡು ಸಾರ್ವಜನಿಕರ ಮೇಲೆ ಹಲ್ಲೆ ಪ್ರಕರಣ, ಒಂದು ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ಸೇರಿದಂತೆ ಇನ್ನು ಹಲವು ಪ್ರಕರಣಗಳು ದಾಖಲಾಗಿವೆ.

ಈತ ತನ್ನ ವಶದಲ್ಲಿ ಮಾರಕ ಶಸ್ತ್ರಗಳನ್ನು ಇಟ್ಟುಕೊಂಡಿರುವುದು, ಅಪರಾಧ ಚಟುವಟಿಕೆಗಳನ್ನು ನಡೆಸುತ್ತಾ ತನ್ನ ಸಹಚರರ ಜತೆಗೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡು ಭಯದ ವಾತಾವರಣ ಸೃಷ್ಟಿಸಿರುತ್ತಾನೆ. ಈ ಹಿನ್ನೆಲೆಯಲ್ಲಿ ಈತನನ್ನು ಸಾಮಾನ್ಯ ಕಾನೂನಿನಡಿ ಗೂಂಡಾ ಕಾಯ್ದೆಗಳ ಹತ್ತಿಕ್ಕಲು ಸಾಧ್ಯವಾಗಿರುವುದಿಲ್ಲ.

ಈತನ ಗೂಂಡಾ ಪ್ರವೃತ್ತಿಗೆ ಮತ್ತು ಸಾರ್ವಜನಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ರೌಡಿ ರಾಜು ಅಲಿಯಾಸ್ ರಾಜು ದೊರೈನನ್ನು ಗೂಂಡಾ ಕಾಯ್ದೆಯಡಿ ಬಂಧನದಲ್ಲಿಡಲು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

Facebook Comments