ಟಿಬೆಟಿಯನ್ ಮೇಲೆ ಹಲ್ಲೆ, ರೌಡಿ ಶೀಟರ್ ಸೇರಿ ಮೂವರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.3- ಕಳೆದ ಎಂಟು ವರ್ಷದ ಹಿಂದೆ ತಲೆಮರೆಸಿಕೊಂಡಿದ್ದ ರೌಡಿ ಶೀಟರ್ ಸೇರಿ ಮೂವರನ್ನು ನಗರದ ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಾಂಧಿನಗರದ 2ನೆ ಕ್ರಾಸ್ ನಿವಾಸಿ ರೌಡಿ ಶೀಟರ್ ಸಲೀಂ ಪಾಷ (28), ಎನ್‍ಆರ್ ಮೊಹಲ್ಲಾದ ಸಲ್ಮಾನ್ ಪಾಷ (29) ಹಾಗೂ ಲಷ್ಕರ್ ಮೊಹಲ್ಲಾದ ಮೊಹಮ್ಮದ್ ಅಲಿ (32) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳು ಹಾಗೂ ಬೈಕ್‍ಅನ್ನು ವಶಪಡಿಸಿಕೊಂಡಿದ್ದಾರೆ.

2012ರ ಆಗಸ್ಟ್ 14ರಂದು ದೇವರಾಜ ಮೊಹಲ್ಲಾದ ದುರ್ಗಮ್ಮನ ಗುಡಿರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಟಿಬೆಟಿಯನ್ ಯುವಕನಿಗೆ ಹಿಂಬದಿಯಿಂದ ಬೈಕ್‍ನಲ್ಲಿ ಬಂದ ಇಬ್ಬರು ಡ್ರ್ಯಾಗರ್‍ನಿಂದ ಇರಿದು ಪರಾರಿಯಾಗಿದ್ದರು. ಟಿಬೆಟಿಯನ್ ಯುವಕ ಗಂಭೀರ ಗಾಯಗೊಂಡು ನಂತರ ಚೇತರಿಸಿಕೊಂಡಿದ್ದರು. ಘಟನೆ ನಂತರ ಬೆಂಗಳೂರು, ದುಬೈಗೆ ಪರಾರಿಯಾಗಿದ್ದರು. ಇತ್ತೀಚೆಗೆ ಮೈಸೂರಿಗೆ ಆಗಮಿಸಿದ್ದರು.

ದೇವರಾಜ ಠಾಣೆ ಇನ್ಸ್‍ಪೆಕ್ಟರ್ ಪ್ರಸನ್ನಕುಮಾರ್ ಅವರ ನೇತೃತ್ವದ ತಂಡ ಈ ಪ್ರಕರಣದ ತನಿಖೆ ನಡೆಸಿ ಪ್ರಮುಖ ಆರೋಪಿ ಸಲೀಂನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕಳೆದ ಎಂಟು ವರ್ಷಗಳ ಹಿಂದೆ ಟಿಬೆಟ್ ಯುವಕನ ಮೇಲೆ ಹಲ್ಲೆ ನಡೆಸಿದ್ದನ್ನು ತಿಳಿಸಿದ್ದಾರೆ. ಈತನ ಹೇಳಿಕೆ ಆಧರಿಸಿ ಅಂದಿನ ಘಟನೆಯಲ್ಲಿ ಭಾಗಿಯಾಗಿದ್ದ ಇನ್ನಿಬ್ಬರನ್ನು ಬಂಧಿಸಿದ್ದಾರೆ.

Facebook Comments