ಎಸ್ಕೇಪ್ ಆಗಲು ಯತ್ನಿಸಿದ ರೌಡಿ ಶೀಟರ್‌ಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಫೆ.22-ಸ್ಥಳ ಪರಿಶೀಲನೆಗೆ ಹೋದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿ ಶೀಟರ್ ಪೊಲೀಸರು ಹಾರಿಸಿದ ಗುಂಡು ತಗುಲಿ ಗಾಯಗೊಂಡಿರುವ ಘಟನೆ ಬಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸ್ಟೀಫನ್ ಫರ್ನಾಂಡೀಸ್ ಅಲಿಯಾಸ್ ಗುಂಡ(40) ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕೊಲೆ, ಸರಗಳ್ಳತನ, ದರೋಡೆ ಪ್ರಕರಣದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ಆರು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರು, ತುಮಕೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸುಬ್ರಹ್ಮಣ್ಯಪುರದಲ್ಲಿ ಬಂಧಿಸಿದ್ದರು.  ರಾತ್ರಿ ಬಗಲಗುಂಟೆ ಪೊಲೀಸರು ಈತನನ್ನು ಸ್ಥಳ ಮಹಜರಿಗೆಂದು ಮಲ್ಲಸಂದ್ರ ಗುಟ್ಟೆ ಬಳಿ ಕರೆದೊಯ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.

ತಕ್ಷಣ ತಿಲಕ್‍ಪಾರ್ಕ್ ವೃತ್ತ ನಿರೀಕ್ಷರಾದ ಪಾರ್ವತಮ್ಮ ಅವರು ಆತನಿಗೆ ಶರಣಾಗುವಂತೆ ಸೂಚಿಸದರಾದರೂ ಪೊಲೀಸರ ಮತ್ತೆ ಹಲ್ಲೆ ನಡೆಸಿದಾಗ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಈತನ ಬಲಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.  ತಕ್ಷಣ ಈತನನ್ನು ಸುತ್ತುವರೆದ ಪೊಲೀಸರು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ತಿಲಕ್‍ಪಾರ್ಕ್ ಪೊಲೀಸರು ಬೆಂಗಳೂರು, ರಾಮನಗರ, ತುಮಕೂರು, ಕೋಲಾರ ಮತ್ತು ಕರ್ನಾಟಕ -ತಮಿಳುನಾಡು ಗಡಿಭಾಗದಲ್ಲಿ ಆರೋಪಿಯನ್ನು ಪತ್ತೆಹಚ್ಚಲು ತೀವ್ರ ಕಸರತ್ತು ನಡೆಸಿದ್ದರು.

ತುಮಕೂರು ಜಿಲ್ಲೆಯ ಹಲವು ಠಾಣೆ ವ್ಯಾಪ್ತಿಗಳಲ್ಲಿ ಕೊಲೆ, ಗಾಂಜಾ ಸರಬರಾಜು, ಸರಗಳ್ಳತನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದು, ಠಾಣೆಯೊಂದರಲ್ಲಿ ರೌಡಿಶೀಟರ್ ತೆರೆಯಲಾಗಿದೆ.  ತುಮಕೂರು ನಗರದಲ್ಲಿ ಹಫ್ತಾ ವಸೂಲಿ, ವಾಹನ ಸವಾರರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಈತನ ಬಂಧನಕ್ಕೆ ಹಲವಾರು ಬಾರಿ ಪೊಲೀಸರು ಯತ್ನಿಸಿದರಾದರೂ ಕಣ್ತಪ್ಪಿಸಿ ಪರಾರಿಯಾಗುತ್ತಿದ್ದನು.

ಆರೋಪಿ ಬಂಧನಕ್ಕಾಗಿ ಎಸ್‍ಪಿ ಕೋನವಂಶಿಕೃಷ್ಣ ಅವರು ಮೂರು ತಂಡಗಳನ್ನು ರಚಿಸಿದ್ದರು. ತಿಲಕ್‍ಪಾರ್ಕ್ ವೃತ್ತ ನಿರೀಕ್ಷಕರಾದ ಪಾರ್ವತಮ್ಮ ಅವರ ನೇತೃತ್ವದಲ್ಲಿ ಒಂದು ತಂಡ, ಕ್ಯಾತ್ಸಂದ್ರ ವೃತ್ತ ನಿರೀಕ್ಷಕ ಶ್ರೀಧರ್ ಅವರನ್ನೊಳಗೊಂಡ ತಂಡ ಮತ್ತು ನಗರ ಠಾಣೆ ಇನ್‍ಸ್ಪೆಕ್ಟರ್ ನವೀನ್ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ಒಂದು ತಂಡ ಬೆಂಗಳೂರಿನ ಸುಮ್ರಹ್ಮಣ್ಯನಗರ ಠಾಣೆ ವ್ಯಾಪ್ತಿಯ ಬಡಾವಣೆಯಲ್ಲಿ ಆರೋಪಿ ಸ್ಟೀಫನ್ ಫರ್ನಾಂಡಿಸ್ ಇರುವ ಬಗ್ಗೆ ಮಾಹಿತಿ ಕಲೆ ಹಾಕಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.

ಈತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಬಗಲಗುಂಟೆ ವ್ಯಾಪ್ತಿಯಲ್ಲಿ ಅಂಗಡಿಗಳನ್ನು ಬಾಡಿಗೆಗೆ ಪಡೆದಿರುವುದು ಹಾಗೂ ಮಲ್ಲಸಂದ್ರ ಗುಟ್ಟೆ ಬಳಿ ಇರುವ ಗುಡ್ಡದಲ್ಲಿ ಈತನ ಸಹಚರರು ಹಾಗೂ ಕಾರು ಇರುವ ಬಗ್ಗೆ ಮಾಹಿತಿ ಕಲೆ ಹಾಕಿ ರಾತ್ರಿ ಸ್ಥಳ ಮೊಹಜರಿಗೆ ಹೋದಾಗ ತಿಲಕ್‍ಪಾರ್ಕ್ ಠಾಣೆ ಕಾನ್‍ಸ್ಟೆಬಲ್ ಮಂಜುನಾಥ್, ಬಗಲಗುಂಟೆ ಠಾಣೆಯ ಕಾನ್‍ಸ್ಟೆಬಲ್ ಶ್ರೀನಿವಾಸ್ ಅವರ ಮೇಲೆ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರಿನ ಆಯುಕ್ತರು ಅದಾ ಭಾಸ್ಕರ್ ರಾವ್ ಹಾಗೂ ತುಮಕೂರಿನ ಎಸ್ಪಿ ಕೋನ ವಂಶಿ ಕೃಷ್ಣ ಫೋಲಿಸರ ಸಮಯ ಪ್ರಜ್ಞೆ ಹಾಗೂ ಆರೋಪಿಯನ್ನು ಬಂಧಿಸಿದಕ್ಕೆ ಅಭಿನಂದಿಸಿದ್ದಾರೆ. ಬೆಂಗಳೂರು ಹಾಗೂ ತುಮಕೂರಿನ ಪೊಲೀಸರಿಗೆ ಭಾರಿ ತಲೆನೋವಾಗಿ ಪರಿಣಮಿಸಿದ್ದ ತುಮಕೂರಿನ ರೌಡಿಶೀಟರ್ ಸ್ಟೀಫನ್ ಫರ್ನಾಂಡಿಸ್ ಆಲಿಯಾಸ್ ಗುಂಡ ನನ್ನನು ಬೆಂಗಳೂರು ತುಮಕೂರಿನ ಪೊಲೀಸರ ಜಂಟಿ ಕಾರ್ಯಾಚರಣೆಯೂಂದಿಗೆ ಹಿಡಿಯುವಲ್ಲಿ ಯಶಸ್ವಿಯಾಗಿರುವುದು ಹಾಗೂ ಸ್ಥಳ ಮಹಜರ್ ನಡೆಸಲು ಹೋದಾಗ ಫೋಲಿಸರ ಮೇಲೆ ಹಲ್ಲೆಗೆ ಯತ್ನಿಸಿದ ಸಂದರ್ಭದಲ್ಲಿ ಪೋಲಿಸ್ ರು ತೋರಿದ ಸಮಯ ಪ್ರಜ್ಞೆ ಹಾಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಬೆಂಗಳೂರಿನ ಪೊಲೀಸ್ ಆಯುಕ್ತರಾದ ಭಾಸ್ಕರರಾವ್ ಹಾಗೂ ತುಮಕೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ವಂಶಿಕೃಷ್ಣ ಅವರು ಅಭಿನಂದಿಸಿದ್ದಾರೆ.

ಅಲ್ಲದೆ ಇದೇ ಸಂದರ್ಭದಲ್ಲಿ ಈ ಸಂಜೆ ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ವಂಶಿ ಕೃಷ್ಣ ಅವರು ಆರೋಪಿಯನ್ನು ಹಿಡಿಯಲು ಕಳೆದ ಎರಡು ತಿಂಗಳಿನಿಂದ ನಮ್ಮ ಪೊಲೀಸರು ಶ್ರಮಿಸುತ್ತಿದ್ದರು ಆದರೂ ಸಿಕ್ಕಿರಲಿಲ್ಲ ಆರೋಪಿಯನ್ನು ಹಿಡಿಯಲು ಮೂರು ತಂಡವನ್ನು ರಚಿಸಿದ್ದೇವೆ ಮೂರು ತಂಡಗಳು ರಾಜ್ಯದ ನಾನಾ ಕಡೆ ತೆರಳಿ ಆರೋಪಿಯನ್ನು ಹುಡುಕಾಡುತ್ತಿದ್ದರು ಕಡೆಗೆ ಅಂತಿಮವಾಗಿ ನೆನ್ನೆ ತಿಲಕ್ ಪಾರ್ಕ್ ಪೊಲೀಸ್ ತಂಡದ ಸೈಮನ್ ವಿಕ್ಟರ್, ಮಹಮ್ಮದ್ ಮುನಾವರ್ ಪಾಷ, ಮಂಜುನಾಥ್, ಹನುಮ ರಂಗಯ್ಯ, ಜೀಪಿನ ಚಾಲಕ ನರಸಿಂಹಮೂರ್ತಿ, ಇವರ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಆರೋಪಿಯ ಮೇಲೆ ಫೈರ್ ಮಾಡಲಾಗಿದೆ ಆರೋಪಿಯ ಸ್ಥಿತಿಗತಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುತುಮಕೂರಿಗೆ ಕರೆತರಲಾಗುವುದು ನಾನು ಕೂಡ ಆಸ್ಪತ್ರೆಗೆ ಭೇಟಿ ನೀಡುತ್ತೇನೆ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು ವಿಶೇಷ ಕಾರ್ಯಾಚರಣೆ ತೊಡಗಿದ್ದ ತಿಲಕ್ ಪ್ರಕೃತದ ವಿಶೇಷ ಪೊಲೀಸ್ ತಂಡದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಅವಾರ್ಡ್ ನ್ನು ಘೋಷಣೆ ಮಾಡಿದ್ದಾರೆ.

 

Facebook Comments