ಆರ್ ಆರ್ ನಗರದಲ್ಲಿ ಇಂದಿನಿಂದ ರ‍್ಯಾಂಡಮ್ ಕೊರೊನಾ ಪರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.30- ರಾಜರಾಜೇಶ್ವರಿನಗರ ಉಪಚುನಾವಣೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿ ಹಾಗೂ ಹಿರಿಯ ನಾಗರಿಕರಿಗೆ ಇಂದಿನಿಂದ ರ್ಯಾಂಡಮ್ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಮತ ಚಲಾವಣೆ ಸಂದರ್ಭದಲ್ಲಿ 50ಕ್ಕಿಂತ ಹೆಚ್ಚು ಜನ ಸೇರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಜನ ನಿಯಮ ಮೀರಿ ನೂರಾರು ಮಂದಿ ಗುಂಪು ಗೂಡಿದ್ದರಿಂದ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಭೀತಿ ಎದುರಾಗಿತ್ತು. ಹೀಗಾಗಿ ಕೊರೊನಾ ಸೋಂಕು ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ಬಿಬಿಎಂಪಿ ಇಂದಿನಿಂದ ಎರಡು ಹಂತಗಳಲ್ಲಿ ಇಡೀ ಕ್ಷೇತ್ರಾದ್ಯಂತ ರ್ಯಾಂಡಮ್ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.

ಇಂದು ಉಪಚುನಾವಣೆಯಲ್ಲಿ ಭಾಗಿ ಯಾಗಿದ್ದ ಸಿಬ್ಬಂದಿಗಳಿಗೆ ತಪಾಸಣೆ ನಡೆಸ ಲಾಗುತ್ತಿದೆ. ಇದರ ಜತೆಗೆ ಹಿರಿಯ ನಾಗರಿಕರಿಗೆ ಹಾಗೂ ರೋಗ ಲಕ್ಷಣ ಹೊಂದಿರುವವರನ್ನು ಆರ್‍ಟಿಪಿಸಿಆರ್ ಇಲ್ಲವೆ ಆ್ಯಂಟಿಜನ್ ರ್ಯಾಪಿಡ್ ಟೆಸ್ಟ್ ನಡೆಸಲು ತೀರ್ಮಾನಿಸಲಾಗಿದೆ.2 ಸೋಂಕು ಲಕ್ಷಣ ಕಾಣಿಸಿಕೊಂಡವರಿಗೆ ಆ್ಯಂಟಿಜೆನ್ ರ್ಯಾಪಿಡ್ ಟೆಸ್ಟ್ ನಡೆಸಲಾಗು ವುದು. ಉಳಿದವರಿಗೆ ಆರ್‍ಟಿಪಿಸಿಆರ್ ಮಾದರಿ ಪರೀಕ್ಷೆ ನಡೆಸಲಾಗುತ್ತಿದೆ.

ಆರ್‍ಆರ್ ನಗರದಲ್ಲಿ ಯಾರಿಗಾದರೂ ಸೋಂಕಿನ ಲಕ್ಷಣಗಳು ಕಂಡುಬಂದರೆ ಖುದ್ದು ಹಾಜರಾಗಿ ತಪಾಸಣೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಯಾವುದೇ ವ್ಯಕ್ತಿಗೆ ಸೋಂಕು ತಗುಲಿದ್ದರೆ ಐದು ದಿನಗಳ ನಂತರ ರೋಗ ಲಕ್ಷಣ ಕಂಡುಬರಲಿದೆ. ಹೀಗಾಗಿ ಚುನಾವಣೆ ನಡೆದು ಐದು ದಿನ ಕಳೆದ ಹಿನ್ನೆಲೆಯಲ್ಲಿ ರ್ಯಾಂಡಮ್ ಪರೀಕ್ಷೆ ನಡೆಸಲಾಗುತ್ತಿದೆ.

ಯಾವುದೇ ವ್ಯಕ್ತಿಗೆ ಸೋಂಕು ಕಾಣಿಸಿ ಕೊಂಡರೆ ಅಂತಹ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ. ಈ ಬಾರಿ ನಡೆಸಲಾಗುತ್ತಿರುವ ರ್ಯಾಂಡಮ್ ಪರೀಕ್ಷೆ ಭವಿಷ್ಯದಲ್ಲಿ ನಡೆಯುವ ಚುನಾವಣೆ ಸಂದರ್ಭಕ್ಕೆ ಮಾದರಿಯಾಗಲಿದೆ. ಹೀಗಾಗಿ ಸೋಂಕು ಹರಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ರ್ಯಾಂಡಮ್ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Facebook Comments