ಆರ್.ಆರ್. ನಗರ ಸೇರಿದಂತೆ ನಾಳೆ 10 ರಾಜ್ಯಗಳ ಉಪ ಚುನಾವಣೆ ಫಲಿತಾಂಶ

ಈ ಸುದ್ದಿಯನ್ನು ಶೇರ್ ಮಾಡಿ

Counting

ನವದೆಹಲಿ/ಬೆಂಗಳೂರು, ಮೇ 30- ಭಾರೀ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶದ ಕೈರಾನ ಸೇರಿದಂತೆ ಹತ್ತು ರಾಜ್ಯಗಳ ನಾಲ್ಕು ಲೋಕಸಭೆ, ಕರ್ನಾಟಕದ ರಾಜರಾಜೇಶ್ವರಿ ನಗರ ಹಾಗೂ 11 ವಿಧಾನಸಭೆಗಳ ಉಪ ಚುನಾವಣೆ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದೆ. ತೀವ್ರ ಕುತೂಹಲ ಕೆರಳಿಸಿರುವ ಈ ಫಲಿತಾಂಶ 2019ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಉತ್ತರಪ್ರದೇಶ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ಬಿಹಾರ, ಜಾರ್ಖಂಡ್, ನಾಗಾಲ್ಯಾಂಡ್, ಮೇಘಾಲಯ, ಕರ್ನಾಟಕ, ಕೇರಳ ಮತ್ತು ಪಂಜಾಬ್ ಈ 10 ರಾಜ್ಯಗಳಿಗೆ ಮೇ 28ರಂದು ಉಪ ಚುನಾವಣೆ ನಡೆದಿತ್ತು   ಉತ್ತರ ಪ್ರದೇಶದ ಗೋರಖ್‍ಪುರ್ ಮತ್ತು ಫೂಲ್‍ಪುರ್ ಲೋಕಸಭೆ ಉಪ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಚೇತರಿಸಿಕೊಳ್ಳುತ್ತಿರುವ ಬಿಜೆಪಿಗೆ ನಾಳಿನ ಫಲಿತಾಂಶ ಅತ್ಯಂತ ಮಹತ್ವದ್ದಾಗಿದೆ.

ಕೈರಾನಾ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕ ದಳ(ಆರ್‍ಎಲ್‍ಡಿ) ತಬ್ಸಮ್ ಹಸನ್ ವಿರುದ್ಧ ಬಿಜೆಪಿಯ ಮೃಗಾಂಕ್ ಸಿಂಗ್ ಕಣಕ್ಕಿಳಿಸಿದ್ದಾರೆ ಆರ್‍ಎಲ್‍ಡಿ ಅಭ್ಯರ್ಥಿಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಹಾಗೂ ಅಮ್ ಆದ್ಮಿ ಪಕ್ಷ ಬೆಂಬಲ ಸೂಚಿಸಿದ್ದು, ನಾಳೆ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಪ್ರತಿಪಕ್ಷಗಳ ಸಂಯುಕ್ತ ಅಭ್ಯರ್ಥಿ ಸ್ಪರ್ಧಿಸಿರುವುದರಿಂದ ಕೈರಾನಾ ಲೋಕಸಭಾ ಸ್ಥಾನವು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಉತ್ತರ ಪ್ರದೇಶದ ನೂರ್‍ಪುರ್ ವಿಧಾನಸಭೆ ಉಪ ಚುನಾವಣೆ ಫಲಿತಾಂಶವೂ ನಾಳೆ ಪ್ರಕಟವಾಗಲಿದೆ. ಉಳಿದಂತೆ ಮಹಾರಾಷ್ಟ್ರದ ಪಾಲ್ಘರ್ ಹಾಗೂ ಭಾಂದಾರ-ಗೊಂಡಿಯಾ ಲೋಕಸಭಾ ಕ್ಷೇತ್ರ ಮತ್ತು ಕಡೇಗಾಂವ್ ವಿಧಾನಸಭಾ ಕ್ಷೇತ್ರ ಹಾಗೂ ನಾಗಾಲ್ಯಾಂಡ್‍ನ ನಾಗಾಲ್ಯಾಂಡ್ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಕೂಡ ಕುತೂಹಲ ಕೆರಳಿಸಿದೆ.  ಪಶ್ಚಿಮ ಬಂಗಾಳದ ಮಹೇಶ್ವಲ್, ಜಾರ್ಖಂಡ್‍ನ ಗೋವಿಯಾ-ಸಿಲ್ಲಿ, ಬಿಹಾರದ ಜೋಶಿಹಟ್, ಮೇಘಾಲಯದ ಅಂಪಟಿ, ಕೇರಳದ ಚೆಂಗನ್ನೂರು, ಕರ್ನಾಟಕದ ಆರ್.ಆರ್.ನಗರ, ಚಂಡಿಗಢದ ಶಹಾಕೋಟ್ ಹಾಗೂ ಉತ್ತರಾಖಂಡದ ತಾರಲಿ ವಿಧಾನಸಭಾ ಕ್ಷೇತ್ರಗಳ ಫಲಿತಾಂಶದತ್ತ ಎಲ್ಲರ ಗಮನ ಹರಿದಿದೆ.

Facebook Comments

Sri Raghav

Admin