ಆರ್.ಆರ್.ನಗರದಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನೆಲ್ಲ ಹಿಂದಿಕ್ಕಿದ ಹುಚ್ಚ ವೆಂಕಟ್…!

ಈ ಸುದ್ದಿಯನ್ನು ಶೇರ್ ಮಾಡಿ

Huccha--1
ಬೆಂಗಳೂರು, ಮೇ 31 : ಇಂದು ಪ್ರಕಟವಾದ ಆರ್ ಆರ್ ನಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿಗಳಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದು ಮಿಂಚಿದ್ದಾರೆ ಫೈರಿಂಗ್ ಸ್ಟಾರ್ ವೆಂಕಟ್. ಹೌದು, ಈ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಒಟ್ಟು 14 ಅಭ್ಯರ್ಥಿಗಳಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದವರಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಆಲ್ ಇನ್ ಒನ್ ಅಂಡ್ ಓನ್ಲಿ ಹುಚ್ಚ ವೆಂಕಟ್ ಪಕ್ಷೇತರ ಅಭ್ಯರ್ಥಿಗಳಲ್ಲೇ ಹೆಚ್ಚು ಅಂದರೆ 764 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡರೂ ಪಕ್ಷೇತರ ಅಭ್ಯರ್ಥಿಗಳಲ್ಲೇ ಬೆಸ್ಟ್ ಅಭ್ಯರ್ಥಿ ಎನಿಸಿಕೊಂಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ 108064 ಮತಗಳನ್ನು ಪಡೆದು ಭರ್ಜರಿ ಗೆಲುವು ದಾಖಲಿಸಿದರೆ, ಬಿಜೆಪಿಯ ತುಳಿಸಿ ಮುನಿರಾಜು 82572, ಜೆಡಿಎಸ್ ನ ರಾಮಚಂದ್ರಪ್ಪ –60360 ಮತಗಳನ್ನು ಪಡೆದು ಕ್ರಮವಾಗಿ ಒಂದು, ಎರಡು , ಮೂರನೇ ಸ್ಥಾನದಲ್ಲಿದ್ದರೆ, 764 ಮತಗಳನ್ನು ಪಡೆದ ಹುಚ್ಚ ವೆಂಕಟ್ 4ನೇ ಅಭ್ಯರ್ಥಿಯಾಗಿದ್ದಾರೆ.

ಫಲಿತಾಂಶದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವೆಂಕಟ್ “ನಾನು ಯಾರಿಗೂ ಯಾವುದೇ ರೀತಿಯ ಆಮಿಷವೊಡ್ಡಿಲ್ಲ. ಪ್ರಾಮಾಣಿಕವಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಅದಕ್ಕೆಂದೇ ನಾನು ಸೋತಿದ್ದೇನೆ. ತಪ್ಪು ನನ್ನದೋ ಜನರದ್ದೋ?” ಎಂದು ಪ್ರಶ್ನಿಸಿದ್ದಾರೆ.

Facebook Comments

Sri Raghav

Admin