ಕೊರೊನಾ ವಾರಿಯರ್ಸ್‍ಗಳಿಗೆ ಅಭಿನಂದನೆ

ಈ ಸುದ್ದಿಯನ್ನು ಶೇರ್ ಮಾಡಿ

ರಾಜರಾಜೇಶ್ವರಿನಗರ, ಮೇ 29- ಜೀವದ ಹಂಗು ತೊರೆದು ಸಮಾಜದ ಆರೋಗ್ಯಕ್ಕಾಗಿ ದುಡಿಯುತ್ತಿರುವ ಶ್ರಮಿಕ ವರ್ಗವನ್ನು ಗೌರವಿಸುವುದು ಪುಣ್ಯದ ಕೆಲಸ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಬಿ.ಆರ್. ನಂಜುಂಡಪ್ಪ ತಿಳಿಸಿದ್ದಾರೆ. ಜೆಪಿ ಪಾರ್ಕ್ ವಾರ್ಡ್ ನ ಮುತ್ಯಾಲನಗರದ ತೋಟದ ಮನೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರು ಇತರೆ ಕೊರೊನಾ ವಾರಿಯರ್ಸ್ ಗೆ ಅಭಿನಂದಿಸಿ ಸಲ್ಲಿಸಿ ಮಾತನಾಡಿದರು.

ಮಹಾಮಾರಿ ಕೊರೊನಾ ಸೋಂಕು ತಡೆಗೆ ಸೇವಾ ಕಾರ್ಯದಲ್ಲಿ ನಿರತರಾಗಿರುವ ಪೌರ ಕಾರ್ಮಿಕರು ಹಾಗೂ ಪೊಲೀಸ್ ಸಿಬ್ಬಂದಿಯ ಸೇವೆ ಅನನ್ಯವಾಗಿದ್ದು ಈ ನಿಟ್ಟಿನಲ್ಲಿ ಶ್ರಮಿಕರ ಸೇವೆಯನ್ನು ಗುರುತಿಸಿ ಅಭಿನಂದಿಸಲಾಗಿದೆ ಎಂದರು ಎಂದು ಶ್ಲಾಘಿಸಿದರು ಜಾಲಹಳ್ಳಿ ಠಾಣಾಧಿಕಾರಿ ಯಶವಂತ್ ಮಾತನಾಡಿ, ದೇಶದಲ್ಲಿನ ಮಹಾನಗರಗಳ ಪೈಕಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಗುಣಮುಖರಾಗುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ ಇದರಲ್ಲಿ ಕೊರೊನಾ ವಾರಿಯರ್ಸ್ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

ಯಶವಂತಪುರ ಠಾಣಾಧಿಕಾರಿ ಮಹಮ್ಮದ್ ಮುಕರಾಮ್ ಮಾತನಾಡಿ, ಜನಜೀವನವನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಲಾಕ್ ಡೌನ್ ಸಡಿಲಗೊಳಿಸಿದೆ ಕೊರೊನಾ ಹೋಗಿಲ್ಲ ನಾಗರಿಕರು ತುಂಬಾ ಜಾಗ್ರತೆ ವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು. ಪೌರ ಕಾರ್ಮಿಕರಿಗೆ ಈ ವೇಳೆ ಗೃಹಪಯೋಗಿ ವಸ್ತುಗಳು ನೀಡಿ ಗೌರವಿಸಲಾಯಿತು. ಬಿಜೆಪಿ ಮುಖಂಡರಾದ ಆರ್.ಎನ್.ಯದಿಷ್ಠರಾಮï, ಸಂದೇಶ್, ಲಿಂಗರಾಜು ಸೋಮಯ್ಯ , ಎ ಆರ್ ಒ ಶಶಿಕಲಾ, ಎಸ್ ಎಚ್ ಐ ರಮೇಶ್ , ಎಸ್‍ಎಸ್‍ಆರ್ ಕುಮಾರ್ ದಾಸ್ ಮೊದಲಾದವರಿದ್ದರು.

Facebook Comments