ಹತ್ರಾಸ್‍ನಲ್ಲಿ ಗಲಭೆ ಸೃಷ್ಟಿಸಲು 100 ಕೋಟಿ ರೂ. ಹಣ ಮೀಸಲು : ಸ್ಪೋಟಕ ಮಾಹಿತಿ ಬಹಿರಂಗ..!

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ ಅ.8-ದೇಶಾದ್ಯಂತ ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿರುವ ಉತ್ತರಪ್ರದೇಶದ ಹತ್ರಾಸ್ ಗ್ಯಾಂಗ್‍ರೇಪ್ ಮತ್ತು ಕೊಲೆ ಪ್ರಕರಣದ ವಿಚಾರದಲ್ಲಿ ಶಾಂತಿ ಕದಡಿ ವ್ಯಾಪಕ ಹಿಂಸಾಚಾರಕ್ಕೆ ವ್ಯವಸ್ಥಿತ ಜಾಲವೇ ಸಕ್ರಿಯವಾಗಿರುವ ಆಘಾತಕಾರಿ ಘಟನೆ ಬಹಿರಂಗಗೊಂಡಿದೆ.  ಹತ್ರಾಸ್ ಸೇರಿದಂತೆ ಉತ್ತರಪ್ರದೇಶದ ವಿವಿಧೆಡೆ ಜಾತಿ ಗಲಭೆ, ಕೋಮು ಸಂಘರ್ಷ ಮತ್ತು ಭಾರಿ ಹಿಂಸಾಚಾರ ನಡೆಸಲು 100 ಕೋಟಿಗೂ   ಅಧಿಕ ಹಣವನ್ನು ಮೀಸಲಾಗಿದ್ದ ಸೋಟಕ ಮಾಹಿತಿ ಜಾರಿ ನಿರ್ದೇಶನಾಲ(ಇಡಿ)ಕ್ಕೆ ಲಭಿಸಿದೆ.

ಹತ್ರಾಸ್‍ನಲ್ಲಿ ಗಲಭೆ ಸೃಷ್ಟಿಸಿ ಶಾಂತಿ ಕದಡಿ ಭಾರೀ ಹಿಂಸೆಗೆ ಸಂಚು ರೂಪಿಸಿದ್ದ ವ್ಯವಸ್ಥಿತ ಜಾಲವೊಂದನ್ನು ಪೊಲೀಸರು ಪತ್ತೆ ಮಾಡಿ ಈ ಸಂಬಂಧ ನಾಲ್ವರನ್ನು ಬಂಸಿದ ಬೆನ್ನಲ್ಲೇ ಈ ಆತಂಕಕಾರಿ ಮಾಹಿತಿ ಲಭಿಸಿದೆ.

ಹತ್ರಾಸ್ ,ಬಲರಾಮ್‍ಪುರ ಮತ್ತಿತರ ಸೂಕ್ಷ್ಮ ಸ್ಥಳಗಳಲ್ಲಿ ಗಲಭೆ ಮತ್ತು ಹಿಂಸಾಚಾರ ಸೃಷ್ಟಿಗೆ ಹವಾಲಾ ಹಣ ಹರಿದು ಬಂದಿರುವ ಬಗ್ಗೆಯೂ ಮಾಹಿತಿ ಲಭಿಸಿದೆ. ಇದಕ್ಕಾಗಿ 100 ಕೋಟಿ ರೂ.ಗಳನ್ನು ಸಮಾಜಘಾತುಕ ಶಕ್ತಿಗಳು ಮೀಸಲಿಟ್ಟಿದ್ದು , ಇದರಲ್ಲಿ ಏಷ್ಯಾ ದೇಶದ ಕೆಲವು ರಾಷ್ಟ್ರಗಳ ಕೈವಾಡವು ಇದೆ.

ಇದಕ್ಕೆ ಪುಷ್ಟಿ ನೀಡುವಂತೆ ದ್ವೀಪ ರಾಷ್ಟ್ರ ಮಾರಿಷಸ್‍ನಿಂದ 50 ಕೋಟಿ ರೂ.ಗಳ ಹವಾಲಾ ಹಣ ಭಾರತಕ್ಕೆ ರವಾನೆಯಾಗಿರುವ ಬಗ್ಗೆ ಸುಳಿವು ಲಭಿಸಿದ್ದು , ಇಡಿ ಅಕಾರಿಗಳು ತೀವ್ರ ತನಿಖೆ ಮುಂದುವರೆಸಿದ್ದಾರೆ.

ಹತ್ರಾಸ್ ಸೇರಿದಂತೆ ಉತ್ತರಪ್ರದೇಶದ ವಿವಿಧೆಡೆ ನಡೆಯಬಹುದಾಗಿ ವ್ಯಾಪಕ ಕೋಮು ಗಲಭೆ ಮತ್ತು ಹಿಂಸಾಚಾರಗಳು ಇವರ ಬಂಧನದಿಂದ ತಪ್ಪಿದಂತಾಗಿದೆ. ದೇಶದ ವಿವಿಧೆಡೆ ಆತಂಕ ಸೃಷ್ಟಿಸುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‍ಐ) ನಾಲ್ವರು ಸದಸ್ಯರನ್ನು ಮಥುರಾದಲ್ಲಿ ಪೊಲೀಸರು ಸೆರೆ ಹಿಡಿದಿದ್ದಾರೆ.

ದೆಹಲಿಯಿಂದ ಹತ್ರಾಸ್‍ಗೆ ತೆರಳಿ ಅಲ್ಲಿ ಅಶಾಂತಿ ಸೃಷ್ಟಿಸಿ ಜಾತಿ ಗಲಭೆ ಮತ್ತು ಹಿಂಸಾಚಾರ ಸೃಷ್ಟಿಸಲು ತೆರಳುತ್ತಿದ್ದಾಗ ಈ ನಾಲ್ವರನ್ನು ಬಂಸಲಾಗಿದೆ.  ಮುಜಫರ್‍ನಗರದ ಅತಿಕ್-ಉರ್-ರೆಹಮಾನ್, ಮಲ್ಲಪ್ಪುರಂನ ಸಿದ್ಧಿಖಿ, ಬರೈಚ್‍ನ ಮಸೂದ್ ಅಹಮದ್ ಹಾಗೂ ರಾಮಪುರ್‍ನ ಅಲಾಂ ಎಂಬುವರನ್ನು ಬಂಸಲಾಗಿದೆ. ಇವರೆಲ್ಲರೂ ಪಿಎಫ್‍ಐನ ಸಕ್ರಿಯ ಕಾರ್ಯಕರ್ತರು.

ಆರೋಪಿಗಳಿಂದ ಮೊಬೈಲ್ ಫೋನ್‍ಗಳು, ಲ್ಯಾಪ್‍ಟಾಪ್‍ಗಳು ಮತ್ತು ಉತ್ತರಪ್ರದೇಶದಲ್ಲಿ ಕೋಮುಗಲಭೇ ಮತ್ತು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಬಹುದಾಗಿದ್ದ ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ. ದೆಹಲಿಯಿಂದ ಕೆಲ ಅನುಮಾಸ್ಪದ ವ್ಯಕ್ತಿಗಳು ಹತ್ರಾಸ್‍ಗೆ ತೆರಳುತ್ತಿದ್ದಾರೆ ಎಂಬ ಖಚಿತ ವರ್ತಮಾನದ ಮೇರೆಗೆ ಮಥುರಾದ ಟೋಲ್ ಫ್ಲಾಜಾದಲ್ಲಿ ತಪಾಸಣೆ ವೇಳೆ ಇವರನ್ನು ಬಂಸಲಾಗಿದೆ ಎಂದು ಉನ್ನತ ಪೊಲೀಸ್ ಅಕಾರಿಯೊಬ್ಬರು ತಿಳಿಸಿದ್ದಾರೆ.

ಕಾನೂನು-ಸುವ್ಯವಸ್ಥೆ ಧಕ್ಕೆ ಹುನ್ನಾರ : ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡಿ ಶಾಂತಿ ಕದಡುವ ದುರುದ್ದೇಶದಿಂದ ಹತ್ರಾಸ್ ಘಟನೆಯನ್ನು ಮುಂದಿಟ್ಟುಕೊಂಡು ವ್ಯವಸ್ಥಿತ ಸಮೂಹವೊಂದು ಹುನ್ನಾರ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.

‘ಜಸ್ಟೀಸ್‍ಟುಹತ್ರಾಸ್’ ಎಂಬ ವೆಬ್‍ಸೈಟ್ ಮೂಲಕ ಕೆಲವು ದುಷ್ಕರ್ಮಿಗಳು ಹತ್ರಾಸ್ ಘಟನೆ ಬಗ್ಗೆ ಸುಳ್ಳು ವದಂತಿಗಳನ್ನು ಸೃಷ್ಟಿಸಿ ಜಾತಿ ಆಧಾರಿತ ಗಲಬೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಈ ಘಟನೆ ಬಗ್ಗೆ ಕಪೋಲಕಲ್ಪಿತ ಸುದ್ದಿಗಳನ್ನು ವೆಬ್‍ಸೈಟ್ ಮೂಲಕ ವಿತ್ತರಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

Facebook Comments

Sri Raghav

Admin