ಹಾಲಿನ ದರ 100ರೂ.ಗೆ ಏರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಚಂಡೀಗಢ, ಫೆ.28- ಕೃಷಿ ಕಾನೂನುಗಳನ್ನು ವಿರೋಸಿ ಹಾಗೂ ತೈಲ ಬೆಲೆ ಏರಿಕೆ ವಿರೋಸಿ ಇನ್ನು ಮುಂದೆ ಪ್ರತಿ ಲೀಟರ್ ಹಾಲನ್ನು 100ರೂ.ಗೆ ಮಾರಾಟ ಮಾಡುವಂತೆ ಹರಿಯಾಣದ ಹಿಸ್ಸಾರ್‍ಕಾಫ್ ಪಂಚಾಯ್ತಿ ರೈತರಿಗೆ ಸಲಹೆ ನೀಡಿದೆ.

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ಸುಮಾರು 90ಕ್ಕೂ ಹೆಚ್ಚು ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ರೈತರು ಹಂತ ಹಂತವಾಗಿ ತಮ್ಮ ಪ್ರತಿಭಟನೆಯನ್ನು ಹೆಚ್ಚಿಸುತ್ತಿದ್ದಾರೆ.
ಸಹಕಾರ ಸಂಘಗಳ ಮೂಲಕ ಸರ್ಕಾರ ಖರೀದಿಸುವ ಹಾಲಿನ ಬೆಲೆಯನ್ನು ಲೀಟರ್‍ಗೆ 100 ರೂ. ನಿಗದಿ ಮಾಡುವಂತೆ ರೈತರಿಗೆ ಕಾಫ್ ಸದಸ್ಯರು ಸಲಹೆ ನೀಡಿದ್ದಾರೆ.

ಇತ್ತೀಚೆಗೆ ಗುಜರಾತ್ ಹಾಲು ಮಾರುಕಟ್ಟೆ ಸಹಕಾರ ಸಂಘಗಳು ಪ್ರತಿ ಲೀಟರ್ ಹಾಲಿನ ದರದಲ್ಲಿ 2ರೂ. ಹೆಚ್ಚಿಸಿದ್ದವು. ಅದರ ಬೆನ್ನಲ್ಲೇ ಈಗ ಹರಿಯಾಣ ರೈತರು ದರ ಏರಿಕೆಗೆ ಮುಂದಾಗಿರುವುದು ಜನ ಜೀವನವನ್ನು ಆತಂಕ್ಕೀಡು ಮಾಡಿದೆ. ಪ್ರಸ್ತುತ ಹರಿಯಾಣದಲ್ಲಿ ಪ್ರತಿ ಲೀಟರ್ ಹಾಲಿನ ದರ 55ರಿಂದ 60ರೂ. ಇದ್ದು, ಅದನ್ನು ಏಕಾಕಿ ಹೆಚ್ಚಳ ಮಾಡಲು ಕಾಫ್ ಪಂಚಾಯ್ತಿ ನಿರ್ಧರಿಸಿದೆ.

ಸರ್ಕಾರದ ಸಹಕಾರ ಸಂಘಗಳಿಗೆ ಮಾರಾಟ ಮಾಡುವ ಹಾಲಿನ ದರವನ್ನು ಮಾತ್ರ ಏರಿಕೆ ಮಾಡಿ, ಉಳಿದಂತೆ ಜನ ಸಾಮಾನ್ಯರಿಗೆ 55ರಿಂದ 60ರೂ.ನಲ್ಲೇ ಮಾರಾಟ ಮಾಡಿ ಎಂದು ಕಾಫ್ ಮುಖಂಡರು ಸಲಹೆ ಮಾಡಿದ್ದಾರೆ.

Facebook Comments

Sri Raghav

Admin