ದೆಹಲಿಯಲ್ಲಿ 16 ಕೋಟಿ ಮೌಲ್ಯದ ಹೆರಾಯಿನ್ ವಶ, ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

heroin

ನವದೆಹಲಿ,ಜು.21- ಮಾದಕ ದ್ರವ್ಯ ಸಾಗಣೆ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ದೆಹಲಿ ಪೊಲೀಸರು ಇಬ್ಬರನ್ನು ಬಂಧಿಸಿ, 16 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.  ಅಸ್ಸಾಂ ಮೂಲದ ಬಿನೋದ್ ರಾಜ್ ಬೋಂಗ್ ಶಿ ಹಾಗೂ ಉತ್ತರ ಬರೇಲಿ ನಿವಾಸಿ ರಿಯಾಜ್ಜುದ್ದೀನ್ ಬಂಧಿತ ಆರೋಪಿಗಳು. ಇವರಿಬ್ಬರು ಅಸ್ಸಾಂನಿಂದ ತಂದ ಮಾದಕವಸ್ತುಗಳನ್ನು ದೆಹಲಿ ಹಾಗೂ ಉತ್ತರ ಪ್ರದೇಶದ ಯುವಕರಿಗೆ ಮಾರುತ್ತಿದ್ದರು.  ಈ ಸಂಬಂಧ ಪೊಲೀಸರಿಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಶೋಧ ಕಾರ್ಯ ಕೈಗೊಂಡ ಪೊಲೀಸರು ಮೆಟ್ರೋ ನಿಲ್ದಾಣದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

Facebook Comments

Sri Raghav

Admin