ಜು.12ರಿಂದಲೇ ಮಾವು ಬೆಳೆಗೆ 2500 ರೂ. ಬೆಂಬಲ ಬೆಲೆ ಆದೇಶ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

Mango--01
ಬೆಂಗಳೂರು, ಜು.13- ರಾಜ್ಯದಲ್ಲಿ ಪ್ರಸ್ತುತ ಮಾವಿನ ಬೆಲೆ ಕುಸಿಯುತ್ತಿರುವುದನ್ನು ಗಮನಿಸಿದ ಸರ್ಕಾರ ರೈತರ ಸಂಕಷ್ಟಕ್ಕೆ ನೆರವಾಗುವ ಹಿನ್ನೆಲೆಯಲ್ಲಿ ಘೋಷಿಸಿರುವ ಪ್ರತಿ ಟನ್‍ಗೆ 2500 ರೂ. ( ಪ್ರತಿ ಕೆಜಿಗೆ 2.5ರೂ.)ಬೆಂಬಲ ಬೆಲೆಯನ್ನು ಜು.12ರಿಂದ ಜಾರಿಗೊಳಿಸಿ ಆದೇಶಿಸಿದೆ. ಎಪಿಎಂಸಿಗಳಲ್ಲಿ ಮಾರಾಟ ಮಾಡಲಾಗುವ ಮಾವಿನ ಹಣ್ಣಿಗೆ ಪ್ರತಿ ಟನ್‍ಗೆ 2500 ರೂ.ಗಳನ್ನು ಸರ್ಕಾರ ಘೋಷಿಸಿತ್ತು. ಅದನ್ನು ಜು.12ರಿಂದ ಜಾರಿಗೆ ಬರುವಂತೆ ಆದೇಶಿಸಿದೆ.

ಪ್ರಸ್ತುತ ರಾಜ್ಯದಲ್ಲಿ ಒಂದು ಲಕ್ಷ ಟನ್ ಪ್ರಮಾಣದ ಮಾವಿನ ಹಣ್ಣು ಮಾರುಕಟ್ಟೆಗೆ ಅವಕವಾಗುವ ಅಂದಾಜಿದ್ದು, ಇದಕ್ಕೆ ಅಗತ್ಯವಿರುವ 27.5ಕೋಟಿ ಅನುದಾನವನ್ನು ಸಹಕಾರಿ ಇಲಾಖೆ ನಿರ್ವಹಿಸುವ ಆವರ್ತನಿಧಿಯಿಂದ ಭರಿಸಲು ಸೂಚಿಸಿದೆ. ಈ ಬೆಂಬಲ ಬೆಲೆ ಯೋಜನೆಯು ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಯಾಗಿ 25-07-2018ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧೀನ ಕಾರ್ಯದರ್ಶಿ ಆರ್.ಮಹದೇವ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರತಿ ರೈತ ಕುಟುಂಬಕ್ಕೆ ಗರಿಷ್ಠ 5ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ಬೆಂಬಲ ಬೆಲೆ ಯೋಜನೆಯಡಿ ಸಹಾಯಧನ ಪರಿಗಣಿಸಲಾಗುವುದು. ಮಾರುಕಟ್ಟೆ ಧಾರಣೆ ಹಾಗೂ ಸರ್ಕಾರದ ಬೆಂಬಲ ಬೆಲೆ ಸೇರಿ ಕೆಜಿಗೆ 7.5ರೂ. ಆದಲ್ಲಿ ರೂ. 2.5 ರೂ.ಗಳ ಬೆಂಬಲ ಬೆಲೆ ನೀಡಲಾಗುವುದು. ಯಾವುದೇ ಕಾರಣಕ್ಕೂ ಬೆಂಬಲ ಬೆಲೆ ಪ್ರತಿ ಕೆಜಿಗೆ 2.5ರೂ. ಮೀರುವಂತಿಲ್ಲ.

Facebook Comments

Sri Raghav

Admin