8,100 ಕೋಟಿ ವಂಚಿಸಿದ ಸ್ಟರ್ಲಿಂಗ್ ಪ್ರವರ್ತಕರ ವಿರುದ್ಧ ಕೋರ್ಟ್‍ಗೆ ಇಡಿ ಮೊರೆ

ಈ ಸುದ್ದಿಯನ್ನು ಶೇರ್ ಮಾಡಿ

Sterling

ನವದೆಹಲಿ, ಅ.26 (ಪಿಟಿಐ)- ವಿವಿಧ ಬ್ಯಾಂಕುಗಳಿಗೆ 8,100 ಕೋಟಿ ರೂ.ಗಳ ಸಾಲ ಪಡೆದು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಗ್ರೂಪ್‍ನ ಮಾಲೀಕರನ್ನು ಹಿಡಿದು ಸ್ವದೇಶಕ್ಕೆ ಕರೆತರುವ ಯತ್ನವನ್ನು ಕೇಂದ್ರ ಸರ್ಕಾರ ಮತ್ತಷ್ಟು ತೀವ್ರಗೊಳಿಸಿದೆ.

ಈ ಸಂಬಂಧ ಸ್ಟರ್ಲಿಂಗ್ ಸಮೂಹದ ಪ್ರವರ್ತಕರ ವಿರುದ್ಧ ಜಾರಿ ನಿರ್ದೇಶ ನಾಲಯ(ಇಡಿ) ಇಂದು ದೆಹಲಿಯಲ್ಲಿ ವಿಶೇಷ ಕೋರ್ಟ್ ಮೊರೆ ಹೋಗಿದೆ. ಹಣ ದುರ್ಬಳಕೆ ತಡೆ ಕಾಯ್ದೆ(ಪಿಎಂಎಲ್‍ಎ)ಯ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ತನಿಖಾ ಸಂಸ್ಥೆ, ಸಲ್ರ್ಟಿಂಗ್ ಬಯೋಟೆಕ್ ಗ್ರೂಪ್‍ನ ಪ್ರಮೋಟರ್‍ಗಳಾದ ನಿತಿನ್ ಸಂದೆಸರ, ಚೇತನ್ ಸಂದೆಸರ, ದೀಪ್ತಿ ಸಂದೆಸರ ಮತ್ತು ಹಿತೇಶ್ ಸಂದೆಸರ ಅವರನ್ನು ಹೊಸ ಕಾನೂನಿನ ಅಡಿ ದೇಶಭ್ರಷ್ಟ ಘೋಷಿತ ಆರ್ಥಿಕ ಅಪರಾಧಿಗಳೆಂದು ಪರಿಗಣಿಸುವಂತೆ ಕೋರಿದೆ.

ವಿವಿಧ ಬ್ಯಾಂಕುಗಳಿಂದ 8.100 ಕೋಟಿ ರೂ.ಗಳ ಸಾಲ ಎತ್ತುವಳಿ ಮಾಡಿ ಉದ್ದೇಶಪೂರ್ವಕ ಸುಸ್ತಿದಾರರಾಗಿ ಕ್ರಿಮಿನಲ್ ತನಿಖೆಯಿಂದ ಪಾರಾಗಲು ದೇಶದಿಂದ ಪರಾರಿಯಾಗಿರುವ ನಾಲ್ವರ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಇಡಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೊಸ ಕಾನೂನು ಅಡಿ ವಡೋದರ ಮೂಲದ ವಾಣಿಜ್ಯ ಕುಟುಂಬದ 8,000 ಕೋಟಿ ರೂ.ಗಳ ಮೌಲ್ಯದ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡುವಂತೆಯೂ ಇಡಿ, ನ್ಯಾಯಾಲಯಕ್ಕೆ ಮನವಿ ಮಾಡಿದೆ.

Facebook Comments