ಆರ್‌ಎಸ್‌ಎಸ್‌ ಕಾರ್ಯಕರ್ತ ಮತ್ತು ಗರ್ಭಿಣಿ ಪತ್ನಿ, ಮಗನ ಕಗ್ಗೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಷಿದಾಭಾದ್, ಅ.10- ಆರ್‍ಎಸ್‍ಎಸ್ ಕಾರ್ಯಕರ್ತ, ಅವರ ಗರ್ಭಿಣಿ ಪತ್ನಿ ಮತ್ತು ಮಗನನ್ನು ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಿನ್ನೆ ಪಶ್ಚಿಮಬಂಗಾಳದ ಮುಷಿದಾಭಾದ್ ಜಿಲ್ಲೆಯಲ್ಲಿ ನಡೆದಿದೆ.

ವೃತ್ತಿಯಲ್ಲಿ ಶಿಕ್ಷಕರೂ ಆಗಿರುವ ಆರ್‍ಎಸ್‍ಎಸ್ ಕಾರ್ಯಕರ್ತ ಬಂಧುಪ್ರಕಾಶ್ ಪಾಲ್, ಅವರ ಪತ್ನಿ ಬ್ಯೂಟಿಪಾಲ್ ಹಾಗೂ ಪುತ್ರ ಆನಂದ್‍ಪಾಲ್ ಅವರನ್ನು ಹಂತಕರು ಕೊಂದು ಪರಾರಿಯಾಗಿದ್ದಾರೆ.

ಮುಷಿದಾಭಾದ್ ಜಿಲ್ಲೆಯ ಜಿಯಾಜಂಗ್‍ನಲ್ಲಿರುವ ಅವರ ನಿವಾಸದಲ್ಲೇ ಈ ಭೀಕರ ಹತ್ಯೆ ನಡೆದಿದೆ. ಹರಿತವಾದ ಆಯುಧದಿಂದ ಮೂವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಸ್ಥಳದಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ಬಂಧುಪ್ರಕಾಶ್‍ಪಾಲ್ ಮತ್ತು ಬ್ಯೂಟಿಪಾಲ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಈ ಮೂವರ ಹತ್ಯೆಯಿಂದ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಮೂವರ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹಂತಕರ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.
ಮೊನ್ನೆಯಷ್ಟೇ ಮಹಾರಾಷ್ಟ್ರದಲ್ಲಿ ಬಿಜೆಪಿ ಕಾರ್ಪೊರೇಟರ್ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

Facebook Comments