ಆನ್ಲೈನ್ ಮೂಲಕ ಹಣ ವಾರ್ಗಾವಣೆ ಮಾಡುವವರಿಗೆ ಸಿಹಿಸುದ್ದಿ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬಯಿ, ಜು. 1- ಬ್ಯಾಂಕ್‍ನಲ್ಲಿ ಆರ್‍ಟಿಜಿಎಸ್(ರಿಯಲ್ ಟೈಮ್ ಗ್ರಾಸ್ ಸೆಟಲ್‍ಮೆಂಟ್) ಮತ್ತು ಎನ್‍ಇಎಫ್‍ಟಿ (ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾಸಫರ್) ಮೂಲಕ ಹಣ ವರ್ಗಾವಣೆ ಮಾಡುವವರಿಗೆ ಇದು ಸಿಹಿಸುದ್ದಿ. ಇಂದಿನಿಂದ ಈ ಸೇವೆಗಳು ಜಾರಿಗೆ ಬಂದಿದ್ದು ಗ್ರಾಹಕಸ್ನೇಹಿಯಾಗಿದೆ.

ಆರ್‍ಟಿಜಿಎಸ್ ಮತ್ತು ಎನ್‍ಇಎಫ್‍ಟಿಗಳ ಮೇಲೆ ಇಂದಿನಿಂದ ಯಾವುದೇ ಶುಲ್ಕಗಳನ್ನು ವಿಧಿಸದಿರಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ನಿರ್ಧರಿಸಿದೆ. ಇದರ ಲಾಭವನ್ನು ಆ ದಿನದಿಂದಲೇ ಗ್ರಾಹಕರಿಗೆ ವರ್ಗಾಯಿಸುವಂತೆ ಎಲ್ಲ ಬ್ಯಾಂಕ್‍ಗಳಿಗೂ ಸೂಚಿಸಿತ್ತು.

ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾಯಿಸುವ ಜನಪ್ರಿಯ ವಿಧಾನಗಳಾದ ಆರ್‍ಟಿಜಿಎಸ್ ಮತ್ತು ಎನ್‍ಇಎಫ್‍ಟಿಗಳ ಶುಲ್ಕಗಳನ್ನು ವಜಾಗೊಳಿಸುವ ಮೂಲಕ ಡಿಜಿಟಲ್ ವಹಿವಾಟನ್ನು ಉತ್ತೆಜಿಸುವುದು ಆರ್‍ಬಿಐನ ಉದ್ದೇಶ.

ಈ ಸೇವೆಗಳಿಗೆ ವಿಧಿಸುತ್ತಿದ್ದ ಶುಲ್ಕವನ್ನು ಆರ್‍ಬಿಐ ರದ್ದು ಮಾಡಿದ್ದು, ಬ್ಯಾಂಕ್‍ಳು ಗ್ರಾಹಕರಿಗೆ ವಿಧಿಸುತ್ತಿದ್ದ ಶುಲ್ಕಗಳನ್ನು ಇಳಿಸಲು ಸಹಾಯಕವಾಗುತ್ತದೆ ಎಂದು ಭಾರತೀಯ ಬ್ಯಾಂಕ್‍ಗಳ ಸಂಘಟನೆ ಅಧ್ಯಕ್ಷ ಸುನಿಲ್ ಮೆಹ್ತಾ ಹೇಳಿದ್ದಾರೆ.

ಬ್ಯಾಂಕ್ ಗ್ರಾಹಕರು 2 ಲಕ್ಷ ರೂ.ವರೆಗಿನ ಹಣ ವರ್ಗಾವಣೆಗೆ ಎನ್‍ಇಎಫ್‍ಟಿ ಮತ್ತು 2 ಲಕ್ಷ ಕ್ಕಿಂತ ಹೆಚ್ಚಿನ ಮೊತ್ತದ ವರ್ಗಾವಣೆಗೆ ಆರ್‍ಟಿಜಿಎಸ್ ಬಳಸುತ್ತಿದ್ದಾರೆ.

Facebook Comments

Sri Raghav

Admin